ಪೆರಿಂಜೆ : ಹೊಸಂಗಡಿ ಮಂಡಲ ಪಂಚಾಯತ್ ಪ್ರಥಮ ಮಂಡಲ ಪ್ರಧಾನ ದಿವಂಗತ ಎ. ಗುಣಪಾಲ್ ಜೈನ್ ಎರ್ಮೋಡಿ ಇವರ ಸ್ಮರಣಾರ್ಥ ಪಡ್ಡಂದಡ್ಕ – ಕಟ್ಟೆ ರಸ್ತೆಗೆ ಗುಣಪಾಲ್ ಜೈನ್ ರಸ್ತೆ ಎಂದು ನಾಮಕರಣ ಮಾಡಿ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಅ.8ರಂದು ಅನಾವರಣಗೊಳಿಸಿದರು.
ದಿವಂಗತ ಗುಣಪಾಲ್ ಜೈನ್ ರವರು ಹೊಸಂಗಡಿ ಗ್ರಾಮ ಪಂಚಾಯತ್ ನ ಮೊದಲ ಮಂಡಲ ಪ್ರಧಾನರಾಗಿ ಸರ್ವತೋಮುಖ ಅಭಿವೃದ್ಧಿಯಲ್ಲಿ ತನ್ನನು ತಾನು ತೊಡಗಿಸಿಕೊಂಡವರು. ಜಾತಿ ಮತ ಭೇದವಿಲ್ಲದೆ ಎಲ್ಲರೊಂದಿಗೆ ಬೆರತು ಸೇವೆ ಮಾಡಿದವರು ಮತ್ತು ಕೊಡುಗೈ ದಾನಿಯಾಗಿದ್ದರು. ಯುವಕರ ತಂಡಗಳನ್ನು ಕಟ್ಟಿ ಶ್ರಮದಾನದ ಮೂಲಕ ಶಾಲೆಗಳ ಆಟದ ಮೈದಾನಗಳನ್ನು ಅಭಿವೃದ್ಧಿ ಪಡಿಸಿದವರು.
ಪಡ್ಡಂದಡ್ಕ ಭಜನಾ ಮಂಡಲ ಮಹಿಳಾ ಮಂಡಲ,ಯುವಕ ಮಂಡಲ, ಪಡ್ಡಂದಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸ್ಥಾಪಿಪಕ ಸದಸ್ಯರು, ಬಡಕೋಡಿ ಗ್ರಾಮದ ಶಾಲೆ ಮತ್ತು ಪೆರಿಂಜೆ ಶಾಲೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
ವೇಣೂರು ಭಗವಾನ್ ಬಾಹುಬಲಿ ಗೆ ಮಹಾಮಸ್ತಕಾಭಿಷೇಕದ ಪ್ರಧಾನ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ದುಡಿದವರು.ಅವರ ಆದರ್ಶವನ್ನು ಅಮರವಾಗಿಡಲು ಇಂದು ರಸ್ತೆಗೆ ಹೆಸರನ್ನಿಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಎ. ಜೀವಂಧರ್ ಕುಮಾರ್ ಧರ್ಮದರ್ಶಿಗಳು ಶ್ರೀ ಕ್ಷೇತ್ರ ಪಡ್ಯಾರಬೆಟ್ಟ, ಉದ್ಯಮಿ ವಿಕಾಸ್ ಜೈನ್, ದಿವಂಗತ ಗುಣಪಾಲ್ ಜೈನ್ ರವರ ಮಿತ್ರ ಶಂಕರ್ ಭಟ್ ಬಾಲ್ಯ ದಕ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್,ನೂರುಲ್ ಹುಧಾ ಜುಮ್ಮಾ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಕೆ, ಆನಂದ ಕೋಟ್ಯಾನ್, ಮಹಮ್ಮದ್ ಎಚ್ ವೇಣೂರು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕರುಣಾಕರ ಪೂಜಾರಿ, ಹೇಮಾ ವಸಂತ್, ಲತಾ ಪೆರಿಂಜೆ, ಅಲಿಯಬ್ಬ ಬಲ್ಲಂಗೇರಿ, ಖಾಲಿದ್ ಪುಲಬೆ,ದಿವಂಗತರ ಧರ್ಮ ಪತ್ನಿ ಸರೋಜಾ ಜೈನ್, ಮಗಳು ಡಾ ಪ್ರಣಮ್ಯ ಜೈನ್, ಅಳಿಯ ಡಾ ಮಹಾವೀರ ಜೈನ್ , ಶರ್ಮಿತ್ ಕುಮಾರ್ ಎರ್ಮೋಡಿ, ಮತ್ತು ದಿವಂಗತರ ಕುಟುಂಬಸ್ಥರು ಉಪಸ್ಥಿತರಿದ್ದರು.
ವಿದ್ಯಾನಂದ ಕುಮಾರ್ ಜೈನ್ ಎರ್ಮೋಡಿ ವಂದಿಸಿದರು.