24.1 C
ಪುತ್ತೂರು, ಬೆಳ್ತಂಗಡಿ
May 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತೆಕ್ಕಾರು : ಸಿಡಿಲು ಬಡಿದು ಮನೆಗೆ ಹಾನಿ


ತೆಕ್ಕಾರು :ಸಿಡಿಲು ಬಡಿದು ಮನೆಯೊಂದು ಭಾಗಶಃ ಹಾನಿಗೀಡಾದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಎಂಬಲ್ಲಿ ಅ.12ರಂದು ನಡೆದಿದೆ.

ಘಟನೆಯಿಂದ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಮನೆ ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ. ತೆಕ್ಕಾರಿನ ಕಾಪಿಗುಡ್ಡೆಯ ತಾಹಿರಾ ಎಂಬವರ ಮನೆಗೆ ಅ.12 ರಂದು ಸಂಜೆ ಸಿಡಿಲು ಬಡಿದಿದ್ದು ಕೆಲವು ಕಡೆ ಗೋಡೆಯ ಕೆಂಪುಕಲ್ಲುಗಳೇ ಛಿದ್ರಗೊಂಡಿವೆ. ಅಲ್ಲದೇ, ಎಲ್ಲ ಗೋಡೆಗಳು ಬಿರುಕು ಬಿಟ್ಟಿವೆ. ವಿದ್ಯುತ್ ವಯ ಸಂಪೂರ್ಣ ಸುಟ್ಟು ಹೋಗಿದ್ದು, ಸ್ವಿಚ್ ಬೋಡ್‌ಗಳು ಗೋಡೆಯಿಂದ ಮೇಲೆದ್ದು ಬಂದು ನೇತಾಡುತ್ತಿವೆ. ಘಟನೆಯಿಂದ ಸುಮಾರು 2 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ.

ಮಳೆ, ಸಿಡಿಲು ಆರಂಭವಾದಾಗ ಮನೆ ಮಂದಿ ಅಲ್ಲೇ ಇರುವ ಸಂಬಂಧಿಕರ ಮನೆಗೆ ತೆರಳಿದ್ದು, ಸಿಡಿಲು ಬಡಿದ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದಿದ್ದುದ್ದರಿಂದ ಮನೆ ಮಂದಿ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ

ಸ್ಥಳಕ್ಕೆ ತೆಕ್ಕಾರು ಗ್ರಾಮಕರಣಿಕೆ ಸಾಕಮ್ಮ ಬೇಟಿ ನೀಡಿದ್ದು ಪರಿಶೀಲನೆ ನಡೆಸಿದರೆ.

Related posts

ಕೊಯ್ಯೂರು ಕೊಯಿರೊಟ್ಟು ಗುಳಿಗ ದೈವದ ನೂತನ ಕಟ್ಟೆ, ಗಗ್ಗರ ಸೇವೆ

Suddi Udaya

ಬೆಳ್ತಂಗಡಿ ಮುಗೇರ ಹಿತಚಿಂತನ ವೇದಿಕೆಯ ವತಿಯಿಂದ ಧನಸಹಾಯ ಹಸ್ತಾಂತರ

Suddi Udaya

ಕಡಿರುದ್ಯಾವರ ಮತ್ತು ಮುಂಡಾಜೆ ಪಂಚಾಯತ್ ಅರಿವು ಕೇಂದ್ರಗಳಿಗೆ ಕಂಪ್ಯೂಟರ್ ಹಾಗೂ ಸ್ಮಾರ್ಟ್ ಮೊಬೈಲ್ ವಿತರಣೆ

Suddi Udaya

ಲಾಯಿಲ ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya

ನಾವೂರು ಗ್ರಾ.ಪಂ. ನಲ್ಲಿ ಗ್ರಾಮ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ

Suddi Udaya

ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ.89.65 ಫಲಿತಾಂಶ

Suddi Udaya
error: Content is protected !!