September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ: ಶ್ರೀ ಧ. ಮಂ. ಆಂ.ಮಾ. ಶಾಲೆಯಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ


ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಜೀವನ ಕೌಶಲ್ಯ ಕಾರ್ಯಾಗಾರವನ್ನು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ರೆಸಿಡೆನ್ಸಿಯಲ್ ಕಾಲೇಜಿನ ಪ್ರಾಂಶಪಾಲರಾದ ಸುನಿಲ್ ಪಂಡಿತ್ ನೆರವೇರಿಸಿದರು .ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಕಾರ್ಯಾಗಾರದ ಮಹತ್ವ ಹಾಗೂ ಉದ್ದೇಶವನ್ನು ತಿಳಿಸಿದರು. ಕಾರ್ಯಾಗಾರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ರೆಸಿಡೆನ್ಸಿಯಲ್ ಕಾಲೇಜಿನ ಪ್ರಾಂಶಪಾಲರಾದ ಸುನಿಲ್ ಪಂಡಿತ್ ರವರು ಜೀವನ ಕೌಶಲ್ಯಗಳ ಮಾಹಿತಿಗಳು ಸ್ನೇಹಿತರನ್ನು ಹೇಗೆ ಆಯ್ಕೆಮಾಡಬೇಕು, ಜೀವನದಲ್ಲಿ ಮೌಲ್ಯಗಳ ಮಹತ್ವ,ಗುಂಪು ಓದುವಿಕೆಯ ಮಹತ್ವ,ಓದುವ ಕೌಶಲ್ಯ ಹಾಗೂ ಹದಿಹರೆಯದ ಸಮಸ್ಯೆ ಹಾಗೂ ಹೊರಬರುವ ಉಪಾಯ ಇತ್ಯಾದಿಗಳನ್ನು ಕಥೆ, ವಿಡಿಯೋ, ಹಲವಾರು ಚಟುವಟಿಕೆ ಹಾಗೂ ನೈಜ ಉದಾಹರಣೆಗಳ ಮೂಲಕ ತಿಳಿಸಿದರು.

ಕುಮಾರಿ ಭಾರ್ಗವಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ, ಆಶಿತಾ ಸ್ವಾಗತಿಸಿ, ಅಭಿಜ್ಞಾನ್ ವಂದಿಸಿದರು.

Related posts

ಲಾಯಿಲ ಶಿವ ದುರ್ಗಾ ಟೈಗರ್ಸ್ ವತಿಯಿಂದ 5ನೇ ವರ್ಷದ ಪಿಲಿ ನಲಿಕೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನೀರಿನ ಯೂನಿಟ್ ಮಿತಿ ಹೆಚ್ಚಳಕ್ಕೆ ಎಸ್‌ಡಿಪಿಐ ವತಿಯಿಂದ ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ

Suddi Udaya

ಪಾಲಡ್ಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ ಕಾರ್ಯಕ್ರಮ

Suddi Udaya

ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ & ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು ಸಿರಿ ಸಂಸ್ಥೆಗೆ ಭೇಟಿ

Suddi Udaya

ಮುಂಡೂರು ಶ್ರೀನಾಗಕಲ್ಲುರ್ಟಿ ಕ್ಷೇತ್ರದಲ್ಲಿ ಶ್ರೀನಾಗಬ್ರಹ್ಮ ದೇವರ ಪುನರ್ ಪ್ರತಿಷ್ಠಾ ಕಲಶೋತ್ಸವ

Suddi Udaya

ಕೆನರಾ ಸ್ಟೀಲ್ ಇಂಡಸ್ಟ್ರೀಸ್‌ನ ಸಂಸ್ಥೆ ಪಣೆಜಾಲುವಿನಲ್ಲಿ ವಿನಯ ಸ್ಟೀಲ್ & ಮೆಟಲ್ಸ್ ಶುಭಾರಂಭ

Suddi Udaya
error: Content is protected !!