ಉಜಿರೆ: ಶ್ರೀ ರಾಧಾ ಸುರಭಿ ಗೋ ಮಂದಿರ,ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಬಂಟ್ವಾಳದಿಂದ ಹೊರಟ ಗೋ ರಥಯಾತ್ರೆ ಉಜಿರೆ ನಗರಕ್ಕೆ ಆಗಮಿಸಿ ಬೆಳಾಲ್ ಕ್ರಾಸ್ ನಿಂದ ಭವ್ಯ ಮೆರವಣಿಗೆ ನಡೆಯಿತು.
ಗೋರಥಾ ಯಾತ್ರೆ ಮೆರವಣಿಗೆಯ ಉದ್ಘಾಟನೆಯನ್ನು ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯರವರು ನೇರವೆರಿಸಿ ಶುಭಕೋರಿದರು.
ನಂತರ ಉಜಿರೆ ಶಾರದಾ ಮಂಟಪದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳೆಂಜ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಎಂ ದಯಾಕರ್ ವಹಿಸಿದ್ದರು.
ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಕೃಷ್ಣ ಭಟ್ ಕೊಕ್ಕಡ, ರಥಯಾತ್ರೆ ಮಾರ್ಗದರ್ಶಕರಾದ ಭಕ್ತಿಭೂಷಣ್ ದಾಸ್ ಪ್ರಭೂಜೀ,ಬೆಳ್ತಂಗಡಿ ಗೋಯಾತ್ರೆ ಸಮಿತಿಯ ಸಂಪತ್ ಬಿ ಸುವರ್ಣ, ಸೌತಡ್ಕ ಗೋ ಶಾಲೆಯ ಅದ್ಯಕ್ಷ ಹರೀಶ್ ಮುಂಡ್ರುಪ್ಪಾಡಿ, ಶ್ರೀ ರಾಧಾ ಸುರಭಿ ಗೋ ಮಂದಿರದ ಕಾರ್ಯಾಧ್ಯಕ್ಷ ತಾರನಾಥ ಕೊಟ್ಟಾರಿ,ಉಪಾಧ್ಯಕ್ಷ ರಾಮದಾಸ್ ಉಪಸ್ಥಿತರಿದ್ದರು.
ಬೆಳ್ತಂಗಡಿ ಗೋಯಾತ್ರೆ ಸಮಿತಿಯ ಸಂಪತ್ ಬಿ ಸುವರ್ಣ ಸ್ವಾಗತಿಸಿದರು.ಉಜಿರೆ ರಮ್ಯ ಫ್ಯಾನ್ಸಿ ಮಾಲಕ ಪ್ರಸಾದ್ ಬಿ.ಎಸ್ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಪದ್ಮನಾಭ ಶೆಟ್ಟಿಗಾರ್ ಉಜಿರೆ,ದಿನೇಶ್ ಚಾರ್ಮಾಡಿ,ನವೀನ್ ನೆರಿಯ,ಮೋಹನ್ ಬೆಳ್ತಂಗಡಿ, ರಮೇಶ್ ಧರ್ಮಸ್ಥಳ, ಸಂತೋಷ್ ಅತ್ತಾಜೆ,ರಾಘವ ಕಲ್ಮಂಜ, ಮಂಜುನಾಥ ಶೆಟ್ಟಿ ನಿಡಿಗಲ್ ಹಾಗೂ ಇತರರು ಉಪಸ್ಥಿತರಿದ್ದರು.