38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ. ಶಿವರಾಮ ಕಾರಂತ ಸ್ಮರಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ. ಶಿವರಾಮ ಕಾರಂತರ ಜನ್ಮ ದಿನದ ಅಂಗವಾಗಿ ಸ್ಮರಣೆ ಕಾರ್ಯಕ್ರಮ ವಾಣಿ ವಿದ್ಯಾ ಸಂಸ್ಥೆಯಲ್ಲಿ ಜರಗಿತು.

ನಿವೃತ್ತ ಪ್ರಾಚಾರ್ಯರಾದ ಕೃಷ್ಣಪ್ಪ ಪೂಜಾರಿಯವರು ಡಾ. ಕಾರಂತರ ನೆನಪುಗಳನ್ನು ಮಾಡುತ್ತಾ ಡಾ.ಕಾರಂತರು ಓರ್ವ ಬೆರಗಿನ ವ್ಯಕ್ತಿತ್ವದವರು. ತಾನು ಕೈಯಾಡಿಸಿದ ಕ್ಷೇತ್ರದಲ್ಲಿ ಅಧ್ಯಯನಶೀಲರಾಗಿ ಅದ್ಭುತ ಸಾಧನೆ ಮಾಡಿದವರು. ಅವರೋರ್ವ ಶಕ್ತಿ. ಇಂದಿನ ಯುವ ಜನಾಂಗದವರು ಡಾ. ಕಾರಂತರ ಬಗ್ಗೆ ಓದಿ ತಿಳಿದುಕೊಳ್ಳುವ ಆಸಕ್ತಿ ರೂಢಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಯದುಪತಿ ಗೌಡರು ವಹಿಸಿದ್ದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್ ಬೆಳಾಲು ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿಗಳು , ವಾಣಿ ಕಾಲೇಜಿನ ಉಪನ್ಯಾಸಕರೂ ಆದ ಬೆಳ್ಳಿಯಪ್ಪ ರವರು ವಂದಿಸಿದರು.


ವೇದಿಕೆಯಲ್ಲಿ ಸಾಹಿತ್ಯ ಪರಿಷತ್ತಿನ ಇನ್ನೋರ್ವ ಕಾರ್ಯದರ್ಶಿಗಳಾದ ಶ್ರೀಮತಿ ಪ್ರಮೀಳಾರವರು ಉಪಸ್ಥಿತರಿದ್ದರು. ಸಭೆಗೆ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ಉಮೇಶ್ ಶೆಟ್ಟಿ, ಸಾಹಿತ್ಯ ಪರಿಷತ್ತಿನ ಸದಸ್ಯರಾದ ಲಕ್ಷ್ಮೀನಾರಾಯಣ ಕೆ, ಅಶ್ರಫ್ ಆಲಿ ಕುಂಞಿ ಮುಂಡಾಜೆ, ಗಣಪತಿ ಭಟ್ ಕುಳಮರ್ವ, ಅಮಿತಾಬ್ ಹೆಗ್ಡೆ, ಡಾ.ದಿವ ಕೊಕ್ಕಡ, ವಸತಿ ಟಿ ನಿಡ್ಲೆ, ಅನುರಾಧ ರಾವ್ ಬೆಳ್ತಂಗಡಿ, ಧರಣೇಂದ್ರ ಕೆ ಜೈನ್ ಮೊದಲಾದವರು ಆಗಮಿಸಿದ್ದರು.

Related posts

‘ಮೋದಿಜೀಯವರ ಅಧಿಕಾರವಧಿಯಲ್ಲಿ ಆಯುರಾರೋಗ್ಯ ಲಭಿಸಲಿ’ ಎಂದು ಕೊಕ್ಕಡ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶ್ರೀ ಕ್ಷೇತ್ರ ಸೌತಡ್ಕ ಕ್ಷೇತ್ರದಲ್ಲಿ 120 ಅಗೇಲು ರಂಗಪೂಜೆ

Suddi Udaya

ಕಕ್ಕಿಂಜೆಗೆ ಮೌಲಾನಾ ಆಜಾದ್ ಮಾದರಿ ಶಾಲೆ ಮಂಜೂರು ಸಚಿವರಿಗೆ ಅಭಿನಂದನೆ

Suddi Udaya

ಕೊಯ್ಯೂರು: ಮಲೆಬೆಟ್ಟು ನಿವಾಸಿ ಗುರುಪ್ರಸಾದ್ ಆತ್ಮಹತ್ಯೆ

Suddi Udaya

ಧರ್ಮಸ್ಥಳ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಸಾರಿಗೆ ಸಚಿವರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೊಳಕೆ ಇರ್ವತ್ತೂರು ಭಾಸ್ಕರ್ ಎಸ್.ಕೋಟ್ಯಾನ್‌ರಿಗೆ ಭಾಸ್ಕರಾಭಿನಂದನ ಕಾರ್ಯಕ್ರಮ, ಶಾಸಕ ಹರೀಶ್ ಪೂಂಜರವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗೌಸಿಯಾ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ಮಹಾಸಭೆ: ನೂತನ ಅಧ್ಯಕ್ಷರಾಗಿ ಅಯ್ಯೂಬ್ ಸಅದಿ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಮುರ ಆಯ್ಕೆ

Suddi Udaya
error: Content is protected !!