September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ ನೇರ್ತನೆಯಲ್ಲಿ ಕಾಡಾನೆ ದಾಳಿ :ಕೃಷಿಗೆ ಹಾನಿ   

 ಉಜಿರೆ:  ಧರ್ಮಸ್ಥಳ ಗ್ರಾಮದ ನೇರ್ತನೆಯಲ್ಲಿ ಕಾಡಾನೆಗಳು ನಿರಂತರವಾಗಿ ಕೃಷಿಭೂಮಿಗೆ ನುಗ್ಗಿ ಕೃಷಿಗೆ ಹಾನಿ ಯುಂಟುಮಾಡುತ್ತಿದೆ.ಕಳೆದ ಎರಡು ಮೂರು ದಿನಗಳಿಂದ ಕಾಡಾನೆಗಳ ಉಪಟಳ ತೀವ್ರಗೊಂಡಿದೆ.ನೇರ್ತನೆ ನಿವಾಸಿ ತಂಗಚ್ಚನ್ ಎನ್.ಪಿ  ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಹತ್ತಕ್ಕೂ ಅಧಿಕ ತೆಂಗಿನ ಗಿಡಗಳನ್ನು ಸಂಪೂರ್ಣವಾಗಿ ನಾಶಗೊಳಿಸಿದೆ. ಇಲ್ಲಿನ ನಿವಾಸಿ ಜೋ ಸೆಫ್. ಪಿ.ಕೆ ಎಂಬವರ ತೋಟಕ್ಕೂ ಕಾಡಾನೆ ನುಗ್ಗಿದೆ, ಇಲ್ಲಿಯೂ ಅಡಕೆ ಹಾಗೂ ತೆಂಗಿನ ಗಿಡಗಳಿಗೆ ಹಾನಿಯುಂಟು ಮಾಡಿದೆ. ಇಲ್ಲಿ ಸಮೀಪದ ಇತರ ತೋಟಗಳಿಗೂ ಕಾಡಾನೆಗಳು ನುಗ್ಗುತ್ತಿದ್ದು ಕೃಷಿಗೆ ಹಾನಿಯುಂಟುಮಾಡುತ್ತಿದೆ. ಒಂದು ಮರಿಯಾನೆ ಸಹಿತ ಮೂರು ಆನೆಗಳು ಈ ಹಿಂಡಿ ನಲ್ಲಿದ್ದು  ಸಂಜೆಯಾಗುವಾಗಲೇ ಕಾಡಾನೆಗಳು ತೋಟಗಳಿಗೆ ನುಗ್ಗುತ್ತಿದೆ.ಹಗಲು ಹೊತ್ತಿನಲ್ಲಿಯೂ ಕಾಡಾನೆಗಳು ತೋಟಗಳ ಪರಿಸರದಲ್ಲಿ ಕಾಣಿಸುತ್ತಿದೆ. ಇದು ಜನರಲ್ಲಿ ಭಯ ಮೂಡಿಸಲು ಕಾರಣವಾಗಿದೆ.  ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳುವಂತೆ ಕೃಷಿಕರು ಒತ್ತಾಯಿಸುತ್ತಿದ್ದಾರೆ

Related posts

ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ‘ಚಿನ್ನದಂತ ಅಪ್ಪ ನನ್ನ ಅಪ್ಪ’ ವಿಶೇಷ ಅನುಬಂಧ ಕಾರ್ಯಕ್ರಮದ ಬಹುಮಾನ ವಿತರಣೆ

Suddi Udaya

ಕಲ್ಲೇರಿ ಐಸಿರಿ ಮಹಿಳಾ ಮಂಡಳಿಯಿಂದ ಮಹಿಳಾ ದಿನಾಚರಣೆ ಮತ್ತು ಶ್ರಮದಾನ

Suddi Udaya

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಓರಿಯಂಟೇಷನ್ ಕಾರ್ಯಕ್ರಮ

Suddi Udaya

ನ.16: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ರೋಗ ತಪಾಸಣಾ ಶಿಬಿರ

Suddi Udaya

ಜಸ್ಟ್ ರೈಡ್ ನೋಡುತ್ತೇನೆಂದು ಬೈಕ್ ತೆಗೆದುಕೊಂಡಾತ ವಾಪಸ್ ಬರಲೇ ಇಲ್ಲ: ಇತ್ತೆ ಬರುವೆ ಎಂದು ಹೇಳಿ ಹೋದಾತನೂ ಇಲ್ಲ…ಬೈಕೂ ಇಲ್ಲ…:ಕಾಶಿಪಟ್ಣದ ಯುವಕ ಇಶಾನ್ ಪೂಜಾರಿಯರಿಂದ ಮೂಡಬಿದ್ರೆ ಪೋಲೀಸರಿಗೆ ದೂರು: ಬೈಕ್ ಸಹಿತ ಇಶಾನ್ ಶೆಟ್ಟಿ ಉಚ್ಚಿಲ್ ಪೊಲೀಸರ ವಶ

Suddi Udaya

ಪಡಂಗಡಿಯಲ್ಲಿ ಶ್ರೀ ಕಟಿಲೇಶ್ವರಿ ಟ್ರೇಡರ್ಸ್ ಶುಭಾರಂಭ

Suddi Udaya
error: Content is protected !!