25.7 C
ಪುತ್ತೂರು, ಬೆಳ್ತಂಗಡಿ
May 17, 2025
Uncategorized

ವೆನ್‌ಲಾಕ್ ಆಸ್ಪತ್ರೆಯಲ್ಲಿ ಹೊಸ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನ ಶಸ್ತ್ರ ಚಿಕಿತ್ಸೆ ಕೊಠಡಿ ಮತ್ತು ವಾರ್ಡ್ ಗಳಿಗೆ ಉಪಕರಣಗಳನ್ನು ಅಳವಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಜಿ ಶಾಸಕ ವಸಂತ ಬಂಗೇರರಿಂದ ಮನವಿ

ಬೆಳ್ತಂಗಡಿ: ಬಡಜನತೆಗೆ ನೆರವಾಗುವ ಮಂಗಳೂರಿನ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ಹೊಸ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನ ಶಸ್ತ್ರ ಚಿಕಿತ್ಸೆ ಕೊಠಡಿ ಮತ್ತು ವಾರ್ಡ್ ಗಳಿಗೆ ಉಪಕರಣಗಳನ್ನು ಅಳವಡಿಸುವಂತೆ ಸೂಕ್ತ ನಿರ್ದೆಶನ ನೀಡಬೇಕೆಂದು ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ರವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅ.12ರಂದು ಮನವಿ ನೀಡಿದ್ದಾರೆ.


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಕೆ. ವಸಂತ ಬಂಗೇರ ಅವರು, ಈಗಾಗಲೇ ವೆನ್‌ಲಾಕ್ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯಿಂದ 2 ಕೋಟಿ, ಕೆ.ಎಂ.ಸಿ ಆಸ್ಪತ್ರೆಯಿಂದ 2 ಕೋಟಿ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಿಂದ 6 ಕೋಟಿ ಅನುದಾನ ನೀಡುವಂತೆ ತಾವು ಆದೇಶ ನೀಡಿದ್ದರೂ ಆರೋಗ್ಯ ರಕ್ಷಾ ಸಮಿತಿಯ ಅನುಮೋದನೆ ಅಗತ್ಯವಿರುವುದರಿಂದ ತಕ್ಷಣ ಸದ್ರಿ ಸಮಿತಿಯ ಸಭೆ ಕರೆದು ಸೂಕ್ತ ನಿರ್ದೆಶನ ನೀಡಬೇಕೆಂದು ಮನವಿ ನೀಡಿದರು.

ಮನವಿಗೆ ಸ್ಪಂದಿಸಿದ ಸಚಿವರು ಮುಂದಿನ ದ.ಕ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ.

Related posts

ದಸ್ಕತ್ ತುಳು ಚಲನಚಿತ್ರದ ಪೋಸ್ಟರ್ ಬಿಡುಗಡೆ

Suddi Udaya

ಧರ್ಮಸ್ಥಳ ಕನ್ಯಾಡಿ ಸೇವಾ ಭಾರತಿ ಸಮೀಪ ಪ್ರವಾಸಿಗರ ಕಾರು ಹಾಗೂ ರಿಕ್ಷಾ ನಡುವೆ ಅಪಘಾತ: ‌ಹಲವು ಮಂದಿ ಪ್ರಯಾಣಿಕರಿಗೆ ಗಾಯ

Suddi Udaya

ಉಜಿರೆಯಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ

Suddi Udaya

ರುಕ್ಮಯ್ಯ ಗೌಡ ಬದ್ಯಾರು ವಿಧಿವಶ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪಿಯು ಕಾಲೇಜಿನ ಕಂಪೌಂಡ್ ಕುಸಿತ

Suddi Udaya

ಮಡಂತ್ಯಾರು: ಬಿದ್ದ ಪರ್ಸ್ ಹಿಂದುರುಗಿಸಿ ಕೊಟ್ಟು ಮಾನವೀಯತೆ ಮೆರೆದ ಆಟೋ ಚಾಲಕ ಇರ್ಷಾದ್

Suddi Udaya
error: Content is protected !!