24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳಿಯ ಗ್ರಾ.ಪಂ. ವ್ಯಾಪ್ತಿಯ ಅಂಗನವಾಡಿಯ ಜಾಗವನ್ನು ಸ್ಥಳೀಯರೊಬ್ಬರು ಅತಿಕ್ರಮಿಸಿದ ಪ್ರಕರಣ: ಸಾರ್ವಜನಿಕರು ಮತ್ತು ಅಂಗನವಾಡಿ ಬಾಲ ವಿಕಾಸ ಸಮಿತಿ ವತಿಯಿಂದ ಆಕ್ಷೇಪ: ತಹಶೀಲ್ದಾರರಿಗೆ ಹಾಗೂ ಪೋಲಿಸ್ ಠಾಣೆಗೆ ದೂರು

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಿಯ ಗ್ರಾಮದ ಎರುಕಡಪ್ಪು ಅಂಗನವಾಡಿಯ ಕಲ್ಕುರ್ಣಿ ಕಡೆಗೆ ಹೋಗುವ ಒಂದು ಬದಿಯಲ್ಲಿರುವ ಅಂಗನವಾಡಿಯ ಹೆಸರಿನಲ್ಲಿರುವ ಸರ್ವೆನಂಬ್ರ 70/1B ರಲ್ಲಿ 0.30 ಸೆಂಟ್ಸ್ ಜಾಗದ ಒಂದು ಪಾರ್ಶ್ವದಲ್ಲಿ ಗಡಿ ಗುರುತು ಹಾಕಿದ್ದ ಜಾಗವನ್ನು ಜೆ.ಸಿ.ಬಿ.ಯಂತ್ರದ ಮೂಲಕ ಸ್ಥಳೀಯರೊಬ್ಬರು ಅತಿಕ್ರಮಿಸಿ ಸಮತಟ್ಟು ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಮತ್ತು ಅಂಗನವಾಡಿ ಬಾಲ ವಿಕಾಸ ಸಮಿತಿ ವತಿಯಿಂದ ಆಕ್ಷೇಪ ವ್ಯಕ್ತಪಡಿಸಿ ಈ ಹಿಂದಿನಿಂದಲೂ ದಾಖಲೆ ಇದ್ದ ಈ ಜಾಗವನ್ನು ಅತಿಕ್ರಮಣ ಗೊಳಿಸಿದ ಬಗ್ಗೆ ವಿರೋಧ ವ್ಯಕ್ತಪಡಿಸಿ ತಹಶೀಲ್ದಾರರಿಗೆ ಮತ್ತು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ತಹಶೀಲ್ದಾರರು ದೂರನ್ನು ಪರಿಶೀಲಿಸಿ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ನೋಟಿಸು ನೀಡಿದ್ದಾರೆ.
ಈ ಹಿಂದೆ ಕೂಡಾ ಅತಿಕ್ರಮಣ ಮಾಡಿದ್ದ ಕಾರಣ ಗ್ರಾಮ ಪಂಚಾಯತ್ ಮತ್ತು ಕಂದಾಯ ಇಲಾಖೆ ಮೌಖಿಕವಾಗಿ ತಿಳಿಸಿ ಅತಿಕ್ರಮಣವನ್ನು ನಿಲ್ಲಿಸಿತ್ತು. ಆದರೆ ಪುನಃ ಕಛೇರಿ ರಜಾ ದಿನದಲ್ಲಿ ಜೆ ಸಿ ಬಿ ಯಂತ್ರದ ಮೂಲಕ ಅತಿಕ್ರಮಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಅತಿಕ್ರಮಣಕಾರರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಪರಿಸ್ಥಿತಿ ಕೈಮೀರುವ ಮೊದಲೇ ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.

Related posts

ಕಣಿಯೂರು ಸ.ಉ.ಪ್ರಾ. ಶಾಲೆಯಲ್ಲಿ ಪೋಕ್ಸೋ ಕಾಯಿದೆಯ ಜಾಗೃತಿ ಅಭಿಯಾನ

Suddi Udaya

ಕೊಕ್ರಾಡಿ : ಗೋಳಿಯಂಗಡಿಯಲ್ಲಿ ಸ್ಕಿಡ್‌ ಆಗಿ ಬಿದ್ದ ಬೈಕ್ : ಸವಾರರಿಗೆ ಗಾಯ

Suddi Udaya

ಅಳದಂಗಡಿ: ಗುಡ್ ಫ್ಯೂಚೆರ್ ಆಂ.ಮಾ. ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಭೆ

Suddi Udaya

ಕರಾಯ: ಹೆರಿಗೆಯ ವೇಳೆ ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವು

Suddi Udaya

ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಧರ್ಮಸ್ಥಳಕ್ಕೆ ಭೇಟಿ

Suddi Udaya

ಪದ್ಮಂಜ ಸಹಕಾರಿ ಸಂಘದ ರೈತ ಸಭಾಭವನ ಮತ್ತು ರೈತ ಗೋದಾಮು ಕಟ್ಟಡ ಉದ್ಘಾಟನೆ

Suddi Udaya
error: Content is protected !!