ಬೆಳ್ತಂಗಡಿ: ಇತ್ತೀಚೆಗೆ ನಡೆದ ಗಾಂಧಿಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ, ಸುಳ್ಯದ ಅಮರಶ್ರೀಬಾಗ್ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆದ ‘ಗಾಂಧಿ ಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ ಕಾರ್ಯಕ್ರಮದಲ್ಲಿ ಪರಮಪೂಜ್ಯ ಡಾ| ವೀರೇಂದ್ರ ಹೆಗ್ಡೆಯವರು ಆಶೀರ್ವಾದದಿಂದ ವ್ಯಸನಬಾಧಿತ ಕುಟುಂಬದವರ ಪಾಲಿಗೆ ಪ್ರೇರಕರಾದ ಮಡಂತ್ಯಾರು ಬಸವನಗುಡಿ ನಿವಾಸಿ ಜನಜಾಗೃತಿ ವಲಯ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ರವರಿಗೆ ಜಾಗೃತಿ ಅಣ್ಣ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ನಡೆಸಲ್ಪಡುವ ಸಮುದಾಯ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವಿಶೇಷ ಸಾಧನೆ ಮಾಡಿರುತ್ತಾರೆ ಹಾಗೂ ಸ್ವ ಪ್ರೇರಣೆಯಿಂದ 100ಕ್ಕೂ ಹೆಚ್ಚು ಮಂದಿ ಮದ್ಯವ್ಯಸನಿಗಳ ಮನಃಪರಿವರ್ತನೆ ಮಾಡಿ ವಿವಿಧ ಕಡೆಗಳಲ್ಲಿ ನಡೆದ ಮದ್ಯವರ್ಜನ ಶಿಬಿರಗಳಿಗೆ ದಾಖಲಿಸಿರುತ್ತಾರೆ. ಈ ಮೂಲಕ ವ್ಯಸನಬಾಧಿತ ಕುಟುಂಬದವರ ಪಾಲಿಗೆ ಪ್ರೇರಕರಾಗಿದ್ದಾರೆ. ಇವರ ವಿಶೇಷ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಜಾಗೃತಿ ಅಣ್ಣ ಪ್ರಶಸ್ತಿ ನೀಡಿ ಗೌರವಿಸಿದೆ.