September 6, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗಂಡಿಬಾಗಿಲು ಧರ್ಮೋಪದೇಶ ಶಾಲೆಯ ಮುಖ್ಯೋಪಾಧ್ಯಾಯ ಶಿಜು ಸಿ.ವಿ. ಗೆ ಸನ್ಮಾನ ಮತ್ತು ಬೀಳ್ಕೊಡುಗೆ

ನೆರಿಯ: ಗಂಡಿಬಾಗಿಲಿನ ಸೆಂಟ್ ತೋಮಸ್ ಚರ್ಚ್ ಧರ್ಮೋಪದೇಶ ಶಾಲೆಯಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಜು ಚೇಟ್ಟುತಡತ್ತಿಲ್ (ಶಿಜು ಸಿ ವಿ) ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸಮಾರಂಭವನ್ನು ಸೆಂಟ್ ತೋಮಸ್ ಚರ್ಚ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಚರ್ಚಿನ ಪಾಲನಾ ಸಮಿತಿಯವರು, ಬೆಳ್ತಂಗಡಿ ಧರ್ಮ ಪ್ರಾಂತ್ಯ ಬೆಳ್ಳಿ ಹಬ್ಬ ಕ್ರೀಡಾ ಸಮಿತಿ ಹಾಗೂ ಶೈಕ್ಷಣಿಕ ಮತ್ತು ಸಾಮಾಜಿಕ ಕೆಲಸಗಳಲ್ಲಿ ಚಿಂತನಾಶೀಲ ಎಸ್ರ ಫೌಂಡೇಶನ್ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಶಿಜು ಸಿ ವಿ ಅವರನ್ನು ಸನ್ಮಾನಿಸಿದರು.

ಶಿಜು ಸಿ ವಿ ಎಸ್ರ ಫೌಂಡೇಶನ್ ಮುಖಾಂತರ, ಗೆಳೆಯರ ಸಹಾಯದೊಂದಿಗೆ, ಅನೇಕ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಿ ಅವರ ಬದುಕನ್ನು ಸುಧಾರಿಸುವ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ವಂದನಿಯ ಜೋಸ್ ಆಯಾಮ್ ಕುಡಿಯವರು ಶಿಜು ಸಿ ವಿ ಅವರ ಸೇವೆಯನ್ನು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಚರ್ಚಿನ ಪಾಲನಾ ಸಮಿತಿ, ಧರ್ಮೋಪದೇಶ ಶಾಲೆಯ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಶಿಜು ಪಿ ವಿ ನಡೆಸಿದರು.

Related posts

ಲಾಯಿಲ: ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಸರ್ಕಾರಿ ಬಸ್ಸುಗಳ ಮುಖಾಮುಖಿ ಡಿಕ್ಕಿ: ಪ್ರಯಾಣಿಕರು ಸಣ್ಣಪುಟ್ಟ ಗಾಯಾಗಳಿಂದ ಪಾರು

Suddi Udaya

ಮುಂಡೂರು: ಕರುವಿನ ಮೇಲೆ ಚಿರತೆ ದಾಳಿ: ಆತಂಕದಲ್ಲಿ ಗ್ರಾಮಸ್ಥರು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಯು ಶೇಪ್ ವಾಕರ್ ವಿತರಣೆ

Suddi Udaya

ಶಿಖರ್ಜಿಯಲ್ಲಿ ನಿರಂಜನನ ದರ್ಶನ ಹಾಗೂ ಜಿನಭಕ್ತಿ ಲಹರಿ ಕೃತಿ ಲೋಕಾರ್ಪಣಾ ಕಾರ್ಯಕ್ರಮ

Suddi Udaya

ಅಡಿಕೆ ಕ್ಷೇತ್ರದ ದಿಗ್ಗಜರಿಂದ ನಿಡ್ಲೆಯ ಅಗ್ರಿಲೀಫ್ ಗೆ ಭೇಟಿ: ಎಐ ಆಧಾರಿತ ಅಡಿಕೆ ಗ್ರೇಡಿಂಗ್ ತಂತ್ರಜ್ಞಾನಕ್ಕೆ ಮೆಚ್ಚುಗೆ

Suddi Udaya
error: Content is protected !!