ಉಜಿರೆ: ಕೊಲ್ಲೂರಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದೆಡೆಗೆ ಭಕ್ತರು ಕೈಗೊಂಡಿರುವ ಧರ್ಮಸಂರಕ್ಷಣಾ ಯಾತ್ರೆಯ ಬಗ್ಗೆ ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಮಾಲೋಚನ ಸಭೆಯು ಅ.20 ರಂದು ನಡೆಯಿತು.
ಕೊಲ್ಲೂರಿನ ಅಪ್ಪಣ್ಣ ಹೆಗ್ಡೆ ಮತ್ತು ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣರವರ ಸಂಚಾಲಕತ್ವದಲ್ಲಿ ಈ ಧರ್ಮಸಂರಕ್ಷಣಾ ರಥ ಯಾತ್ರೆ ನಡೆಯಲಿದೆ.
ಧರ್ಮ ಸಂರಕ್ಷಣಾ ಯಾತ್ರೆಯ ಯಶಸ್ಸಿಗಾಗಿ ಧರ್ಮಜಾಗೃತಿ ಸಮಿತಿ ರಚಿಸಿದ್ದು ಪ್ರಧಾನ ಸಂಚಾಲಕರಾಗಿ ಬರೋಡ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಆಯ್ಕೆಯಾದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್ ವಹಿಸಿದ್ದರು.
ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಎಲ್ಲರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲ ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ವಸಂತ ಗಿಳಿಯಾರ್, ಲಕ್ಷ್ಮಿ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್, ಉಜಿರೆ ಎಸ್ ಡಿ ಎಂ ಶಿಕ್ಷ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ, ಮಹೇಶ್ ತುಪ್ಪೆಕಲ್ಲು, ರಾಜು ಪೂಜಾರಿ, ಹರ್ಷೇಂದ್ರ ಜೈನ್ ಬೆಂಗಳೂರು, ಪೂರನ್ ವರ್ಮ, ಸುಬ್ರಹ್ಮಣ್ಯ ಪ್ರಸಾದ್, ಅಶೋಕ್ ಭಟ್ ಉಜಿರೆ, ಡಾ.ಜಯಕುಮಾರ್ ಶೆಟ್ಟಿ, ಬಿ ಎ ಕುಮಾರ್ ಹೆಗ್ಡೆ,ಯೋಗೀಶ್ ಕುಮಾರ್ ಕೆ.ಎಸ್,ಡಾ.ಎಂ.ಎಂ ದಯಾಕರ್, ಗಣೇಶ್ ಬೆನಕ, ರಾಜೇಶ್ ಶೆಟ್ಟಿ ನವಶಕ್ತಿ,ಶಾರಾದ ಆರ್ ರೈ,ಎಂ.ಪಿ ಶ್ರೀನಾಥ್, ಪಿ.ಕೆ ರಾಜು ಪೂಜಾರಿ, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಿರಿಯ ನ್ಯಾಯವಾದಿ ಬಿ.ಕೆ.ಧನಂಜಯ ರಾವ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.