22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಮಾಸಿಕ ಪ್ರಗತಿ ಪರಿಶೀಲನಾ ಸಭೆ

ಬೆಳ್ತಂಗಡಿ : ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಇವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣ, ಬೆಳ್ತಂಗಡಿದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಅವರು ಮಾತಾಡಿ ಪ್ರತೀ ತಿಂಗಳ ಮೂರನೇ ಮಂಗಳವಾರ ನಡೆಯುವ ವಿಕಲಚೇತನರ ಹೊಸ ಗುರುತಿಸುವಿಕೆ ಹಾಗೂ ನವೀಕರಣದ ಶಿಬಿರವನ್ನು ಇನ್ನೂ ಪರಿಣಾಮಕಾರಿಯಾಗಿ ನಡೆಸಲು ಪುನರ್ವಸತಿ ಕಾರ್ಯಕರ್ತರು ಪ್ರತಿ ಮಾಸಿಕ ಕ್ಯಾಂಪ್ ಗಳಲ್ಲಿ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸುವ ಬಗೆಗಿನ ವಿವರಣೆಯನ್ನ ನೀಡುವುದರ ಮೂಲಕ ಹೊಸ ಪ್ರಕಾರಗಳನ್ನು ತಿಳಿಸಿದರು. ಹಾಗೂ ಪ್ರತಿ ತಿಂಗಳಲ್ಲಿ ನಡೆಸುವ ಶಿಬಿರವು ಇನ್ನೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಎಲ್ಲಾ ರೀತಿಯಲ್ಲಿ ತಾಲ್ಲೂಕಿನ ವಿಕಲಚೇತನರಿಗೆ ಅನುಕೂಲ ಆಗಲು ಇನ್ನೂ ಅತ್ಯಂತ ಪರಿಣಾಮಕಾರಿಯಾಗಿ ಯಶಸ್ವಿ ಆಗಲು ತಾಲ್ಲೂಕಿನ ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರು ಶ್ರಮಿಸಲು ಬೇಕಾದ ಸಲಹೆ ಸೂಚನೆಗಳನ್ನು ನೀಡಿದರು. ಮತ್ತು ತಾಲ್ಲೂಕಿನ ಎಲ್ಲಾ ಕಾರ್ಯಕರ್ತರ ಮಾಸಿಕ ವರದಿಯನ್ನು ಪರಿಶೀಲಿಸಿದ ಅವರು ಮಾಸಿಕ ವರದಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು ಹಾಗೂ ರಾಜ್ಯ ವಿಕಲಚೇತನರ ಇಲಾಖೆಯಿಂದ ಬಂದಿರುವ ಹೆಚ್ಚುವರಿ ಮಾಹಿತಿಯನ್ನು ತಾಲೂಕು ವಿಕಲಚೇತನರ ಮೇಲ್ವಿಚಾರಕರಾದ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ನೀಡಿದರು.

ಈ ಸಂದರ್ಭದಲ್ಲಿ ವಿಕಲಚೇತನರ ನೋಡಲ್ ಅಧಿಕಾರಿಯಾದ ಶ್ರೀಮತಿ ರತ್ನಾವತಿ ಯವರು ಉಪಸ್ಥಿತರಿದ್ದರು ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು

Related posts

ಲಾಯಿಲ: ವ್ಯಾಪಕ ಮಳೆಗೆ ಮನೆ ಕುಸಿತ

Suddi Udaya

ಸುರ್ಯ ದಿ. ಪುರಂದರ ಪೂಜಾರಿ ಇವರ ಸ್ಮರಣಾರ್ಥ ಜನಸ್ನೇಹಿ ಕಪ್ : ತಾ| ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಸನ್ಮಾನ

Suddi Udaya

ಧರ್ಮಸ್ಥಳದಲ್ಲಿ ಸಮವಸರಣ ಪೂಜಾ ವೈಭವ

Suddi Udaya

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕ ದೀಪಕ್ ಎ.ಎಸ್. ಲೋಕಸಭಾ ಸಂಸದ ಬ್ರಿಜೇಶ್ ಚೌಟರ ಭೇಟಿ

Suddi Udaya

ಸುದ್ದಿ ಉದಯ ಪತ್ರಿಕೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

Suddi Udaya

ಉಜಿರೆ: ಶ್ರೀ ಧ.ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಪೋಷಕರ ಸಭೆ

Suddi Udaya
error: Content is protected !!