25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ

ನಿಡ್ಲೆ: ಸರ್ಕಾರಿ ಪ್ರೌಢಶಾಲೆ ನಿಡ್ಲೆ ಇಲ್ಲಿ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.

ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ವಿಚಾರವಾಗಿ ನಿಡ್ಲೆ ಸಮುದಾಯ ಕೇಂದ್ರದ ಶ್ರೀಮತಿ ವಿನುತಾ ಮಾಹಿತಿ ನೀಡಿದರು. ಮಕ್ಕಳ ಸುರಕ್ಷತೆ ಮತ್ತು ಕಾನೂನು ಮಾಹಿತಿಯನ್ನು ಧರ್ಮಸ್ಥಳ ಠಾಣೆಯ ರೇಣುಕಾ ತಿಳಿಸಿದರು. ಪೋಷಕರೊಂದಿಗೆ ಮಕ್ಕಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ರಜಾ ಅವಧಿಯಲ್ಲಿ ಮಕ್ಕಳು ಮಾಡಬೇಕಾದ ಕೆಲಸವನ್ನು ಪೋಷಕರಿಗೆ ತಿಳಿಸಲಾಯಿತು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪುರುಷೋತ್ತಮ ಗೌಡ, ಉಪಾಧ್ಯಕ್ಷರಾದ ಶ್ರೀಮತಿ ವನಿತಾ, ಇತರ ಎಸ್ ಡಿಎಂಸಿ ಸದಸ್ಯರು, ಪೋಷಕರು, ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಶಾಂತಾ, ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶ್ರೀಮತಿ ಸುಚಿತ್ರ ರವರು ಸ್ವಾಗತಿಸಿ ನಿರ್ವಹಿಸಿದರು. ಶರತ್ ಕುಮಾರ್ ವಂದಿಸಿದರು.

Related posts

ಹರೀಶ್ ಪೂಂಜರ ಪರ ಮತಯಾಚನೆಗೆ ಬಿರ್ವೆರ್ ಕುಡ್ಲದ ಸ್ಥಾಪಕ ಉದಯ್ ಪೂಜಾರಿ ಬಳ್ಳಾಲ್ ಬಾಗ್

Suddi Udaya

ಹೊಕ್ಕಾಡಿಗೋಳಿ ಶಾಲಾ ಪ್ರಾರಂಭೋತ್ಸವ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ” ಗಣಪತಿ ಎನ್ನ ಪಾಲಿಸೋ..” ಭಕ್ತಿಗೀತೆ ಬಿಡುಗಡೆ

Suddi Udaya

ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿ ಆಯ್ಕೆ

Suddi Udaya

ಚಾರ್ಮಾಡಿ : ಮಿನಿ ಬಸ್ ಪಲ್ಟಿ, ನಾಲ್ಕು ಮಂದಿ ಗಂಭೀರ ಹಲವರಿಗೆ ಗಾಯ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವಿಂಶತಿ ಸಂಭ್ರಮ ಹಾಗೂ ಕಾಲೇಜಿನ ವಾರ್ಷಿಕೋತ್ಸವ

Suddi Udaya
error: Content is protected !!