ಬೆಳ್ತಂಗಡಿ: ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ (ತಾಳೆ ಎಣ್ಣೆ) ಯೋಜನೆಯಡಿ 2023 -24ನೇ ಸಾಲಿನಲ್ಲಿ ತಾಳೆ ಬೆಳೆ ಹೊಸ ಪ್ರದೇಶ ವಿಸ್ತರಣೆ ಕೈಗೊಳ್ಳುವ ರೈತರಿಗೆ ಪ್ರೋತ್ಸಾಹಧನ ಲಭ್ಯವಿದೆ. ಆಸಕ್ತ ರೈತರು ತಮ್ಮ ಜಮೀನಿನ ಪಹಣಿ (RTC) ಮತ್ತು ಆಧಾರ್ ಪ್ರತಿ ಹಾಗೂ ಅರ್ಜಿಯೊಂದಿಗೆ ನ.30 ರೊಳಗೆ ತೋಟಗಾರಿಕೆ ಇಲಾಖೆ (ಜಿ ಪಂ) ಬೆಳ್ತಂಗಡಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದು.
ತಾಳೆಬೆಳೆ ಬೆಳೆಯಲು ತೋಟಗಾರಿಕೆ ಇಲಾಖೆಯಿಂದ ಅನುಮೋದಿತ ಕಂಪನಿಗಳಿಂದ ಗಿಡಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ, ಗಿಡಗಳ ನಿರ್ವಹಣೆಗೆ ಮೂರು ವರ್ಷಗಳ ನಿರ್ವಹಣ ವೆಚ್ಛ ಫಸಲನ್ನು ಖರೀದಿಸಲು ಕಂಪನಿಯವರಿಂದ ಅನುಕೂಲವೂ ಇದೆ. ತಾಳೆ ಬೆಳೆ ಬೆಂಬಲ ಬೆಲೆಯೂ ದೊರೆಯಲಿದೆ. ಹನಿ ನೀರಾವರಿ ಯಾಂತ್ರಿಕರಣ ಸಹಾಯಧನ ಸೌಲಭ್ಯವಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಬೆಳ್ತಂಗಡಿ ಹೋಬಳಿ ಮಹಾವೀರ ಶೇಬಣ್ಣವರ 8123921087, ವೇಣೂರು ಹೋಬಳಿ ಭೀಮರಾಯ ಸೊಡ್ಡಗಿ ಮೊಬೈಲ್ ನಂ: 9741713598, ಕೊಕ್ಕಡ ಹೋಬಳಿ ಮಲ್ಲಿನಾಥ ಬಿರಾದಾರ, ಮೊಬೈಲ್ ನಂ: 9986411477, ಸಹಾಯಕ ತೋಟಗಾರಿಕೆ ನಿರ್ದೇಶಕರು ಕೆ.ಎಸ್. ಚಂದ್ರಶೇಖರ್, ಮೊಬೈಲ್ ನಂ: 9448336863 ಸಂಪರ್ಕಿಸಬಹುದು.