April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಾಪಿನಡ್ಕದಲ್ಲಿ ಬೈಕ್ ಅಪಘಾತ, ಸವಾರಿಬ್ಬರಿಗೆ ಗಾಯ: ವೇಣೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಬೆಳ್ತಂಗಡಿಯಿಂದ ಕಾಪಿನಡ್ಕ ಎಂಬಲ್ಲಿಗೆ ಬೈಕ್ ನಲ್ಕಿ ಸವಾರಿಬ್ಬರು ಪ್ರಯಾಣಿಸುತ್ತಿದ್ದಾಗ ಬೈಕ್ ಸ್ಕಿಡ್ ಆದಂತಹ ಘಟನೆ ನಡೆದಿದ್ದು ವೇಣೂರು ಪೊಲೀಸ್ ಠಾಣೆಯಲ್ಲಿ ಅ.12 ರಂದು ಪ್ರಕರಣ ದಾಖಲಾಗಿದೆ

ಬೆಳ್ತಂಗಡಿ ನಿವಾಸಿ ದಿವಾಕರ ಎ (52) ಎಂಬವರ ದೂರಿನಂತೆ, ಅ. 10 ರಂದು ದಿವಾಕರವರು ಪರಿಚಯದ ರಾಜು ಶೆಟ್ಟಿ ಎಂಬವರ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ 21 W 6936 ನೇ ರಲ್ಲಿ ಸಹ ಸವಾರನಾಗಿ ಕುಳಿತುಕೊಂಡು ತೆಂಕಕಾರಂದೂರು ಗ್ರಾಮದ ಕಾಪಿನಡ್ಕ ಎಂಬಲ್ಲಿಗೆ ಪ್ರಯಾಣಿಸುತ್ತಿದ್ದಾಗ ಸವಾರ ರಾಜು ಶೆಟ್ಟಿರವರು ತನ್ನ ಮೋಟಾರ್ ಸೈಕಲ್‌ನ್ನು ಚಲಾಯಿಸುವಾಗ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಇಬ್ಬರಿಗೂ ಗಾಯಗಳಾಗಿದೆ.ಆಗ ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಾಳುಗಳನ್ಬು ಚಿಕಿತ್ಸೆಗಾಗಿ ಉಜಿರೆಯ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನಗರ ಪಂಚಾಯತದ ಒಳಚರಂಡಿಗೆ ಬಿದ್ದ ದನ: ಅಗ್ನಿಶಾಮಕದವರ ಸಹಕಾರದಿಂದ ಮೇಲಕ್ಕೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅಡಿಕೆ ಸಮರ್ಪಣೆ

Suddi Udaya

ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಉಜಿರೆ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ಕಲ್ಮಂಜ ಸ.ಹಿ.ಪ್ರಾ. ಶಾಲೆ ಪೈಂಟಿಂಗ್, ಕಾಮಗಾರಿ ವೀಕ್ಷಣೆ

Suddi Udaya

ಅರಸಿನಮಕ್ಕಿ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವ: ಋತ್ವಿಜರ ಸ್ವಾಗತ, ಹೊರೆಕಾಣಿಕೆ ಉಗ್ರಾಣ ಉದ್ಘಾಟನೆ

Suddi Udaya

ವರ್ಗಾವಣೆಗೊಂಡ ಶಿಕ್ಷಕ ಸುರೇಶ್ ಶೆಟ್ಟಿಯವರಿಗೆ ಕುವೆಟ್ಟು ಸ.ಉ.ಹಿ.ಪ್ರಾ. ಶಾಲಾ ವತಿಯಿಂದ ಬಿಳ್ಕೋಡುಗೆ ಸಮಾರಂಭ

Suddi Udaya
error: Content is protected !!