23.9 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್‌ಡಿಎಂ ಪಿಜಿ ಕಾಲೇಜಿನಲ್ಲಿ ಮಾಸ್ಟರ್ಸ್ ಫ್ಯಾಶನ್ ವಿದ್ಯಾರ್ಥಿ ಸಂಘದ ಉದ್ಘಾಟನೆ

ಉಜಿರೆ : ಜೀವನದಲ್ಲಿ ಉತ್ಸಾಹದ ಜೊತೆಗೆ ವಿಶೇಷವಾದ ಕೌಶಲ್ಯವಿದ್ದರೆ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಗಳಿಸುವುದು ಸುಲಭ. ಸುಧಾರಿತ ತಂತ್ರಜ್ಞಾನದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಯುಗದಲ್ಲಿ ವಿಶೇಷ ಕೌಶಲ್ಯವನ್ನು ರೂಢಿಸಿಕೊಳ್ಳುವುದು ಅತ್ಯಾವಶಕವಾಗಿದೆ ಎಂದು ಪುತ್ತೂರು ಎಸ್ ಬಿ ಐ ಲೈಫ್ ಇದರ ಬಿಸಿನೆಸ್ ಮ್ಯಾನೇಜರ್ ಆದಿತ್ಯ ರಾವ್ ಅವರು ಹೇಳಿದರು.

ಉಜಿರೆಯ ಎಸ್.ಡಿ.ಎಂ ಸ್ನಾತಾಕೋತ್ತರ ಕೇಂದ್ರದ ವಾಣಿಜ್ಯ ವಿಭಾಗದ ‘ಮಾಸ್ಟರ್ಸ್ ಪ್ಯಾಶನ್’ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸತತ ಪ್ರಯತ್ನಗಳನ್ನು ಮಾಡುತ್ತಿರಬೇಕು. ಅದರಿಂದ ಅವರಲ್ಲಿ ಇರುವ ಕೌಶಲ್ಯ ಇನ್ನಷ್ಟು ಬೆಳೆಯುತ್ತದೆ. ಎರಡು ವರ್ಷ ಯಾವುದಾದರೂ ಒಂದು ವಿಷಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದರೆ ಕೌಶಲ್ಯವನ್ನು ಸರಿಯಾದ ಸಮಯದಲ್ಲಿ ಬಳಸಿಕೊಂಡರೆ ಅದಕ್ಕೆ ತಕ್ಕ ಪ್ರತಿಫಲವು ಸಿಗುತ್ತದೆ ಎಂದರು.


ಅತಿಥಿಗಳು ಸಂಘದ ಪದಾಧಿಕಾರಿಗಳಿಗೆ ಬ್ಯಾಡ್ಜ್ ವಿತರಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯಾ ಕುಮಾರಿ ಎಸ್ ವಿ ಪದಾಧಿಕಾರಿಗಳಿಗೆ ಪ್ರತಿಜ್ಞೆಯನ್ನು ಬೋಧಿಸಿದರು. ಮಾಸ್ಟರ್ಸ್ ಪ್ಯಾಶನ್ ವಿದ್ಯಾರ್ಥಿ ನಾಯಕಿ ನಯನಾ ಶ್ರೀ ಎಮ್. ಎನ್ 2023-24 ರ ಕ್ರಿಯಾ ಯೋಜನೆಯನ್ನು ಪ್ರಸ್ತಾಪಿಸಿದರು. ಸ್ವಾತಿ 2022-23 ರ ವಾರ್ಷಿಕ ವರದಿಯನ್ನು ವಾಚಿಸಿದರು.


ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಮ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗಡೆ ಮಾತನಾಡಿ, ಪ್ರತಿಯೊಬ್ಬರು ಅಸಾಮಾನ್ಯರಾಗಬಹುದು. ನಾವು ನಮ್ಮನ್ನು ಮೊದಲು ಪ್ರಶ್ನೆಮಾಡಿಕೊಳ್ಳಬೇಕು. ನಮ್ಮಲ್ಲಿ ವಿಶೇಷ ಕೌಶಲ್ಯ ಇದೆಯಾ ಎಂದು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಅದನ್ನು ಅಳವಡಿಸಿಕೊಳ್ಳಲು ಕಾಲೇಜಿನಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ನಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಪಕಿ ಮಮತಾ ಕೆ ಉಪಸ್ಥಿತರಿದ್ದರು.

ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಅರಫತ್ತುನ್ನೀಸ, ಶಿವಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಥಮ ವಾಣಿಜ್ಯ ವಿಭಾಗದ ದೀಕ್ಷಾ. ಎಸ್ ವಂದಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ಪ್ರೇಕ್ಷಾ ಅತಿಥಿಗಳನ್ನು ಪರಿಚಯಿಸಿದರು .ಪ್ರಥಮ ವಾಣಿಜ್ಯ ವಿಭಾಗದ ಉಮಾ ಸ್ವಾಗತಿಸಿ. ವಾಣಿಜ್ಯ ವಿಭಾಗ ಪ್ರಾಧ್ಯಾಪಕರು ಮತ್ತು ಪ್ರಥಮ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಕುತ್ಲೂರು: ಬಜಿಲಪಾದೆಯಲ್ಲಿ ಚಿರತೆ ಪತ್ತೆ

Suddi Udaya

ಯೋಧರ ರಕ್ಷಣೆಗಾಗಿ ಲಾಯಿಲ ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ದುರ್ಗಾಪೂಜೆ

Suddi Udaya

ಬಳಂಜ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಾಮಾನ್ಯ ಸಭೆ: ರೂ. 6.74 ಲಕ್ಷ ಲಾಭ, ಶೇ.20 ಡಿವಿಡೆಂಟ್

Suddi Udaya

ಬಂದಾರು ಸಿದ್ದಿವಿನಾಯಕ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಸೌತಡ್ಕ ಬಯಲು ಗಣಪತಿ ದೇವಸ್ಥಾನಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಭೇಟಿ

Suddi Udaya

ಅರಸಿನಮಕ್ಕಿ: ಶ್ರೀ ಕ್ಷೇತ್ರ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ: ನೂತನ ಶಿಲಾಮಯ ದೀಪಸ್ಥಂಭ ಉದ್ಘಾಟನೆ

Suddi Udaya
error: Content is protected !!