23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗೌಸಿಯಾ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ಮಹಾಸಭೆ: ನೂತನ ಅಧ್ಯಕ್ಷರಾಗಿ ಅಯ್ಯೂಬ್ ಸಅದಿ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಮುರ ಆಯ್ಕೆ

ನಾವೂರು: ಗೌಸಿಯಾ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ಮುರ – ನಾವೂರು ಇದರ ಮಹಾ ಸಭೆಯು ಮುರ ಮುಹಿಯುದ್ಧೀನ್ ಜುಮಾ ಮಸ್ಜಿದ್‌ನಲ್ಲಿ ಅ. 8 ರಂದು ರಾತ್ರಿ ಜಮಾತ್ ಅಧ್ಯಕ್ಷರಾದ ಎನ್. ಕೆ. ಹಸೈನಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಖತೀಬರಾದ ಬಶೀರ್ ಸಅದಿ ಉಸ್ತಾದ್ ರವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ಮತ್ತು ದುಆ ನಡೆಯಿತು. ನಿರ್ಗಮನ ಕಾರ್ಯದರ್ಶಿ ಶಮೀಮ್ ಮೊಹಿದ್ದೀನ್ ಪಾರ್ನಡ್ಕ ಸ್ವಾಗತಿಸಿದರು. ಅಯ್ಯೂಬ್ ಸಅದಿ ಉದ್ಘಾಟಿಸಿದರು. ಅಬ್ದುರ್ರಝಾಕ್ ನಾವೂರು ವರದಿ ವಾಚಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.

ಗೌರವಾಧ್ಯಕ್ಷರಾಗಿ ಅಬ್ದುಲ್ ರಝಾಕ್ ನಾವೂರು, ಅಧ್ಯಕ್ಷರಾಗಿ ಅಯ್ಯೂಬ್ ಸಅದಿ ಕೋಡಿಕನ್ನಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹೀಂ ಮುರ, ಉಪಾಧ್ಯಕ್ಷರುಗಳಾಗಿ ಇಸ್ಮಾಯಿಲ್ ಕಿರ್ನಡ್ಕ ಹಾಗೂ ಉಸ್ಮಾನ್ ಅಲ್ಲಾಜೆ, ಜೂತೆ ಕಾರ್ಯದರ್ಶಿಗಳಾಗಿ ಶಮೀಮ್ ಮೊಹಿದ್ದೀನ್ ಪಾರ್ನಡ್ಕ, ಉಮೈರ್, ಕೋಶಾಧಿಕಾರಿಯಾಗಿ ಹಮೀದ್ ಎನ್.ಎಚ್ ಸಹಿತ 25 ಸದಸ್ಯರನ್ನು ಆರಿಸಲಾಯಿತು. 7 ವರ್ಷಗಳ ಕಾಲ ಕಾರ್ಯದರ್ಶಿಯಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಸರ್ವರ ಮೆಚ್ಚುಗೆಗೆ ಪಾತ್ರರಾದ ಶಮೀಮ್ ಪಾರ್ನಡ್ಕ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸ್ವಲಾತ್‌ನೊಂದಿಗೆ ಕಾರ್ಯಕ್ರಮ ಮುಗಿಸಿ ತಬರ್ರುಕ್ ವಿತರಿಸಲಾಯಿತು.

Related posts

ಮುಂಡಾಜೆ : ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

Suddi Udaya

ಮುಂಡಾಜೆ ಸೀಟು ಬಳಿ ಧರೆಗುರುಳಲು ಸಿದ್ಧಗೊಂಡ ಮರಗಳು

Suddi Udaya

ಅರಸಿನಮಕ್ಕಿ: ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ: ಚಂಡಿಕಾ ಹೋಮ, ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ

Suddi Udaya

ಕು.ಸೌಜನ್ಯಳ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಭೇಟಿ

Suddi Udaya

ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ಶಿವಯೋಗಿ ಸಿದ್ಧರಾಮ ಜಯಂತಿ ಆಚರಣೆ

Suddi Udaya

ಫೆ.4 – 5: ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ನವಗುಳಿಗ ಕ್ಷೇತ್ರದಲ್ಲಿ 10ನೇ ವರ್ಷದ ಜಾತ್ರಾ ಮಹೋತ್ಸವ

Suddi Udaya
error: Content is protected !!