24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್ ಡಿ.ಎಂ.ಕಾಲೇಜು ಎನ್.ಎಸ್.ಎಸ್. ಘಟಕಕ್ಕೆ ರಾಜ್ಯ ಪ್ರಶಸ್ತಿ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕಾರ್ಯಕ್ರಮಾಧಿಕಾರಿ ಡಾ. ಲಕ್ಷ್ಮೀನಾರಾಯಣ ಕೆ. ಎಸ್.  ಅವರಿಗೆ ಎನ್ನೆಸ್ಸೆಸ್ ರಾಜ್ಯ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ರಾಜ್ಯಪಾಲರ ರಾಜಭವನದಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಡಾ.ಬಿ.ಎ.ಕುಮಾರ್ ಹೆಗ್ಡೆ ಹಾಗೂ  ಎನ್ .ಎಸ್ ಎಸ್ ಅಧಿಕಾರಿ .ಲಕ್ಷ್ಮೀನಾರಾಯಣ್ ಕೆ ಎಸ್.  ಅವರು ಪ್ರಶಸ್ತಿ ಸ್ವೀಕರಿಸಿದರು.


ಡಾ.ಲಕ್ಷ್ಮೀನಾರಾಯಣ್ ಅವರು ಜೂನ್ 2019ರಿಂದ ಜೂನ್ 2023 ರವರೆಗೆ ಯೋಜನಾಧಿಕಾರಿಯಾಗಿ ಎನ್ನೆಸ್ಸೆಸ್ ಘಟಕವನ್ನು ಮುನ್ನಡೆ ಸಿದ್ದರು. ಈ ಅವಧಿಯಲ್ಲಿ ಮೂರು ವಾರ್ಷಿಕ ವಿಶೇಷ ಶಿಬಿರಗಳ ಆಯೋಜನೆ, ಕೊರೊನಾ ಕಾಲದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್ ಜಾಗೃತಿ, ಲಾಕ್ ಡೌನ್ ವಿಶೇಷ ಕಾರ್ಯಕ್ರಮಗಳು,  ಕೋವಿಡ್ ಲಸಿಕಾ ಜಾಗೃತಿ ಹಾಗೂ ಲಸಿಕಾ ಶಿಬಿರಗಳ ಆಯೋಜನೆ, ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಸ್ವಯಂಸೇವಕರೇ ಸಂಪನ್ಮೂಲ ವ್ಯಕ್ತಿಗಳಾಗಿ ಸ್ವತಂತ್ರ ಭಾರತದ ಸಾಧಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ 75 ವಿಶೇಷ ಉಪನ್ಯಾಸಗಳ ಸರಣಿ ಕಾರ್ಯಕ್ರಮಗಳನ್ನುಆಯೋಜಿಸಲಾಗಿತ್ತು ಅ ಲ್ಲದೆ ಇಂಗು ಗುಂಡಿಗಳ ನಿರ್ಮಾಣ, ಸ್ವಚ್ಛ ಭಾರತ ಕಾರ್ಯಕ್ರಮಗಳ ಆಯೋಜನೆ,ಪರಿಸರ ಸಂರಕ್ಷಣೆ ಸಂಬಂಧಿ‌ ಕಾರ್ಯಕ್ರಮಗಳು, ರಕ್ತದಾನ ಶಿಬಿರಗಳು, ಆರೋಗ್ಯ ಶಿಬಿರಗಳು, ಗದ್ದೆ ನಾಟಿ,ಚಾರ್ಮಾಡಿ ಯಲ್ಲಿ ಪ್ರವಾಹದ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಲ್ಲಿ ಭಾಗಿ, ಜಲಸಂರಕ್ಷಣೆ ಜಾಗೃತಿ ಜಾಥಾಗಳು,  ಮಾದಕ ವ್ಯಸನಿ ವಿರೋಧಿ ಕಾರ್ಯಕ್ರಮಗಳು, ಸಾಮಾಜಿಕ ಪ್ರಜ್ಞೆ ಜಾಗ್ರತಿ ಕಾರ್ಯಕ್ರಮಗಳು  ಹಾಗೂ ಜಲ ಸಂರಕ್ಷಣೆ ಕುರಿತಾದ ಕಾರ್ಯಕ್ರಮಗಳ ಆಯೋಜನೆ, ಗಣರಾಜ್ಯೋತ್ಸವ ಪೆರೇಡ್ ನಲ್ಲಿ, ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ರಾಷ್ಟ್ರೀಯ ಭಾವೈಕ್ಯತಾ  ಶಿಬಿರಗಳಲ್ಲಿ, ಯುವಜನೋತ್ಸವಗಳಲ್ಲಿ, ನಾಯಕತ್ವ ತರಬೇತಿ ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು.

ಕಾಲೇಜಿನ ಎನ್ನೆಸ್ಸೆಸ್ ಘಟಕಕ್ಕೆ ಈವರೆಗೆ 10 ಬಾರಿ, ಕಾರ್ಯಕ್ರಮ ಅಧಿಕಾರಿಗಳಿಗೆ 10 ಬಾರಿ ಹಾಗೂ ವಿದ್ಯಾರ್ಥಿಗಳಿಗೆ 6 ಬಾರಿ ರಾಜ್ಯ ಪ್ರಶಸ್ತಿ ಬಂದಿದೆ.
ಒಂದು ಬಾರಿ ಇಂದಿರಾ ಗಾಂಧಿ ಎನ್ನೆಸ್ಸೆಸ್  ರಾಷ್ಟ್ರ ಪ್ರಶಸ್ತಿಯು ಲಭಿಸಿದ್ದು ಪ್ರಸ್ತುತ ಪ್ರಿನ್ಸಿಪಾಲ್ ಆಗಿರುವ ಡಾ. ಕುಮಾರ್ ಹೆಗ್ಡೆ ಅವರಿಗೆ  ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿತ್ತು.

Related posts

ಧರ್ಮಸ್ಥಳ: ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿ ಇರುವ ಅನಧಿಕೃತ ಗೂಡಂಗಡಿಗಳನ್ನು ಧರ್ಮಸ್ಥಳ ಗ್ರಾ. ಪಂ. ನಿಂದ ತೆರವು

Suddi Udaya

ಶ್ರೀ. ಧಂ. ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

Suddi Udaya

ಕಲ್ಮಂಜ ಮಿಯಾ ನಿವಾಸಿ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಮನೆಯಿಂದ ದರೋಡೆ ಪ್ರಕರಣ : ಆರೋಪಿಗಳಿಗೆ ನ್ಯಾಯಾಂಗ ಬಂಧನ

Suddi Udaya

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಸಾಮೂಹಿಕ ಪ್ರಾರ್ಥನೆ

Suddi Udaya

ಮಾ.9: ಬೆಳ್ತಂಗಡಿ ಪಂಚ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಲು ಉಚಿತ ಬಸ್ಸು ವ್ಯವಸ್ಥೆ

Suddi Udaya

ಅರಸಿನಮಕ್ಕಿ: ಅರೇಕಲ್ ಮಹಾದೇವ ಭಟ್ ರವರ ತೋಟಕ್ಕೆ ಕಾಡಾನೆ ದಾಳಿ

Suddi Udaya
error: Content is protected !!