September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

‘ಮೋದಿಜೀಯವರ ಅಧಿಕಾರವಧಿಯಲ್ಲಿ ಆಯುರಾರೋಗ್ಯ ಲಭಿಸಲಿ’ ಎಂದು ಕೊಕ್ಕಡ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶ್ರೀ ಕ್ಷೇತ್ರ ಸೌತಡ್ಕ ಕ್ಷೇತ್ರದಲ್ಲಿ 120 ಅಗೇಲು ರಂಗಪೂಜೆ

ಕೊಕ್ಕಡ : ಸತತವಾಗಿ 3ನೇ ಭಾರಿಗೆ ಭಾರತ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಇತಿಹಾಸ ನಿರ್ಮಿಸಿದ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ದಾಮೋದರದಾಸ್ ಮೋದಿಜೀಯವರ ಅಧಿಕಾರವಧಿಯಲ್ಲಿ ಆಯುರಾರೋಗ್ಯ ಲಭಿಸಲಿ ಎಂದು ಕೊಕ್ಕಡ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ಸನ್ನಿಧಾನದಲ್ಲಿ 120 ಅಗೇಲು ರಂಗಪೂಜೆ ಸೇವೆಯನ್ನು ಜೂ.10 ರಂದು ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ಧರ್ಮಸ್ಥಳ ಮಹಾಶಕ್ತಿಕೇಂದ್ರದ ಮಾಜಿ ಅಧ್ಯಕ್ಷ ಯೋಗೀಶ್ ಆಲಂಬಿಲ, ಎಸ್.ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿಠಲ ಕುರ್ಲೆ, ಕೊಕ್ಕಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಬೇಬಿ, ಗ್ರಾ.ಪಂ. ಉಪಾಧ್ಯಕ್ಷ ಪ್ರಭಾಕರ ಗೌಡ ಮಲ್ಲಿಗೆ ಮಜಲು, ಸದಸ್ಯರಾದ ಜಾನಕಿ, ಲತಾ, ಪುರುಷೋತ್ತಮ, ಶಕ್ತಿಕೇಂದ್ರದ ಪ್ರಮುಖ ಪ್ರಶಾಂತ್ ಪೂವಾಜೆ, ಬೂತ್ 1ರ ಸಮಿತಿ ಅಧ್ಯಕ್ಷ ಕಿರಣ್, ಕಾರ್ಯದರ್ಶಿ ರವಿ, ಬೂತ್ 2ರ ಸಮಿತಿ ಅಧ್ಯಕ್ಷ ಶಶಿ, ಕಾರ್ಯದರ್ಶಿ ಶ್ರೀಧರ್,
ಬೂತ್ 3ರ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ, ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಪವಿತ್ರ ಗುರುಪ್ರಸಾದ್, ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ, ಸುಬ್ರಮಣ್ಯ ತೋಡ್ತಿಲ್ಲಾಯ ಹಾಗೂ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಮುಖರು, ಬಿಜೆಪಿ ಕಾರ್ಯಕರ್ತರು, ಉಪಸ್ಥಿತರಿದ್ದರು.

ನಂತರ ಬಿಜೆಪಿ ಕಾರ್ಯಕರ್ತರು ಕೊಕ್ಕಡ ಪೇಟೆಯಲ್ಲಿ ಸಿಹಿ ತಿಂಡಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

Related posts

ಜಿಲ್ಲಾಮಟ್ಟದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ವಿಭಾ ಕೆ.ಆರ್ ಪ್ರಥಮ ಬಹುಮಾನ

Suddi Udaya

ಗಾಳಿ-ಮಳೆ: ನಾಲ್ಕೂರು ಬಳಂಜದಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಧರಾಶಾಯಿ

Suddi Udaya

ನಿವೃತ್ತ ಜಲಾನಯನ ಅಧಿಕಾರಿ ದಯಾನಂದ ಹೆಚ್. ಕುಕ್ಕೇಡಿ ನಿಧನ

Suddi Udaya

ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಘಟಕದ ಉಪಾಧ್ಯಕ್ಷರಾಗಿ ಬಿ.ಅಶ್ರಫ್ ನೆರಿಯಾ ಆಯ್ಕೆ

Suddi Udaya

ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ಧರ್ಮಸ್ಥಳ ಡಾ| ಹೆಗ್ಗಡೆಯವರ ಭೇಟಿ

Suddi Udaya

ಕಳೆಂಜ ಸದಾಶಿವೇಶ್ವರ ದೇವಸ್ಥಾನ ಕಳೆಂಜದ ಸಭಾಭವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 2 ಲಕ್ಷ ಅನುದಾನ

Suddi Udaya
error: Content is protected !!