25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ

ಬೆಳ್ತಂಗಡಿ: ತಾಲೂಕು ವಿಕಲಚೇತನರ ಮೇಲ್ವಿಚಾರಕರಾದ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ಇವರ ಅಧ್ಯಕ್ಷತೆಯಲ್ಲಿ ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆಯು ಅಂಬೇಡ್ಕರ್ ಭವನ, ಬೆಳ್ತಂಗಡಿಯಲ್ಲಿ ಅ.12 ರಂದು ನಡೆಸಲಾಯಿತು.

ಈ ಸಂದರ್ಭದಲ್ಲಿ ಜೋನ್ ಬ್ಯಾಪಿಸ್ಟ್ ಡಿಸೋಜ ಅವರು ಮಾತಾಡಿ ಪ್ರತೀ ತಿಂಗಳ ಮೂರನೇ ಮಂಗಳವಾರ ನಡೆಯುವ ವಿಕಲಚೇತನರ ಹೊಸ ಗುರುತಿಸುವಿಕೆ ಹಾಗೂ ನವೀಕರಣದ ಶಿಬಿರವನ್ನು ಇನ್ನೂ ಪರಿಣಾಮಕಾರಿಯಾಗಿ ನಡೆಸಲು ಪುನರ್ವಸತಿ ಕಾರ್ಯಕರ್ತರು ಪ್ರತಿ ಮಾಸಿಕ ಕ್ಯಾಂಪ್ ಗಳಲ್ಲಿ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸುವ ಬಗ್ಗೆ ವಿವರಣೆ ಹಾಗೂ ಹೊಸ ಪ್ರಕಾರವನ್ನು ತಿಳಿಸಿದರು. ಹಾಗೂ ಪ್ರತಿ ತಿಂಗಳಲ್ಲಿ ನಡೆಸುವ ಶಿಬಿರವು ಇನ್ನೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ಎಲ್ಲಾ ರೀತಿಯಲ್ಲಿ ತಾಲ್ಲೂಕಿನ ವಿಕಲಚೇತನರಿಗೆ ಅನುಕೂಲ ಆಗಲು ಮತ್ತು ಇನ್ನೂ ಪರಿಣಾಮಕಾರಿಯಾಗಿ ಯಶಸ್ವಿ ಆಗಲು ತಾಲ್ಲೂಕಿನ ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರ 4 ಗುಂಪುಗಳಾಗಿ ವಿಂಗಡಣೆ ಮಾಡಿದ್ದು ಪ್ರತೀ ಗುಂಪಿನಲ್ಲಿ ಒಬ್ಬರನ್ನು ನಾಯಕನಾಗಿ ಮಾಡಿ ಪ್ರತಿ ತಿಂಗಳ ಶಿಬಿರವು ಬಹಳ ಅಚ್ಚುಕಟ್ಟಾಗಿ ನಡೆಸಲುಬೇಕಾದ ಸಲಹೆ ಸೂಚನೆಗಳನ್ನು ನೀಡಿದರು. ಮತ್ತು ತಾಲ್ಲೂಕಿನ ಎಲ್ಲಾ ಕಾರ್ಯಕರ್ತರ ಮಾಸಿಕ ವರದಿಯನ್ನು ಪಡೆದರು ಹಾಗೂ ರಾಜ್ಯ ವಿಕಲಚೇತನರ ಇಲಾಖೆಯಿಂದ ಬಂದಿರುವ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಕಣಿಯೂರು ಗ್ರಾ.ಪಂ. ಚಿರಂಜೀವಿ ಶೆಟ್ಟಿ , ಉಜಿರೆ ಗ್ರಾ.ಪಂ. ವಿಪುಲ್, ಗೇರುಕಟ್ಟೆ ಗ್ರಾ. ಪಂ. ಮಾನಸ , ರಾಧಿಕಾ ಗ್ರಾಮ ಪಂಚಾಯಿತ್ ಇಲಂತಿಲ, ಕೀರ್ತನ್ ಗ್ರಾಮ ಪಂಚಾಯತ್ ಕೊಯ್ಯುರು, ರಂಜಿತ್ ಗ್ರಾಮ ಪಂಚಾಯತ್ ಶಿಬಾಜೆ, ರಂಜನ್ ಗ್ರಾಮ ಪಂಚಾಯತ್ ವೇಣೂರು, ದಿವ್ಯ ಗ್ರಾಮ ಪಂಚಾಯತ್ ಮಾಲಾಡಿ, ದಿವ್ಯ ಎನ್ ಗ್ರಾಮ ಪಂಚಾಯತ್ ಮರೋಡಿ, ಹೀರಣ್ಣ ಗ್ರಾಮ ಪಂಚಾಯತ್ ಬೆಳಾಲು , ಯಕ್ಷಿತ ಗ್ರಾಮ ಪಂಚಾಯತ್ ಮಚ್ಚಿನ, ಹರೀಶ್ ಗ್ರಾಮ ಪಂಚಾಯತ್ ಶಿರ್ಲಾಲು, ಹರೀಶ್ ಗ್ರಾಮ ಪಂಚಾಯತ್ ಧರ್ಮಸ್ಥಳ , ಸುಲೋಚನ ಗ್ರಾಮ ಪಂಚಾಯತ್ ಕುವೆಟ್ಟು, ಪೌಝಿಯ ನಗರ ಪಂಚಾಯತ್ ಬೆಳ್ತಂಗಡಿ, ಜೋಸೆಫ್ ಗ್ರಾಮ ಪಂಚಾಯತ್ ಇಂದಬೆಟ್ಟು,ಗಣೇಶ್ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಉಪಸ್ಥಿತರಿದ್ದರು.

Related posts

ಸೆ.26: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಹಿರಿಯ ಯಕ್ಷಗಾನ ಭಾಗವತ ಧರ್ಣಪ್ಪ ಆಚಾರ್ಯ ಅಳದಂಗಡಿ ನಿಧನ

Suddi Udaya

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ವಾರ್ಷಿಕೋತ್ಸವ

Suddi Udaya

ಬೆಳ್ತಂಗಡಿ ಬಿಜೆಪಿ ಕಚೇರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Suddi Udaya

ಎ.3ರಿಂದ ಎ.7: ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

Suddi Udaya

ಎಸ್.ಡಿ.ಎಂ. ಪಾಲಿಟೆಕ್ನಿಕ್:‌ ಬಸವರಾಜ ಕಟ್ಟೀಮನಿಯವರ ವ್ಯಕ್ತಿತ್ವ ಮತ್ತು ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ

Suddi Udaya
error: Content is protected !!