September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಉತ್ಸವ: ಬಿರ್ವ ಸಂಜೀವ ಪೂಜಾರಿಯವರಿಂದ ನವರಾತ್ರಿ ಮಹೋತ್ಸವ ಉದ್ಘಾಟನೆ

ಗೆಜ್ಜೆಗಿರಿ: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಉತ್ಸವವು ಬೆಳಿಗ್ಗೆ ಗಣಪತಿ ಹವನ ತೆನೆ ಕಟ್ಟುವ ಮೂಲಕ ಆರಂಭಗೊಂಡಿತು.

ನವರಾತ್ರಿ ಮಹೋತ್ಸವವನ್ನು ಮೇಲ್ಕಾರ್ ಬಿರ್ವ ಸೆಂಟರ್ ಮಾಲಕರಾದ ಕೆ.ಸಂಜೀವ ಪೂಜಾರಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ತಮ್ಮ ಪ್ರಸ್ತಾವನೆಯಲ್ಲಿ ಕ್ಷೇತ್ರ ನಡೆದು ಬಂದ ದಾರಿಯ ಬಗ್ಗೆ ಪ್ರಸ್ತಾವಿಸಿದರು. ಉಪಾಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ ಧನ್ಯವಾದ ಅರ್ಪಿಸಿದರು.

ಪ್ರಮುಖರಾದ ಕ್ಷೇತ್ರದ ಪ್ರಧಾನ ಅರ್ಚಕರಾದ ಶಿವಾನಂದ ಶಾಂತಿ, ನವೀನ್ ಸುವರ್ಣ, ಪ್ರವೀಣ್ ಪೂಜಾರಿ ಮೂಡಿಗೆರೆ, ಕೃಷ್ಣಪ್ಪ ಪೂಜಾರಿ, ಜಯಶ್ರೀ ಉಪ್ಪಿನಂಗಡಿ, ವಿಶ್ವನಾಥ ಪೂಜಾರಿ ಮೂಡಿಗೆರೆ, ನಾರಾಯಣ ಮಚ್ಚಿನ ಹಾಗೂ ನೂರಾರು ಕ್ಷೇತ್ರದ ಭಕ್ತರ ಉಪಸ್ಥಿತಿಯಲ್ಲಿ ನಡೆಯಿತು.

Related posts

ಉಜಿರೆ ಗ್ರಾಮ ಪಂಚಾಯತ್ ಜನಸ್ಪಂದನ ಸಭೆ

Suddi Udaya

ಶಿಬಾಜೆ: ಫತ್ತಿಮಾರುನಲ್ಲಿ ತೋಟಕ್ಕೆ ನುಗ್ಗಿದ್ದ ಕಾಡಾನೆ: ಅಪಾರ ಕೃಷಿ ಹಾನಿ

Suddi Udaya

ಮುಂಡಾಜೆ : ಹೆದ್ದಾರಿ ಸೇತುವೆಯ ಕಾಮಗಾರಿಯ ವೇಳೆ ಹಿಟಾಚಿ ಪಲ್ಟಿ

Suddi Udaya

ಸರಳ ಮೋಟಾರ್ಸ್ ಮಾಲಕ ಎಂ.ಕೆ. ರತ್ನಾಕರ್ ನಿಧನ

Suddi Udaya

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅ.ಹಿ.ಪ್ರಾ. ಶಾಲಾ ವಾರ್ಷಿಕೋತ್ಸವ

Suddi Udaya
error: Content is protected !!