27.7 C
ಪುತ್ತೂರು, ಬೆಳ್ತಂಗಡಿ
March 28, 2025
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆ: ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಗುಡ್ಡ ಗಾಡು ಓಟ

ಉಜಿರೆ: ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಉಜಿರೆ ಇವರ ಜಂಟಿ ಆಶ್ರಯದಲ್ಲಿ ಬಾಲಕ-ಬಾಲಕಿಯರ ಗುಡ್ಡ ಗಾಡು ಓಟ ಅ.21ರಂದು ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ ಉಜಿರೆಯಲ್ಲಿ ಜರುಗಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಧನರಾಜ್ ಪಿ.ಎಂ ನೆರವೇರಿಸಿದರು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರುರಾದ ಪ್ರಮೋದ್ ಕುಮಾರ್. ಬಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅಬ್ಯಾಗತರಾದ ವಿನಯಚಂದ್ರ ಆಳ್ವ ಗಸ್ತು ವನಪಾಲಕ ಅರಣ್ಯ ಇಲಾಖೆ ಬೆಳಾಲು ಇವರು ಉಪಸ್ಥಿತರಿದ್ದರು.

ಮಹಾವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಿತ್ ರೈ ಸ್ವಾಗತಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಬಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ನಿವೃತ್ತ ಪ್ರಾಂಶುಪಾಲರು ಪ್ರೊ. ಎನ್ ದಿನೇಶ್ ಚೌಟ ಆಗಮಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಜಿಲ್ಲಾ ಕ್ರೀಡಾ ಸಂಯೋಜಕರು ಅರುಣ್ ಡಿ ಸೋಜಾ, ಉಪಪ್ರಾಂಶುಪಾಲರಾದ ರಾಜೇಶ್ , ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್, ನವೀನ್ ಜೈನ್ ಪದವಿಪೂರ್ವ ಕಾಲೇಜ್ ಮೂಡಬಿದ್ರೆ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಉಪನ್ಯಾಸಕ ಸಂದೇಶ್ ಪೂಂಜಾ ಕಾರ್ಯಕ್ರಮ ನಿರೂಪಿಸಿದರು. ಸುನಿಲ್ ಪಿ.ಜೆ ವಂದಿಸಿದರು.

ಬಾಲಕರ ವಿಭಾಗದಲ್ಲಿ ಒಟ್ಟು 10 ಕಾಲೇಜುಗಳ 46 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಒಟ್ಟು 7 ಕಾಲೇಜುಗಳ36 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.

ಬಾಲಕರ ವಿಭಾಗದಲ್ಲಿ ಪ್ರಥಮ: ಯಶವಂತ್ ಕೆ, ದ್ವಿತೀಯ:ಚಿರೇಶ್ ಗೌಡ,ತೃತೀಯ: ರಘುವೀರ ಆಳ್ವಾಸ್ ಕಾಲೇಜು ಮೂಡಬಿದ್ರೆ ನಾಲ್ಕನೇ ಸ್ಥಾನ : ಆದಿತ್ಯ ಎ ನ್. ಪೀ ಹಾಗೂ ಐದನೇ ಸ್ಥಾನ : ನಿತಿನ್ ಯು. ಎಲ್ ಉಜಿರೆ ಹಾಗೂ ಶ್ರಾವಣ ಕೆ. ಪಿ ಸೈಂಟ್ ಫಿಲೋಮಿನಾ ಆರನೇ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.

ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಚಿತ್ರ ಟಿ. ದ್ವಿತೀಯ ಸ್ಥಾನ: ಪೀ ಗೀತಾ ಬಿ ಆಳ್ವಾಸ್ ಕಾಲೇಜು, ತೃತೀಯ ಸ್ಥಾನ ಶ್ರದ್ದಾ ಎಸ್ ಎಸ್ ಪಿಯು ಕಾಲೇಜು ಸುಬ್ರಹ್ಮಣ್ಯ, ನಾಲ್ಕನೇ ಸ್ಥಾನ ರೀತು ಶ್ರೀ , ಐದನೇ ಸ್ಥಾನ ಪ್ರಮೀಳಾ ಎಸ್.ಜಿ, ಆರನೇ ಸ್ಥಾನ ದೀಕ್ಷಿತ ಬೆಥನಿ ಪಿಯುಸಿ ಕಾಲೇಜು ನುಜಿಬಳ್ತಿಲ ಪಡೆದು ಮೊದಲ ಆರು ಸ್ಪರ್ಧಿಗಳು ಪದಕ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

ಬಾಲಕರ ವಿಭಾಗದಲ್ಲಿ ಪ್ರಥಮ ಆಳ್ವಾಸ್ , ದ್ವಿತೀಯ ಎಸ್ ಡಿ ಎಂ ಕಾಲೇಜು ಉಜಿರೆ, ತೃತೀಯ ಬೆಥನಿ ಪಿಯು ಕಾಲೇಜು ನುಜಿಬಳ್ತಿಲ, ಬಾಲಕಿಯರ ವಿಭಾಗದಲ್ಲಿ ಪ್ರಥಮ ಆಳ್ವಾಸ್, ದ್ವಿತೀಯ ಬೆಥನಿ ಪಿಯು ಕಾಲೇಜು ನೂಜಿಬಳ್ತಿಲ, ತೃತೀಯ ಎಸ್ ಡಿ ಎಂ ಪಿಯು ಕಾಲೇಜು ಉಜಿರೆ.

Related posts

ಶಿಬರಾಜೆ ಅಂಗನವಾಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಕಳಿಯ ಕುದುರೆ ಕಲ್ಲು ಅಕೇಶಿಯ ಮೀಸಲು ನೆಡುತೋಪು ಪ್ರದೇಶದ ರಸ್ತೆಯಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು : ನಾಗರಿಕರಲ್ಲಿ ಸೃಷ್ಟಿಯಾದ ಆತಂಕ

Suddi Udaya

ಪದ್ಮುಂಜ ಮುಗೇರಡಿ ನಿವಾಸಿ ಸುಶೀಲ ಶೆಟ್ಟಿ ನಿಧನ

Suddi Udaya

ಬೆಳಾಲು ಶ್ರೀ ಧ.ಮಂ.ಪ್ರೌ. ಶಾಲೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಕಥೆಗಳಲ್ಲಿ ಜೀವನ ಮೌಲ್ಯ ಉಪನ್ಯಾಸ ಕಾರ್ಯಕ್ರಮ

Suddi Udaya

ನಾರಾವಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ

Suddi Udaya

ಬಳ್ಳಮಂಜ: ಶ್ರೀ ಸಿದ್ದಿವಿನಾಯಕ ಭಜನಾ ಮಂದಿರ ದಲ್ಲಿ ಸಾರ್ವಜನಿಕ ತೆನೆ ಹಬ್ಬ ಹಾಗೂ ಆಯುಧ ಪೂಜೆ

Suddi Udaya
error: Content is protected !!