ಬೆಳ್ತಂಗಡಿ : ನೆಹರು ಯುವ ಕೇಂದ್ರ ಮಂಗಳೂರು, ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ, ಗ್ರಾಮ ಪಂಚಾಯತ್ ಮೇಲಂತಬೆಟ್ಟು, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, JCI ಮಂಜುಶ್ರೀ ಬೆಳ್ತಂಗಡಿ, ತಾಲೂಕು ಯುವಜನ ಒಕ್ಕೂಟ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ಮೇರಿ ಮಾಟಿ ಮೇರಿ ದೇಶ್ “( ನನ್ನ ಮಣ್ಣು, ನನ್ನ ದೇಶ )ಅಮೃತ ಕಲಶ ಯಾತ್ರೆ”ಯನ್ನು ರಾಷ್ಟ್ರೀಯ ಸೇವಾ ಯೋಜನೆ, ಎನ್ ಸಿ ಸಿ, ರೋವರ್ಸ್ ಮತ್ತು ರೇಂಜರ್ಸ್ , ಐಕ್ಯುಎಸಿ , ಇದರ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿಅ. 13ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಯಾದ ಕುಸುಮಾಧರಾ ಬಿ. ವಹಿಸಿ ಮಾತನಾಡಿ “ಮನ್ ಕೀ ಬಾತ್ ನಲ್ಲಿ ದೇಶವಾಸಿಗಳಿಗೆ ನೀಡಿದ ಕರೆಯಂತೆ ಸ್ವಾತಂತ್ರ ಅಮೃತ ಮಹೋತ್ಸವದ ನೆನಪಿನಲ್ಲಿ ಬಲಿದಾನಗೈದ ಹುತಾತ್ಮಯೋಧರ ಸ್ಮರಣೆಗಾಗಿ ದೇಶದ 7500 ಹಳ್ಳಿಗಳಿಂದ ಮಣ್ಣು ಸಂಗ್ರಹಿಸಿ ಅಮೃತ ವಾಟಿ ಉದ್ಯಾನವನ ನಿರ್ಮಿಸಲು ನಾವೆಲ್ಲರೂ ಅಮೃತ ಕಲಶದಲ್ಲಿ ಮಣ್ಣನು ಕಳುಹಿಸೋಣ. ಯೋಧರ ಕೊಡುಗೆಯನ್ನು ಸ್ಮರಿಸೋಣ” ಎಂದರು.
ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಘವ್ ಎನ್ ಹಾಗೂ ಕನ್ನಡ ಉಪನ್ಯಾಸಕರಾದ ಡಾ. ಸುಬ್ರಹ್ಮಣ್ಯ ಕೆ ಶುಭ ಕೋರಿದರು.
ಅದೇ ರೀತಿ ಕಾರ್ಯಕ್ರಮದಲ್ಲಿ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತಾ, ಪಂಚಾಯತ್ ಉಪಾಧ್ಯಕ್ಷ ಲೋಕನಾಥ್ ಶೆಟ್ಟಿ, ಮೇಲಂತಬೆಟ್ಟು ಪಂಚಾಯತ್ ನ ಪ್ರಭಾರ ಪಿಡಿಒ ನಿರ್ಮಲ್ ಕುಮಾರ್, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶಾಂತಪ್ಪ, ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕ ಚಿದಾನಂದ ಇಡ್ಯ, ಜೆ ಸಿ ಐ ಮಂಜಶ್ರೀ ಇದರ ಕಾರ್ಯಕ್ರಮ ಸಂಯೋಜಕರಾದ ಅನುದೀಪ್ ಜೈನ್ , ಪಂಚಾಯತ್ ಸದಸ್ಯರಾದ ಚಂದ್ರ ರಾಜ್ . ಎಂ ಮತ್ತು ಪಂಚಾಯತ್ ಸಿಬ್ಬಂದಿ ವರ್ಗ, ಕಾಲೇಜಿನ ಉಪನ್ಯಾಸವರ್ಗದವರು, ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರದ್ಧಾ ನಿರೂಪಿಸಿದರು. ರಕ್ಷಿತಾ ಸ್ವಾಗತಿಸಿ , ಶರಣ್ಯ ಧನ್ಯವಾಧವಿತ್ತರು.