ಆರಂಬೋಡಿ: ಎಸ್. ಕೆ. ಫ್ರೆಂಡ್ಸ್ ಹೊಕ್ಕಾಡಿಗೋಳಿ ನೀರಪಲ್ಕೆ ಇದರ ಆಶ್ರಯದಲ್ಲಿ, ಅನಾರೋಗ್ಯ ಪೀಡಿತ ಬಡಕುಟುಂಬಗಳಿಗೆ ಸಹಾಯಧನ ನೀಡುವ ಬಗ್ಗೆ ಹಮ್ಮಿಕೊಂಡಿರುವ ಕ್ರೀಡಾಕೂಟ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ನೀರಪಲ್ಕೆ ಮೈದಾನದಲ್ಲಿ ಜರಗಿತು.
ಪಂದ್ಯಾಟ ಉದ್ಘಾಟನೆಯನ್ನು ಕೃಷ್ಣಪ್ರಸಾದ್ ಅಸ್ರಣ್ಣರು ಶ್ರೀ ಕ್ಷೇತ್ರ ಪೂಂಜ ನೆರವೇರಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಎಸ್. ಕೆ. ಫ್ರೆಂಡ್ಸ್ ಅಧ್ಯಕ್ಷರಾದ ನವೀನ್ ಕೂಡುರಸ್ತೆ ವಹಿಸಿದರು.
ಈ ಸಂದರ್ಭದಲ್ಲಿ ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಅಧ್ಯಕ್ಷರಾದ ರಶ್ಮಿತ್ ಶೆಟ್ಟಿ ನೋಣಾಲುಗುತ್ತು, ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಪ್ರಭಾಕರ್. ಎಚ್, ರಾಘವೇಂದ್ರ ಭಟ್ , ಅಸಿಸ್ಟಂಟ್ ಗವರ್ನರ್ ರೋಟರಿ ಜಿಲ್ಲೆ, ಸಿದ್ದಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷರು ದಿನೇಶ್ ಸುಂದರ ಶಾಂತಿ, ಅನಿಲ್ ಕುಮಾರ್ ಪೆರಿಂಜೆ, ಆರಂಬೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ. ಎಸ್. ಶೆಟ್ಟಿ, ರಮೇಶ್ ಮಂಜಿಲ, ಸಂತೋಷ್ ಮಂಜಿಲ, ಸುದರ್ಶನ್ ಶೆಟ್ಟಿ ಹಕ್ಕೇರಿ, ಪ್ರದೀಪ್ ಪೂಜಾರಿ ಉದ್ದೋಟ್ಟು, ಶ್ರೀಮತಿ ಲೀಲಾ ಸುರೇಶ್, ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಂಜಾಡಿ, ವೀರಪ್ಪ ಪರವ, ಕೃಷ್ಣ ಪೂಜಾರಿ ಕೈರೋಡಿ, ಮಹಮ್ಮದ್ ಮುಸ್ತಾಫಾ, ಪ್ರದೀಪ್ ಪೂಜಾರಿ ಕುಕ್ಕಿಪಾಡಿ, ತ್ರಿಷಾಲ್ ಶೆಟ್ಟಿ ಕುರುಡಾಡಿ, ಸುದರ್ಶನ್ ಮಂಜಿಲ ಆರ್ವಿನ್ ಮಾಡ್ತಾ ಕೈರೋಳಿ, ಇನ್ನಿತರರು ಉಪಸ್ಥಿತರಿದ್ದರು.
ಒಟ್ಟು 84 ತಂಡಗಳು ಭಾಗವಹಿಸಿದ್ದು ಬಹಳ ವಿಶೇಷವಾಗಿತ್ತು.ಈ ಪಂದ್ಯಾಟದಲ್ಲಿ ಒಟ್ಟು ಉಳಿದ ಹಣವನ್ನು ಅನಾರೋಗ್ಯ ಪೀಡಿತ ಬಡಕುಟುಂಬಗಳಿಗೆ ಸಹಾಯಧನ ರೂಪದಲ್ಲಿ ಕೆಲವೇ ದಿನಗಳಲ್ಲಿ ಹಸ್ತಾಂತರ ಮಾಡಲಿದೆ. ಪ್ರವೀಣ್ ಪೆರಿಂಜೆ ಕಾರ್ಯಕ್ರಮ ನಿರೂಪಿಸಿ, ಸುರೇಶ್. ಎಚ್. ಹೊಕ್ಕಾಡಿಗೋಳಿ ಸ್ವಾಗತಿಸಿ, ಎಸ್. ಕೆ. ಫ್ರೆಂಡ್ಸ್ ಅಧ್ಯಕ್ಷರಾದ ನವೀನ್ ಕೂಡುರಸ್ತೆ ಧನ್ಯವಾದವಿತ್ತರು.