24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ: ಶ್ರೀ ಭ್ರಾಮರಿ ಕುಣಿತ ಭಜನಾ ತಂಡದ ಎರಡನೇ ವರ್ಷದ ‘ಭಕ್ತಿಹೆಜ್ಜೆ’ ಕಾರ್ಯಕ್ರಮ

ಗುರುವಾಯನಕೆರೆ: ಶ್ರೀ ಭ್ರಾಮರಿ ಕುಣಿತ ಭಜನಾ ತಂಡ ಇದರ ಎರಡನೇ ವರ್ಷದ ‘ಭಕ್ತಿಹೆಜ್ಜೆ’ ಕಾರ್ಯಕ್ರಮವನ್ನು ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿರುವ ಶ್ರೀ ರಾಜರಾಜೇಶ್ವರಿ ದೇವಿಯ ಸನ್ನಿಧಿಯಲ್ಲಿ ಅ. 17ರಂದು ನಡೆಸಲಾಯಿತು.

ಕಾರ್ಯಕ್ರಮವನ್ನು ಗುರುವಾಯನಕೆರೆ ಹವ್ಯಕ ಸಭಾದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಗೋವಿಂದ ಶಾಸ್ತ್ರಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗುರುವಾಯನಕೆರೆ ಹವ್ಯಕ ಸಭಾದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕೇಶವ ಭಟ್ ಅತ್ತಾಜೆ, ಮುರಳೀಧರ ಭಟ್, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಜಯಂತಿ ಏಕನಾಥ ಶೆಟ್ಟಿ ಹಾಗೂ ಬ್ರಾಮರಿ ಕುಣಿತ ಭಜನಾ ಮಂಡಳಿ ಗುರುಗಳು ಸಂದೇಶ್ ಮದ್ದಡ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಒಟ್ಟು 65 ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಹೆತ್ತವರು ಹಾಗೂ ಭಕ್ತಾದಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಜೆ ದೀಪ ಪ್ರಜ್ವಲನೆ ಮಾಡಿ ಆರಂಭ ಮಾಡಿದ ಕುಣಿತ ಭಜನಾ ಕಾರ್ಯಕ್ರಮ ರಾತ್ರಿ 8-30 ಕ್ಕೆ ಮಂಗಲದೊಂದಿಗೆ ಸಮಾಪನೆಗೊಂಡಿದ್ದು ನಂತರ ಶ್ರೀ ರಾಜರಾಜೇಶ್ವರಿ ದೇವಿಗೆ ಶ್ರೀ ಬ್ರಾಮರಿ ಕುಣಿತ ಭಜನಾ ಮಂಡಳಿ ವತಿಯಿಂದ ರಂಗಪೂಜೆ ಕಾರ್ಯಕ್ರಮ ನೆರವೇರಿತು.

ಇದೇ ಸಂದರ್ಭದಲ್ಲಿ ಶ್ರೀ ಬ್ರಾಮರಿ ಕುಣಿತ ಭಜನಾ ಮಂಡಳಿ ಗುರುಗಳು ಸಂದೇಶ್ ಮದ್ದಡ್ಕ ಮತ್ತು ಅವರ ಪತ್ನಿಗೆ ವಿದ್ಯಾರ್ಥಿಗಳ ಪರವಾಗಿ ಶಾಲು ಹಾಕಿ ಫಲಪುಷ್ಪ ನೀಡಿ ಗೌರವ ಸಮರ್ಪಣೆ ಮಾಡಲಾಯಿತು.

Related posts

ಪಟ್ರಮೆ : ಮುಂಡೂರುಪಳಿಕೆ ನಿವಾಸಿ ವಸಂತಿ ನಿಧನ

Suddi Udaya

ಇಳಂತಿಲ: ಕುಮೇರುಜಾಲು ನಿವಾಸಿ ವೀರಮ್ಮ ನಿಧನ

Suddi Udaya

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಉಜಿರೆ: ಎಸ್.ಡಿ.ಎಂ. ಐ.ಟಿ. ಗ್ರಂಥಪಾಲಕರಿಗಾಗಿ ಒಂದು ದಿನದ ಕಾರ್ಯಾಗಾರ

Suddi Udaya

ಬಿಲ್ಲವ ಫ್ಯಾಮಿಲಿ‌ ದುಬೈ ವತಿಯಿಂದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆಯವರಿಗೆ ಗೌರವ ಸನ್ಮಾನ

Suddi Udaya

ಕೊಯ್ಯುರು:ದ.ಕ. ಜಿಲ್ಲಾ ಮಟ್ಟದ ಮಲೆಕುಡಿಯರ ಸಮಾವೇಶ

Suddi Udaya
error: Content is protected !!