25.8 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳದ ಬಿ. ಪ್ರಕಾಶ ದೇವಾಡಿಗರವರು ಸ್ಯಾಕ್ಸೋಪೋನ್ ಕಾರ್ಯಕ್ರಮ ನೀಡಲು ಮೂರನೇ ಬಾರಿಗೆ ಅಮೇರಿಕಕ್ಕೆ

ಬೆಳ್ತಂಗಡಿ: ಸ್ಯಾಕ್ಸೋಪೋನ್ ವಾದನ ಕ್ಷೇತ್ರದಲ್ಲಿ ಅತ್ಯುನ್ನತ ಕಲಾವಿದರಾಗಿ, ಆಕಾಶವಾಣಿ ಮತ್ತು ದೂರದರ್ಶನ ಎ ಗ್ರೇಡ್ ಮಾನ್ಯತೆ ಪಡೆದು ರಾಜ್ಯದ ಅಗ್ರಮಾನ್ಯರಾಗಿ ಹೆಸರುವಾಸಿಯಾಗಿರುವ ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗ ಅವರು ಸ್ಯಾಕ್ಸೋಫೋನ್ ಕಾರ್ಯಕ್ರಮ ನೀಡುವುದಕ್ಕಾಗಿ ಮೂರನೇ ಬಾರಿಗೆ ಅಮೇರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಸುಜ್ಞಾನ ರಿಲಿಜಿಯಸ್‌ ಎಂಡ್ ಚಾರಿಟೇಬಲ್ ಫೌಂಡೇಶನ್ ಅರಿಝೋನಾ ಟೆಂಪಿ ಫೀನಿಕ್ಸ್ ಇಲ್ಲಿನ ಶ್ರೀ ವೆಂಕಟಕೃಷ್ಣ ದೇವಾಲಯದಲ್ಲಿ ಅ.28 ರಿಂದ ನ.4 ರ ವರೆಗೆ ನಡೆಯುವ ‘ಶ್ರೀ ಯಜುರ್ವೇದ ಸಂಹಿತ ಯಾಗ’ ಮತ್ತು ‘ಸಹಸ್ರ ಅತರ್ವಶ್ರೀರ್ಶ ಮಹಾಗಣಪತಿ ಯಾಗ’ ಕಾರ್ಯಕ್ರಮದಲ್ಲಿ ಅವರು ಸಾಂಪ್ರದಾಯಿಕ ವಾದನ ನಡೆಸಿಕೊಡಲು ಭಾರತದಿಂದ ವಿಶೇಷ ಆಹ್ವಾನಿತರಾಗಿದ್ದಾರೆ.

ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗ ಅವರು ಆಕಾಶವಾಣಿ ಮತ್ತು ದೂರದರ್ಶನ ಎ ಗ್ರೇಡ್ ಕಲಾವಿದರಾಗಿದ್ದು ಕಳೆದ 27 ವರ್ಷಗಳಿಂದ ಮುಂಬೈ, ಚೆನ್ನೈ, ದುಬಾಯಿ ಸಹಿತ ಹಲವು ರಾಜ್ಯಗಳಲ್ಲಿ ತಮ್ಮ ಪ್ರಬುದ್ದ ಕಲಾಗಾರಿಕೆ ಪ್ರದರ್ಶಿಸಿದ್ದಾರೆ. ಈ ಹಿಂದೆಯೂ ಅವರು ಎರಡು ಬಾರಿ ಅಮೆರಿಕಾದಲ್ಲಿ ಯಶಸ್ವಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಬೆಂಗಳೂರು ದೂರದರ್ಶನದ ದಕ್ಷಿಣ ವಲಯ ಸಂಗೀತ ಕಾರ್ಯಕ್ರಮ, ಕೇಂದ್ರ ಸರಕಾರದ ಪ್ರಸಾರ ಭಾರತಿಯವರ ಪ್ರತಿಷ್ಠಿತ ಆಕಾಶವಾಣಿ ಸಂಗೀತ ಸಮ್ಮೇಳನ, ದೂರದರ್ಶನದ ‘ಪುದು ಗೈ ಇಸೈ ಮಾಲೈ’ ಕಾರ್ಯಕ್ರಮ ಸೇರಿದಂತೆ ಅನೇಕ ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನು ನೀಡಿರುವ ಅನುಭವಿಯಾಗಿದ್ದಾರೆ. ಪ್ರಸ್ತುತ ಅವರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಮುಖ್ಯ ವಾದ್ಯ ವಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Related posts

ಶಿಶಿಲ ಗ್ರಾ.ಪಂ. ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ಎಕ್ಸಲೆ೦ಟ್ ಮೂಡುಬಿದಿರೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

Suddi Udaya

ಕಕ್ಕಿಂಜೆ: ಸಿದ್ದಿಕ್ ಯು.ಪಿ. ಮಾಲಕತ್ವದ ವಾಯುಮಾಲಿನ್ಯ ತಪಾಸಣಾ ಕೇಂದ್ರ ಉದ್ಘಾಟನೆ

Suddi Udaya

ಕೊಕ್ರಾಡಿ ಹೇರ್ದಂಡಿ ಬಾಕ್ಯಾರು ಗರಡಿಗೆ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಆರ್ ಭೇಟಿ,

Suddi Udaya

ಕೊಕ್ಕಡ ಅಮೃತ ಗ್ರಾ. ಪಂ. ಹಾಗೂ ಅಮೃತ ಸರೋವರದಲ್ಲಿ ಸ್ವಾತಂತ್ರೋತ್ಸವ ಆಚರಣೆ: ನಿವೃತ್ತ ಸೈನಿಕರಿಗೆ ಗೌರವಾರ್ಪಣೆ

Suddi Udaya
error: Content is protected !!