33.4 C
ಪುತ್ತೂರು, ಬೆಳ್ತಂಗಡಿ
March 31, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಡಿರುದ್ಯಾವರ: ಅಕ್ರಮ ಮರಳು ಸಂಗ್ರಹ ಪತ್ತೆ: ಪ್ರಕರಣ ದಾಖಲು


ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದಲ್ಲಿ ನೇತ್ರಾವತಿ ನದಿಯಿಂದ ಡ್ರೆಜ್ಜಿಂಗ್ ಯಂತ್ರದ ಮೂಲಕ ಅಕ್ರಮವಾಗಿ ಮರಳು ತೆಗೆಯುತ್ತಿರುವ ಪ್ರಕರಣವನ್ನು ಬೆಳ್ತಂಗಡಿ ತಹಶೀಲ್ದಾರರು ಪತ್ತೆ ಹಚ್ಚಿದ್ದು, ಈ ಬಗ್ಗೆ ಭೂ ವಿಜ್ಞಾನ ಇಲಾಖೆಯವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಂಗಳೂರು ಭೂ ವಿಜ್ಞಾನ ಇಲಾಖೆಯ ಲೊಯಲ್ ಗ್ಲಾಡ್ ಸನ್ ಮಿರಾಂಡರವರು ಅ.15ರಂದು ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಬೆಳ್ತಂಗಡಿ ತಹಶೀಲ್ದಾರರು ತಮ್ಮ ಸಿಬ್ಬಂದಿಗಳೊಂದಿಗೆ ಕಡಿರುದ್ಯಾವರ ಗ್ರಾಮದ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸುವ ಸಮಯದಲ್ಲಿ ಕಡಿರುದ್ಯಾವರ ಗ್ರಾಮದಲ್ಲಿ ಹರಿಯುವ ನೇತ್ರಾವತಿ ನದಿಯಿಂದ ಡ್ರೆಜ್ಜಿಂಗ್ ಯಂತ್ರದ ಮಖಾಂತರ ಮರಳನ್ನು ತೆಗೆಯುತ್ತಿರುವುದು ಕಂಡು ಬಂದಿದ್ದು, ಇಂದಬೆಟ್ಟು ಗ್ರಾಮದ ಮನ್ನಡ್ಕ ಎಂಬಲ್ಲಿ ಅಂದಾಜು ರೂ. 1400 ಮೌಲ್ಯದ ಅರ್ಧ ಪಿಕಾಪ್‌ನಷ್ಟು ಮರಳನ್ನು ಸಂಗ್ರಹ ಮಾಡಿರುವುದು ಕಂಡು ಪತ್ತೆಯಾಗಿದೆ. ಅನಧಿಕೃತವಾಗಿ ಮರಳನ್ನು ತೆಗೆದು ಸಂಗ್ರಹ ಮಾಡಿದ ಶ್ರೀನಿವಾಸನ ಗೌಡ ಎಂಬವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆ ಅಕ್ರನಂ೯೯/೨೦೨೩ ಕಲಂ: ೩೭೯ IPಅ. ಯಂತೆ ಪ್ರಕರಣ ದಾಖಲಾಗಿದೆ.

Related posts

ಸುದ್ದಿ ಉದಯ ದೀಪಾವಳಿ ವಿಶೇಷಾಂಕ-2024: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ‌|| ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಬೆಳ್ತಂಗಡಿ ಸ. ಪ್ರ. ದ. ಕಾಲೇಜಿನಲ್ಲಿ ಜಿಎಸ್‌ಟಿ ದಿನಾಚರಣೆ

Suddi Udaya

ಕೊಕ್ಕಡ ಸ.ಪ. ಪೂ. ಕಾಲೇಜಿನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಕೊರಂ ಕೊರತೆ : ಮೇಲಂತಬೆಟ್ಟು ಗ್ರಾಮ ಸಭೆ ಮುಂದೂಡಿಕೆ

Suddi Udaya

ನಡ ಗ್ರಾಮದಲ್ಲಿ ಸನ್‌ರಾಕ್ ಬಲಿಪ ರೆಸಾರ್ಟ್ ಶುಭಾರಂಭ

Suddi Udaya

ನಾರಾವಿ ಅಂತರ್ ಕಾಲೇಜು ವಾಣಿಜ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ :ಪ್ರಸನ್ನ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!