37.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಪ್ರೋ. ಕೆ.ಯಸ್ ಭಗವಾನ್ ಅವರ ಹೇಳಿಕೆಗೆ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಖಂಡನೆ

ಬೆಳ್ತಂಗಡಿ: ಪ್ರೋ ಕೆ ಎಸ್. ಭಗವಾನ್ ಅವರು ಒಕ್ಕಲಿಗರ ಸಮುದಾಯದವರು ಸಂಸ್ಕೃತಿ ಹೀನ ಪಶುಗಳು ಎಂಬ ಕುಚೋದ್ಯದ ಹೇಳಿಕೆಯನ್ನು ನೀಡಿ ಒಕ್ಕಲಿಗರ ಸಮುದಾಯವನ್ನು ಅವಮಾನಿಸಿರುವುದು ಅತ್ಯಂತ ಖಂಡನೀಯ ಸಂಗತಿ. ಈ ಹೇಳಿಕೆಯು ಅವರ ಮಾನಸಿಕ ಅಸ್ವಸ್ಥತೆಯನ್ನು ಸೂಚಿಸುತ್ತದೆ. ಮತಿಭ್ರಮಣೆಗೊಂಡು ಆಡಿದ ಮಾತುಗಳು ಸಾಮಾಜಿಕ ದುಷ್ಪಾರಿಣಾಮಕ್ಕೆ ಕಾರಣವಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಶ್ರೀ ಭಗವಾನ್‌ಗೆ ಇಲ್ಲದಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ.


ನಮ್ಮ ದೇಶದ ಬೆನ್ನೆಲುಬು ರೈತ. ಸಮಸ್ತ ರೈತ ಸಮುದಾಯವನ್ನು ಒಕ್ಕಲಿಗ ಸಮುದಾಯ ಪ್ರತಿನಿಧಿಸುತ್ತದೆ. ಒಕ್ಕಲುತನ ಸಂಸ್ಕೃತಿಯನ್ನು ಪ್ರತಿಪಾದಿಸಿಕೊಂಡು ಬಂದಿರುವ ಒಕ್ಕಲಿಗ ಸಮುದಾಯದವರು ಈ ದೇಶದ ಮಣ್ಣಿನ ಮಕ್ಕಳು. ನಮ್ಮ ಸಮುದಾಯಕ್ಕೆ ಸೇರಿದ ದೇಶ ಕಂಡ ಮುತ್ಸದ್ಧಿ ಹಿರಿಯ ರಾಜಕಾರಣಿ, ಮಣ್ಣಿನ ಮಗ ದೇವೇಗೌಡರವರು ದೇಶದ ಪ್ರಧಾನ ಮಂತ್ರಿಯಾಗಿ ಈ ದೇಶದ ಕೀರ್ತಿಯನ್ನು ಹೆಚ್ಚಿಸಿದವರು, ವಿಶ್ವ ಮಾನವ ಸಂದೇಶವನ್ನು ಪ್ರಪಂಚಕ್ಕೆ ಸಾರಿದ ರಾಷ್ಟ್ರಕವಿ ಕುವೆಂಪುರವರು ಇದೇ ಸಮುದಾಯದವರು. ಸಾಮಾಜಿಕ ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ, ಹಾಗೂ ಆರ್ಥಿಕವಾಗಿ ಈ ಸಮುದಾಯ ದೇಶಕ್ಕೆ ತನ್ನದೇ ಆದ ಅನೇಕ ಕೊಡುಗೆಗಳನ್ನು ನೀಡಿದೆ ಮತ್ತು ನೀಡುತ್ತಿದೆ. ಭಗವಾನ್ ರವರ ಹೇಳಿಕೆಯು ಅಸಮರ್ಥನೀಯ ಅಸಂವಿಧಾನಿಕವಾಗಿದ್ದು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘವು ಅವರ ಹೇಳಿಕೆಯನ್ನು ಖಂಡಿಸುತ್ತದೆ ಮತ್ತು ಸರ್ಕಾರವು ಅವರ ವಿರುದ್ದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಗ್ರಹಿಸಿದರು.

             

Related posts

ಕೊಕ್ಕಡ ಜಂಕ್ಷನ್ ಹದಗೆಟ್ಟ ರಸ್ತೆ: ದುರಸ್ತಿಗೆ ಆಗ್ರಹಿಸಿ ರಸ್ತೆ ಮಧ್ಯ ಬಾಳೆ ಗಿಡ ನೆಟ್ಟು ಎಚ್ಚರಿಕೆ

Suddi Udaya

ಬೆಳ್ತಂಗಡಿ : ವಿಕಲಚೇತನ ವ್ಯಕ್ತಿಯನ್ನು ಮನೆಯವರು ಎತ್ತಿಕೊಂಡು ಮತಗಟ್ಟೆಗೆ ಹೋಗಿ ಮತ ಚಲಾವಣೆ

Suddi Udaya

ವಾಣಿ ಕಾಲೇಜಿನ ಪರಂಪರಾ ವೇದಿಕೆಯಿಂದ ಉಪನ್ಯಾಸ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಪೃಥ್ವಿ ಜುವೆಲ್ಸ್ ನಲ್ಲಿ ಬಂಪರ್ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಕೊಕ್ಕಡ: ಸಂಗಮ ಹಾಳೆತಟ್ಟೆ ಉತ್ಪಾದಕ ಘಟಕ ಉದ್ಘಾಟನೆ

Suddi Udaya

ಬಂದಾರು : ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ: ಶಾಸಕ ಹರೀಶ್ ಪೂಂಜ ಭೇಟಿ

Suddi Udaya
error: Content is protected !!