July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಶ್ರೀ ದುರ್ಗಾ ಬೆಂಗಳೂರು ಅಯ್ಯಂಗಾರ್ ಬೇಕರಿ ಶುಭಾರಂಭ

ಬೆಳ್ತಂಗಡಿ: ಶ್ರೀ ದುರ್ಗಾ ಬೆಂಗಳೂರು ಅಯ್ಯಂಗಾರ್ ಬೇಕರಿ ಇದರ ಶುಭಾರಂಭವು ಬೆಳ್ತಂಗಡಿ ಚರ್ಚ್ ರೋಡ್ ಬಳಿ ಅ.15 ರಂದು ನಡೆಯಿತು.

ನೂತನವಾಗಿ ಆರಂಭಿಸಿದ ಬೇಕರಿಯನ್ನು ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಉದ್ಘಾಟಿಸಿ ಸಂಸ್ಥೆಯು ದೇವರ ದಯೆಯಿಂದ ಉತ್ತರೋತ್ತರವಾಗಿ ಬೆಳಗಲಿ ಎಂದು ಶುಭಹಾರೈಸಿದರು.

ನೂತನ‌ ಸಂಸ್ಥೆಗೆ ಬೆಳ್ತಂಗಡಿ ಚರ್ಚ್ ನ ಧರ್ಮಗುರುಗಳು ಶುಭಕೋರಿದರು

ಕಾರ್ಯಕ್ರಮದಲ್ಲಿ ಮಾಲಕರ ಮಾತ- ಪಿತರಾದ ಶ್ರೀಮತಿ ಗಿರಿಜಾ- ರಾಮಣ್ಣ ಪೂಜಾರಿ,ಉದ್ಯಮಿ ಚಂದ್ರಶೇಖರ್ ,ಪಟ್ಟಣ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯಾನಂದ ಗೌಡ ,ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್,ಉಜಿರೆ ಗ್ರಾ.ಪಂ ಸದಸ್ಯ ಗುರುಪ್ರಸಾದ್,ಪ್ರಮುಖರಾದ ಅಣ್ಣು ಪೂಜಾರಿ ಗಂಪದಕೋಡಿ ಕೊಲ್ಲಿ ಹಾಗೂ ಇತರರು ಉಪಸ್ಥಿತರಿದ್ದು ಶುಭಾಶಯ ತಿಳಿಸಿದರು.

ಸಂಸ್ಥೆಯ ಮಾಲಕರಾದ ಶ್ರೀಮತಿ ರಶ್ಮಿ ಮತ್ತು ನವೀನ್ ಕುಮಾರ್ ಇಂದಬೆಟ್ಟು,ಮಕ್ಕಳಾದ ಸಾಹಿತ್ಯ,ಶ್ರೀಯಾನ್ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.

ಸಂಸ್ಥೆಯಲ್ಲಿ ಮದುವೆ, ಸೀಮಂತ, ಹಬ್ಬ ಹರಿದಿನ, ವಿಶೇಷ ಕಾರ್ಯಕ್ರಮ ಹಾಗೂ ಇನ್ನಿತರ ಯಾವುದೇ ಶುಭ ಸಮಾರಂಭಗಳಿಗೆ ಬೇಕಾದ ರೀತಿಯಲ್ಲಿ ಸಿಹಿತಿಂಡಿಗಳನ್ನು ತಯಾರಿಸಿಕೊಡಲಾಗುವುದು ಮತ್ತು ಒದಗಿಸಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದರು.

Related posts

ಬೆಳ್ತಂಗಡಿ ಸಂತ ತೆರೇಸಾ ಪ್ರೌಢಶಾಲೆಗೆ ಶೇ.98.68 ಫಲಿತಾಂಶ

Suddi Udaya

ಉಜಿರೆ ಬೆನಕ ಸೆಂಟರ್ ನಲ್ಲಿ ದಾದಿಯರ ದಿನಾಚರಣೆ

Suddi Udaya

ಮಚ್ಚಿನ : ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Suddi Udaya

ಮಾ. 2: ಮುಗೇರಡ್ಕ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ಆಹಾರ ಮೇಳ: ಚಪ್ಪರ ಮೂಹೂರ್ತ

Suddi Udaya

ರುಡ್‌ಸೆಟ್ ಸಂಸ್ಥೆಯಲ್ಲಿ ಎಂಬ್ರಾಯ್ಡರಿ ಮತ್ತು ಫ್ಯಾಬ್ರಿಕ್ ಪೈಂಟಿಂಗ್ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಉಜಿರೆ: ಕುಂಟಿನಿ ಮದ್ರಸದಲ್ಲಿ ಸ್ಥಾಪಕ ದಿನಾಚರಣೆ

Suddi Udaya
error: Content is protected !!