April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳಾಲು ಗ್ರಾ.ಪಂ. ವತಿಯಿಂದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮನೆ ಮನೆ ಜಾಥಾ ಅಭಿಯಾನ ಮತ್ತು ಸ್ವಚ್ಚತಾ ಕಾರ್ಯಕ್ರಮ

ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗ್ರಾ.ಪಂ ಬೆಳಾಲು, ಉಜಿರೆ ಎಸ್.ಡಿ.ಎಮ್ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೇಜನೆ ಘಟಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಬೆಳಾಲು, ಗ್ರಾಮ ಅರಣ್ಯ ಸಮಿತಿ ಕುಂಡಡ್ಕ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳಾಲು ಹಾಗೂ ನಾಗಾಂಬಿಕ ಸಂಜೀವಿನಿ ಮಹಿಳಾ ಒಕ್ಕೂಟ ಗ್ರಾ.ಪಂ ಬೆಳಾಲು ಇದರ ಸಹಯೋಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ಕ್ರಿಯಾ ಯೋಜನೆಗೆ ಸಂಬಂಧಪಟ್ಟಂತೆ ಮನೆ ಮನೆ ಜಾಥಾ ಅಭಿಯಾನ ಮತ್ತು ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ-ಸೇವಕಿಯರು ಬೆಳಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿ ಮತ್ತು ಕಾಲನಿಗಳ ದಾರಿಯಲ್ಲಿದ್ದ ಒಣ ಕಸಗಳನ್ನು ಸಂಗ್ರಹಿಸುವುದರೊಂದಿಗೆ ಮನೆ ಮನೆಗೆ ತೆರಳಿ ಉದ್ಯೋಗ ಖಾತರಿ ಕುರಿತು ಕರಪತ್ರ ವಿತರಿಸಿ‌, ಮಾಹಿತಿ ನೀಡಿದರು.

ಮನೆ ಮನೆ ಜಾಥಾ ಅಭಿಯಾನದಡಿ ಸ್ವಚ್ಚತಾ ವಾಹನದಲ್ಲಿ ಮಹಾತ್ಮ ಗಾಂಧಿ ನರೇಗಾ ಯೇಜನೆ ಕುರಿತಾದ ಜಿಂಗಲ್ ಮೂಲಕ ಪ್ರಚಾರ ಮಾಡಲಾಯಿತು ಮತ್ತು ಸ್ವಚ್ಚತೆಯ ಕುರಿತು ರಾಷ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ-ಸೇವಕಿಯರು ಬೀದಿ ನಾಟಕ ಪ್ರದರ್ಶಿಸಿದರು.

ಈ ಕಾರ್ಯಕ್ರಮದಲ್ಲಿ ಬೆಳಾಲು ಗ್ರಾ.ಪಂ ನ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡ, ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಹಾಗೂ ಸದಸ್ಯರು ,ಗ್ರಾ.ಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲಕ್ಷ್ಮೀಬಾಯಿ, ಕಾರ್ಯದರ್ಶಿ ಮೋಹನ್ ಬಂಗೇರ , ಉಜಿರೆ ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಪ್ರಕಾಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಬೆಳಾಲಿನ ಸದಸ್ಯರು, ಕುಂಡಡ್ಕ ಗ್ರಾಮ ಅರಣ್ಯ ಸಮಿತಿಯ ಸದಸ್ಯರು ,ನಾಗಾಂಬಿಕ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮಧುರಾ,ಎಂಬಿಕೆ ಶ್ರೀಮತಿ ಹರಿಣಾಕ್ಷಿ ಸಮುದಾಯ ಆರೋಗ್ಯ ಅಧಿಕಾರಿ ಕು.ತೇಜಾವತಿ,ಆಶಾಕಾರ್ಯಕರ್ತೆಯರು ಸಿಬ್ಬಂದಿಗಳಾದ ಮಂಜುನಾಥ, ಭುವನೇಶ್, ಕು.ಶ್ರೇಷ್ಠ, ಕು.ಪೂರ್ಣಿಮಾ ಉಪಸ್ಥಿತರಿದ್ದರು.

Related posts

ಬಂದಾರು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

Suddi Udaya

ಉಜಿರೆ: ಕಿಂಗ್ & ಕ್ವಿನ್ ಯುನಿಸೆಕ್ಸ್ ಸೆಲೂನ್ ನಲ್ಲಿ ವಿಶೇಷ ಆಫರ್ ಗಳು; ಗ್ರಾಹಕರಿಗೆ 30% ರಿಯಾಯಿತಿ, ಫೆ.28 ರವರೆಗೆ ಮಾತ್ರ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಮತ್ತು ಡಿ.ಎಡ್. ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

Suddi Udaya

ಬೆಳ್ತಂಗಡಿ ಬಂಟರ ಸಂಘದ ಮಡಂತ್ಯಾರು ವಲಯದ ಸಭೆ :ಗ್ರಾಮ ಸಮಿತಿ ರಚನೆ

Suddi Udaya

ಉಜಿರೆಯ ಸ್ಮಾರ್ಟ್ ಮೊಬೈಲ್ ಕೇರ್ ನಲ್ಲಿ ಕಳ್ಳತನ: ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಮಹಾಗಣಪತಿ ದೇವರ ಪೂಜೆಯನ್ನು ಸುದೀರ್ಘ ಕಾಲ ನೇರವೇರಿಸಿದ ಬಾಲಕೃಷ್ಣ ಭಟ್ ನಿಧನ

Suddi Udaya
error: Content is protected !!