24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಸ. ಹಿ. ಪ್ರಾ. ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ರಚನೆ: ಅಧ್ಯಕ್ಷರಾಗಿ ಕೇಶವ ಗೌಡ , ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಸಾಲ್ಯಾನ್

ಕೊಯ್ಯೂರು: ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆದೂರು ಪೆರಲ್ ಇಲ್ಲಿಯ ಹಳೆ ವಿದ್ಯಾರ್ಥಿಗಳ ಮತ್ತು ಅಮೃತ ಮಹೋತ್ಸವ ಸಮಿತಿಯ ಹಾಗೂ ಊರವರ ಸಭೆಯು ಇತ್ತೀಚೆಗೆ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಮುಂದಿನ ವರ್ಷ ಶಾಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿರುವುದರಿಂದ ಈ ಶಾಲೆಯಲ್ಲಿ ಕಲಿತಂತಹ ಎಲ್ಲಾ ವಿದ್ಯಾರ್ಥಿಗಳನ್ನು ಒಗ್ಗುಡಿಸಲು ಹಳೆ ವಿದ್ಯಾರ್ಥಿಗಳ ಸಂಘವನ್ನು ರಚಿಸುವುದು ಉತ್ತಮವೆಂಬ ಎಲ್ಲರ ಅಭಿಪ್ರಾಯದಂತೆ ಸುಮಾರು 74 ವರ್ಷಗಳ ಇತಿಹಾಸವುಳ್ಳ ಈ ಶಾಲೆಯಲ್ಲಿ ಪ್ರಥಮ ಬಾರಿಗೆ ಹಳೆ ವಿದ್ಯಾರ್ಥಿ ಸಂಘವನ್ನು ರಚಿಸಲಾಯಿತು.


ಅದರಂತೆ ಹಳೆ ವಿದ್ಯಾರ್ಥಿ ಸಂಘದ ಪ್ರಥಮ ಅಧ್ಯಕ್ಷರಾಗಿ ಕೇಶವ ಗೌಡ ಕಂಗಿತ್ತಿಲು, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಸಾಲ್ಯಾನ್, ಗೌರವಾಧ್ಯಕ್ಷರಾಗಿ ಜಯರಾಮ್ ಭಟ್ ಕೋರ್ಯಾರ್, ಸಂಚಾಲಕರಾಗಿ ಶಾಲಾ ಮುಖ್ಯೋಪಾಧ್ಯಾಯರಾದ ಬಳಿರಾಮ ಲಮಾಣಿ, ಕೋಶಾಧಿಕಾರಿಯಾಗಿ ಲೋಕೇಶ್ ಗೌಡ ಕೋರ್ಯಾರು, ಉಪಾಧ್ಯಕ್ಷರುಗಳಾಗಿ ಕೂಸಪ್ಪ ಗೌಡ ನಾಗನೋಡಿ ಹಾಗೂ ಮಾಯಿಲಪ್ಪ ಗೌಡ ಉಮಿಯ, ಕಾರ್ಯದರ್ಶಿಗಳಾಗಿ ಮೋಹನ ಪೂಜಾರಿ ಬಜ , ಶ್ರೀಮತಿ ಅನುಷಾ ಕೆರೆ ಹಿತ್ತಿಲು, ಶ್ರೀಮತಿ ಭಾರತಿ ಬೊಳೋಳಿ, ಕುಮಾರಿ ವೀಣಾ ಕೋಡ್ಯೆಲು, ಪದ್ಮನಾಭ ಗೌಡ ಬೊಳೋಳಿ, ಇಸುಬು ಸುಣ್ಣಾಲು, ಸಂಘಟನಾ ಕಾರ್ಯದರ್ಶಿಗಳಾಗಿ ದಿಲೀಪ್ ಕುಮಾರ್ ಮೈಂದ ಕೋಡಿ, ಚಂದ್ರಶೇಖರ ಕೋರಿಯಾರು, ಸೇಸಪ್ಪ ಅಡಿಲು, ರವಿ ಪಾಂಬೇಲು ಮೊದಲಾದವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಸಭೆಯಲ್ಲಿ ಊರಿನ ಹಿರಿಯರು ಶಾಲೆಯ ಹಳೆ ವಿದ್ಯಾರ್ಥಿಗಳಾದ ಪ್ರಚಂಡ ಭಾನು ಭಟ್ ಪಾಂಬೆಲ್, ಅಶೋಕ್ ಕುಮಾರ್ ಅಗ್ರಶಾಲೆ, ಬಾಲಕೃಷ್ಣ ಪೂಜಾರಿ ಬಜ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ವಿನಯ ಕುಮಾರ್ ಕೆ, ಗ್ರಾ ಪಂ ಸದಸ್ಯರು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಲೋಕೇಶ್ ಗೌಡ ಪಾಂಬೇಲು, ಕಾರ್ಯಾಧ್ಯಕ್ಷ ಮಹಮ್ಮದ್ ಹಾರೂನ್ ಬಜಿಲ, ಗ್ರಾ ಪಂ ಉಪಾಧ್ಯಕ್ಷ ಹರೀಶ ಗೌಡ ಬಜಿಲ , ಸದಸ್ಯರಾದ ಇಸುಬು ಸುಣ್ಣಾಲು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಗೌಡ, ಎಸ್‌ಡಿಎಂ ಕಾಲೇಜಿನ ಉಪನ್ಯಾಸಕರಾದ ದಿವಾ ಕೊಕ್ಕಡ, ಬೈಪಾಡಿ ಪ್ರೌಢಶಾಲಾ ಅಧ್ಯಾಪಕರಾದ ವಿಜಯಕುಮಾರ್ ಎಂ. ಅಮೃತ ಮಹೋತ್ಸವ ಸಮಿತಿಯ ಪದಾಧಿಕಾರಿಗಳಾದ ಕೇಶವ ಗೌಡ ಕೊಂಗೊಜೆ, ವೆಂಕಣ್ಣ ಆದೂರು ಪೆರಲ್ ಮತ್ತು ಹಳೆ ವಿದ್ಯಾರ್ಥಿಗಳು ಹಾಗೂ ಊರವರು ಉಪಸ್ಥಿತರಿದ್ದರು.


ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಬಳಿರಾಮ ಲಮಾಣಿ ಅವರು ಸ್ವಾಗತಿಸಿ, ನೂತನ ಕಾರ್ಯದರ್ಶಿಯಾದ ಪಿ ಚಂದ್ರಶೇಖರ್ ಸಾಲ್ಯಾನ್ ವಂದಿಸಿದರು.

Related posts

ಸವಣಾಲು : ಕೋಟಿ ಚೆನ್ನಯ್ಯ ಸೈಬರ್ ಸೆಂಟರ್ ಶುಭಾರಂಭ

Suddi Udaya

ಪಿಲಿಚಂಡಿಕಲ್ಲು ನಿವಾಸಿ ಶೇಕ್ ಇಮಾಮ್ ಸಾಹೇಬ್ ಮನೆಗೆ ಬಡಿದ ಸಿಡಿಲು: ಸುಟ್ಟು ಹೋದ ಮನೆಯ ವಿದ್ಯುತ್ ಸಂಪರ್ಕ, ಮನೆಯ ಗೋಡೆಗಳಿಗೆ ಹಾನಿ

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಲ್ಯಾನ್ಸಿ ಫೆರ್ನಾಂಡಿಸ್ ಇಸ್ರೇಲ್ ನಲ್ಲಿ ನಿಧನ

Suddi Udaya

ಕಳೆಂಜ : ಜನನಿ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಮಾ.1: ಗ್ರಾ.ಪಂ. ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಕೈಗೆ ಕಪ್ಪು ಪಟ್ಟಿ ಧರಿಸಿ ವಿಭಿನ್ನ ಪ್ರತಿಭಟನೆ

Suddi Udaya

ಜೆಸಿಐ ಕೊಕ್ಕಡ ಕಪಿಲ ಘಟಕದ ವತಿಯಿಂದ ವಿಶಿಷ್ಟ ಶ್ರೇಣಿಯಲ್ಲಿ ಅಂಕಗಳನ್ನು ಪಡೆದಿರುವ ಕುಮಾರಿ ಮಾನಸರಿಗೆ ಸನ್ಮಾನ

Suddi Udaya
error: Content is protected !!