September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ನಾವೂರು :   ಕಳೆದ 24 ವರ್ಷಗಳ ಹಿಂದೆ ನಾವೂರಿನ ನವೋದಯ ಯುವಕ ಮಂಡಲದ ಸದಸ್ಯರ ಧಾರ್ಮಿಕ ಚಿಂತನೆಯೊಂದಿಗೆ ನಾವೂರು ಸರಕಾರಿ ಶಾಲೆಯಲ್ಲಿ ಪ್ರಾರಂಭಗೊಂಡ  ಸಾರ್ವಜನಿಕ ಶ್ರೀ ಶಾರದೋತ್ಸವದ ಬೆಳ್ಳಿ ಹಬ್ಬ  ಮಹೋತ್ಸವವು  ಅ.20 ರಂದು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಲಿದ್ದು  ಅದರ  ಆಮಂತ್ರಣ ಪತ್ರಿಕೆಯನ್ನು ಅ.8 ರಂದು  ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗೌರವ ಸಲಹೆಗಾರರು, ಮಾರ್ಗದರ್ಶಕ ಡಾ. ಪ್ರದೀಪ್ ಆಟಿಕುಕ್ಕೆ ಬಿಡುಗಡೆ ಗೊಳಿಸಿ  ಶುಭಹಾರೈಸಿದರು.

 ಶ್ರೀ ಶಾರದೋತ್ಸವದ ಬೆಳ್ಳಿಹಬ್ಬದ  ಅಂಗವಾಗಿ ಡ್ಯಾಝಲ್ ಸ್ಟುಡಿಯೋ ಮೂಲ್ಕಿ ಅರ್ಪಿಸುವ “ಮಾಯೋಡ್ ಮೆರೆಯಿನ ಸತ್ಯೋಲ್ನ ಕಥೆ :ಕಾರ್ಣಿಕದ ಗತ ವೈಭವ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ವಾಗ್ಮಿ, ಧಾರ್ಮಿಕ ಚಿಂತಕ  ಕಾರ್ಕಳದ ಅಕ್ಷಯ ಗೋಖಲೆ  ಉಪನ್ಯಾಸ ನೀಡಲಿದ್ದಾರೆ.


ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಹರೀಶ್ ಕಾರಿಂಜ, ಉಪಾಧ್ಯಕ್ಷರಾದ ಪ್ರಮೋದ್ ಸಾಲ್ಯಾನ್ ಮೋರ್ತಾಜೆ, ಕಾರ್ಯದರ್ಶಿ ಬಾಲಕೃಷ್ಣ, ಸದಸ್ಯರುಗಳಾದ ಪ್ರದೀಪ್ ಗೌಡ ನಾಗಜೆ, ಕೃಷ್ಣಪ್ಪ ಪೂಜಾರಿ ಬೊಂತ್ರಪಾಲು, ಉದಯ ಬಂಗೇರ ಬೋಲೋಟ್ಟು, ಮೋಹನ ತಿಮರಡ್ಡ, ನವೀನ್ ಪೂಜಾರಿ, ವಸಂತ ಗೌಡ, ಶ್ರೀಮತಿ ಸುಮಾ ಕಿರ್ನಡ್ಕ ಉಪಸ್ಥಿತರಿದ್ದರು.

Related posts

ಉಜಿರೆ ಶ್ರೀ ಧ ಮಂ ಸ್ವಾಯತ್ತ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಕಾಳಿದಾಸ ಜಯಂತಿ ಆಚರಣೆ

Suddi Udaya

ನೆರಿಯ ಸೆಂಟ್ ತೋಮಸ್ ಪ್ರೌಢಶಾಲೆ ಶೇ 100 ರ ಸಾಧನೆಗೆ ಸನ್ಮಾನ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಶಶಿಧರ್ ಶೆಟ್ಟಿ ನವಶಕ್ತಿ ಆಯ್ಕೆ

Suddi Udaya

ಇಂದಬೆಟ್ಟು: ಬೆಳಕು ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಕೈಲಾರು ರಾಜಗೋಪಾಲ್ ಭಟ್ ರಿಂದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಗೆ ವಾಸ್ತು ಗಿಡ ಸಮರ್ಪಣೆ

Suddi Udaya

ಅದೂರುಪೇರಾಲ್ ಸ.ಹಿ.ಪ್ರಾ. ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರಾಗಿ ವಿನಯ ಕೆ.

Suddi Udaya
error: Content is protected !!