April 11, 2025
ಗ್ರಾಮಾಂತರ ಸುದ್ದಿ

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವದ ಬೆಳ್ಳಿಹಬ್ಬ ಮಹೋತ್ಸವ:ಆಮಂತ್ರಣ ಪತ್ರಿಕೆ ಬಿಡುಗಡೆ

ನಾವೂರು : ಕಳೆದ 24 ವರ್ಷಗಳ ಹಿಂದೆ ನವೋದಯ ಯುವಕ ಮಂಡಲದ ಸದಸ್ಯರುಗಳ ಧಾರ್ಮಿಕ ಚಿಂತನೆಯೊಂದಿಗೆ ನಾವೂರು ಸರಕಾರಿ ಶಾಲೆಯಲ್ಲಿ ಪ್ರಾರಂಭಗೊಂಡಿದೆ.
ಪ್ರಸ್ತುತ ವರ್ಷದ ಕಾರ್ಯಕ್ರಮವು ಅ. 20ರ ಶುಕ್ರವಾರ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವದ ಬೆಳ್ಳಿಹಬ್ಬ ಮಹೋತ್ಸವ ಶಾರದಾ ಪೂಜೆ ನಡೆಯಲಿದೆ.
ಇದರ ಆಮಂತ್ರಣ ಪತ್ರಿಕೆಯನ್ನು ಅ.8 ರಂದು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗೌರವ ಸಲಹೆಗಾರರು, ಮಾರ್ಗದರ್ಶರಾದ ಡಾ. ಪ್ರದೀಪ್ ಆಟಿಕುಕ್ಕೆ ಬಿಡುಗಡೆ ಮಾಡಿ ಶುಭಹಾರೈಸಿದರು.


25ನೇ ವರ್ಷದ ಅಂಗವಾಗಿ ಡ್ಯಾಝಲ್ ಸ್ಟುಡಿಯೋ ಮೂಲ್ಕಿ ಅರ್ಪಿಸುವ ಮಯೋಡ್ ಮೆರೆಯಿನ ಸತ್ಯೋಲ್ನ ಕಥೆ “ಕಾರ್ಣಿಕದ ಗತ ವೈಭವ” ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ವಾಗ್ಮಿ, ಧಾರ್ಮಿಕ ಚಿಂತಕಿ ಅಕ್ಷಯ ಗೋಖಲೆ ಕಾರ್ಕಳ, ಇವರು ಉಪನ್ಯಾಸ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಹರೀಶ್ ಕಾರಿಂಜ, ಉಪಾಧ್ಯಕ್ಷರಾದ ಪ್ರಮೋದ್ ಸಾಲ್ಯಾನ್ ಮೋರ್ತಾಜೆ, ಕಾರ್ಯದರ್ಶಿ ಬಾಲಕೃಷ್ಣ, ಸದಸ್ಯರುಗಳಾದ ಪ್ರದೀಪ್ ಗೌಡ ನಾಗಜೆ, ಕೃಷ್ಣಪ್ಪ ಪೂಜಾರಿ ಬೊಂತ್ರಪಾಲು, ಉದಯ ಬಂಗೇರ ಬೋಲೋಟ್ಟು, ಮೋಹನ ತಿಮರಡ್ಡ, ನವೀನ್ ಪೂಜಾರಿ, ವಸಂತ ಗೌಡ, ಶ್ರೀಮತಿ ಸುಮಾ ಕಿರ್ನಡ್ಕ ಉಪಸ್ಥಿತರಿದ್ದರು.

Related posts

ಜ.1: ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್, ಪಟ್ಟಣ ಪಂಚಾಯತ್ ಬೆಳ್ತಂಗಡಿ ಸಹಭಾಗಿತ್ವದಲ್ಲಿ ಬೃಹತ್ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ಶ್ರೀ ರಾಮ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಡಿ.ಎಚ್.ಒ ಭೇಟಿ

Suddi Udaya

ವಾಲಿಬಾಲ್ ಪಂದ್ಯಾಟ: ಕೊಯ್ಯೂರು ಸರಕಾರಿ ಪ್ರೌಢ ಶಾಲೆಯ ಹುಡುಗರ ತಂಡ ಪ್ರಥಮ ಸ್ಥಾನ

Suddi Udaya

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ವಾಣಿ ಕಾಲೇಜಿಗೆ ಪ್ರಾಜೆಕ್ಟರ್ ಹಸ್ತಾಂತರ ಮತ್ತು ರಾಷ್ಟ್ರೀಯ ಅಧ್ಯಕ್ಷರ ಭೇಟಿ

Suddi Udaya
error: Content is protected !!