ಕೊಕ್ಕಡ: ಸಂಗಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕೊಕ್ಕಡ ಇದರ ಮಹಾಸಭೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಅ .18 ರಂದು ಜರುಗಿತು
ಅಧ್ಯಕ್ಷರಾಗಿ ಕುಸುಮ, ಉಪಾಧ್ಯಕ್ಷರಾಗಿ ಶಶಿಕಲಾ, ಕಾರ್ಯದರ್ಶಿಯಾಗಿ ಹೇಮಾವತಿ, ಜೊತೆ ಕಾರ್ಯದರ್ಶಿಯಾಗಿ ವನಿತಾ, ಕೋಶಾಧಿಕಾರಿಯಾಗಿ ನಳಿನಿ, ಒಟ್ಟು 15 ಪದಾಧಿಕಾರಿಗಳು ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಮಾದರಿ ಸಂಜೀವಿನಿ ಸಂಘ ಮಾತೃಶ್ರೀ ಸಂಜೀವಿನಿ , ಘನ ತ್ಯಾಜ್ಯ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಉತ್ತಮವಾಗಿ ಕೆಲಸ ನಿರ್ವಹಿಸಿದ ಹಿಂದಿನ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರತಿಮಾ , nrlm ಯೋಜನೆಯ ಸದುದ್ದೇಶ ಹಾಗೂ ಕೈಗೊಳ್ಳಬಹುದಾದ ವಿವಿಧ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು, ತಾಲೂಕು ಮೇಲ್ವಿಚಾರಕರಾದ ವೀಣಾಶ್ರೀ , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ದೀಪಕ್ ರಾಜ್ , ಎಮ್.ಬಿ.ಕೆ, ಎಲ್.ಸಿಆರ್.ಪಿ, ಕೃಷಿ ಸಖಿ, ಸಂಜೀವಿನಿ ಸಂಘದ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.
ಅಂಬಿಕಾ ನಿರೂಪಿಸಿದರು. ಗಾಯತ್ರಿ (ಕೃಷಿ ಸಖಿ )ಸ್ವಾಗತಿಸಿದರು. ಯಶೋಧ (LCRP) ವರದಿ ಮಂಡಿಸಿದರು, ಸಾವಿತ್ರಿ (LCRP ) ಧನ್ಯವಾದವಿತ್ತರು.