24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಕಾಂಗ್ರೆಸ್ ಕಚೇರಿಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ಭೇಟಿ: ಹಲವು ಬೇಡಿಕೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಭರವಸೆ ವ್ಯಕ್ತಪಡಿಸಿದ ಸಚಿವರು

ಬೆಳ್ತಂಗಡಿ: ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಕೃಷಿ ಸಚಿವರಾದ ಚೆಲುವರಾಯಸ್ವಾಮಿರವರು ಅ.14 ರಂದು ಭೇಟಿ ನೀಡಿದರು.

ಈ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ವೇಣೂರು, ಬಜಿರೆ ಮುಂತಾದೆಡೆ ಆಫ್ರಿಕನ್ ಬಸವನಹುಳುವಿನ ಸಮಸ್ಯೆಯಿದೆ. ಇದಕ್ಕೆ ಪರಿಹಾರ ನೀಡಬೇಕು. ಬೆಳ್ತಂಗಡಿಯಲ್ಲಿ ಬೀಜೋತ್ಪನ್ನ ಕೇಂದ್ರಕ್ಕೆ ಪುನಶ್ಚತನಗೊಳಿಸಬೇಕು. ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಯಾವುದೇ ಚಟುವಟಿಕೆ ಇಲ್ಲದೇ ಪಾಳುಬಿದ್ದಿದೆ. ಪರಿಶಿಷ್ಟ ಜಾತಿ ಪಂಗಡದವರಿಗೆ ಕೃಷಿಯೋಗ್ಯ ಭೂಮಿಗಳಿಗಾಗಿ ಕಿಂಡಿ ಅಣೆಕಟ್ಟು ಹೆಚ್ಚಿಸಬೇಕು.ಬೆಳ್ತಂಗಡಿಯಲ್ಲಿ 25ರಲ್ಲಿ 23 ಹುದ್ದೆ ಖಾಲಿಯಿದೆ ಅದನ್ನು ನೇಮಕಾತಿಗೊಳಿಸಬೇಕು.ನಮ್ಮ ಭಾಗದಲ್ಲಿ ಆನೆ ಹಾವಳಿಯಿಂದಾಗಿ ತೊಂದರೆಯಾಗುತ್ತಿದೆ. ಇದಕ್ಕೆ ಸೂಕ್ತ ಕ್ರಮಕ್ಕೆ ರಕ್ಷಿತ್ ಶಿವರಾಂ ವಿನಂತಿಸಿದರು.

ಇದಕ್ಕುತ್ತರಿಸಿದ ಸಚಿವ ಚೆಲುವರಾಯಸ್ವಾಮಿ ”ರಕ್ಷಿತ್ ರವರು ಹೇಳಿದ ವಿಚಾರಗಳಲ್ಲಿ ಕೂಡಲೇ ಮಾಡಬಹುದಾದ ಕೆಲಸಗಳನ್ನು ಶೀಘ್ರ ಮಾಡಲಾಗುವುದು. ಕೃಷಿ ಭಾಗ್ಯ ಯೋಜನೆ ಮತ್ತೆ ಜಾರಿಗೊಳಿಸುತ್ತೇವೆ. ಕೆಲವೊಂದು ತೋಟಗಾರಿಕೆ ಇಲಾಖೆಗೆ ಬರುತ್ತದೆ. ಅದರ ಬಗ್ಗೆ ಆಯಾ ಇಲಾಖೆಗೆ ತಿಳಿಸುತ್ತೇವೆ. ನಿಮ್ಮ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತೇನೆ. ಯಾವುದೇ ಇಲಾಖೆಗಳಿದ್ದರೂ ಅವರ ಗಮನಕ್ಕೆ ತರುತ್ತೇನೆ. .ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ಟ, ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್, ಮುಖಂಡರುಗಳಾದ ಶೇಖರ್ ಕುಕ್ಕೇಡಿ, ಧರಣೇಂದ್ರ ಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Related posts

ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ 64ನೇ ವರ್ಷದ ಶ್ರೀರಾಮ ನಾಮ ಸಪ್ತಾಹದ ಉದ್ಘಾಟನೆ:

Suddi Udaya

ಧರ್ಮಸ್ಥಳ ಪೊಲೀಸ್ ಠಾಣೆಯ ನೂತನ ಕಟ್ಟಡದ ಉದ್ಘಾಟನೆ

Suddi Udaya

ಉಜಿರೆ: ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಕಲ್ಲೇರಿ: ಕಾರು ಮತ್ತು ಸ್ಕೂಟಿಯ ನಡುವೆ ಭೀಕರ ರಸ್ತೆ ಅಪಘಾತ: ಓರ್ವ ಮೃತ್ಯು

Suddi Udaya

ಮುಂಡಾಜೆ: ಮೂರ್ತಿಲ್ಲಾಯ ಭಕ್ತ ವೃಂದ ವತಿಯಿಂದ ದೈವಸ್ಥಾನಕ್ಕೆ ದೇಣಿಗೆ ಹಸ್ತಾಂತರ

Suddi Udaya

ಒಕ್ಕಲಿಗರ ಕ್ರಿಕೆಟ್ ಪಂದ್ಯಾಟ: ಪಟ್ರಮೆ ಬ್ರದರ್ಸ್ ತಂಡ ದ್ವಿತೀಯ ಸ್ಥಾನ

Suddi Udaya
error: Content is protected !!