ಉಜಿರೆ: ಶ್ರೀ ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಬ್ರಹ್ಮಗಿರಿ ಗೋವಿನತೋಟ ಪುದು ಬಂಟ್ವಾಳ ಮತ್ತು ಗೋ ಸೇವಾ ಗತಿವಿಧಿ ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ಧರ್ಮ ರಕ್ಷಾರ್ಥರಾಷ್ಟ್ರ ರಕ್ಷಾರ್ಥ ಗೊರಕ್ಷಾರ್ಥ ನ.14 ರಿಂದ 22 ರ ವರೆಗೆ ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಜ್ಞ ಮತ್ತು ಗೋ ನವರಾತ್ರಿ ಉತ್ಸವ ರಾಷ್ಟ್ರಹಿತಕ್ಕಾಗಿ ನಾರಾಯಣ ಕವಚ ಯಾಗ ನಡೆಯಲಿದೆ.
ಇದರ ಪೂರ್ವಭಾವಿಯಾಗಿ ಸೆ.24 ರಿಂದ ನ.8ರ ವರೆಗೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯಲ್ಲಿ ಗೋರಥ ಸಂಚಾರಿಸಲಿದ್ದು ಅ.14 ರಂದು ಕಾರ್ಕಳದಿಂದ ವೇಣೂರಿಗೆ ರಥಯಾತ್ರೆ ಪ್ರವೇಶ ಮಾಡಲಿದ್ದು ಅ.15ರಂದು ವೇಣೂರಿನಿಂದ ಬೆಳ್ತಂಗಡಿಗೆ ಅ.16 ಬೆಳ್ತಂಗಡಿಯಿಂದ ಉಜಿರೆಗೆ ಅ.17 ರಂದು ಉಜಿರೆಯಿಂದ ನೆಲ್ಯಾಡಿಗೆ ಸಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.