23.9 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಶಿಕ್ಷಣ ಸಂಸ್ಥೆ

ಉಜಿರೆ ಶ್ರೀ ಧ. ಮಂ. ಪ.ಪೂ. ಕಾಲೇಜಿನ ಎನ್ನೆಸ್ಸೆಸ್ ವತಿಯಿಂದ ಪೆರಿಂಜೆ ಗ್ರಾಮ ಸಮೀಕ್ಷೆ

ಪೆರಿಂಜೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಪೆರಿಂಜೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯಲ್ಲಿ ನಡೆಯುತ್ತಿದ್ದು ವಿವಿಧ ಶೈಕ್ಷಣಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.


ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ಪೆರಿಂಜೆಯ ಗ್ರಾಮದ ಸಾಮಾಜಿಕ , ಆರ್ಥಿಕ ಇತ್ಯಾದಿ ವಿವರಗಳ ಸಮೀಕ್ಷೆ ಕಾರ್ಯವನ್ನು ನಾಯಕರಾದ ಸುದರ್ಶನ್ ನಾಯಕ್ ಹಾಗೂ ದ ನೇತೃತ್ವದಲ್ಲಿ ‘ ಮನೆ ಮನ ಭೇಟಿ ‘ ಕಾರ್ಯಕ್ರಮದ ಮೂಲಕ ನೆರವೇರಿಸಿದರು.
ಸ್ಥಳೀಯ ಹೊಸಂಗಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ಹೇಮಾವಸಂತ , ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್ , ಎಸ್.ಕೆ.ಡಿ.ಆರ್.ಡಿ.ಪಿ ಸೇವಾಪ್ರತಿನಿಧಿ ಜಲಜಾ ಅವರು ವಿದ್ಯಾರ್ಥಿ ಸ್ವಯಂ ಸೇವಕರಿಗೆ ಮಾರ್ಗದರ್ಶನ ನೀಡಿದರು.
ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಹಾಗೂ ಹಿರಿಯ ಸ್ವಯಂ ಸೇವಕರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕದಿಂದ ಗೃಹಲಕ್ಷ್ಮಿಯೋಜನೆ ಸಮಸ್ಯೆ ಪರಿಹರಿಸಲು ಗ್ರಾಮವಾರು ಸಂಚಾಲಕರ ನೇಮಕ

Suddi Udaya

ಕಣಿಯೂರು: ಶ್ವೇತ ಸಮೂಹ ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ರಜತ ಮಹೋತ್ಸವ

Suddi Udaya

ಕಲ್ಮಂಜ: ಆನಂಗಳ್ಳಿ ವಾಳ್ಯದ ಕೂಳೂರು ನಿವಾಸಿ ತಾರಾ ಪರಾಂಜಪೆ ನಿಧನ

Suddi Udaya

ಒಕ್ಕಲಿಗರ ಕ್ರಿಕೆಟ್ ಪಂದ್ಯಾಟ: ಪಟ್ರಮೆ ಬ್ರದರ್ಸ್ ತಂಡ ದ್ವಿತೀಯ ಸ್ಥಾನ

Suddi Udaya

ಕುವೆಟ್ಟು: ಸ.ಉ. ಪ್ರಾ. ಶಾಲಾ ನೂತನ ಎಸ್ ಡಿ ಎಂ ಸಿ ಸಮಿತಿ ರಚನೆ

Suddi Udaya

ಪೆರಿಂಜೆಯಲ್ಲಿ ಎನ್ನೆಸ್ಸೆಸ್ ವತಿಯಿಂದ ಅಮೃತ ಕಲಶ ಯಾತ್ರೆಯೊಂದಿಗೆ ಸ್ವಚ್ಛತಾ ಅಭಿಯಾನ

Suddi Udaya
error: Content is protected !!