29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಸರತ್ತ್ ತುಳು ವೆಬ್ ಸೀರೀಸ್ ನ ಮೊದಲ ಪೋಸ್ಟರ್ ಬಿಡುಗಡೆ

ಬೆಳ್ತಂಗಡಿ : ಸ್ವಯಂ ಪ್ರಭ ಎಂಟರ್ಟೈನ್ಮೆಂಟ್ ಆಂಡ್ ಪ್ರೊಡಕ್ಷನ್ಸ್ ಹಾಗೂ ಬೋಧಿ ಪ್ರೊಡಕ್ಷನ್ ಪ್ರಸ್ತುತ ಪಡಿಸುವ, ಟಾಕೀಸ್ ಆಪ್ ನಲ್ಲಿ ಬಿಡುಗಡೆಗೊಳ್ಳಲಿರುವ ಯುವ ಪ್ರತಿಭೆ ತುಷಾರ್ ಹೆಗ್ಡೆ ವೇಣೂರು ನಿರ್ದೇಶಿಸಿದ ತುಳು ವೆಬ್ ಸೀರೀಸ್ ಕಸರತ್ತ್ ಇದರ ಮೊದಲ ಪೋಸ್ಟರ್ ಬಿಡುಗಡೆಗೊಂಡಿದೆ.

ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಜೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಕಾಪಿನಡ್ಕ, ಸೂರಜ್ ಕುಮಾರ್, ರಾಕೇಶ್ ಪೂಜಾರಿ ಮುಖ್ಯ ಭೂಮಿಕೆಯ ಈ ಸೀರೀಸ್ ನಲ್ಲಿ ನವ್ಯಾ ಪೂಜಾರಿ ನಾಯಕಿಯಾಗಿ ನಟಿಸಿದ್ದಾರೆ . ಮೊದಲ ಬಾರಿಗೆ ಜೀ ಕನ್ನಡ ಕಾಮಿಡಿ ಖಿಲಾಡಿ ಅನೀಶ್ ಅಮೀನ್ ವೇಣೂರು ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ ಜೊತೆ ಗೆ ಮುಖ್ಯ ಪಾತ್ರಗಳಲ್ಲಿ ಜೀ ಕನ್ನಡ ಕಾಮಿಡಿ ಖಿಲಾಡಿ ಖ್ಯಾತಿಯ ಪ್ರವೀಣ್ ಜೈನ್, ಧೀರಜ್ ನೀರುಮಾರ್ಗ, ರಾಧೇಶ್ ಶೆಣೈ, ದಿವ್ಯ ಅಂಚನ್ ವೇಣೂರು ನಟಿಸಿದ್ದಾರೆ.


ಜೊತೆಗೆ ಚಂದ್ರಶೇಖರ್ ಹೊಕ್ಕಡಿಗೋಳಿ, ಮನೀಶ್ ಶೆಟ್ಟಿ, ಸುಕೇಶ್ ವೇಣೂರು, ದೀಕ್ಷಿತ್ ಅಂಡಿಂಜೆ, ನಿಶಿತ್ ಶೆಟ್ಟಿ ಮುಂತಾದ ಕಾಮಿಡಿ ದಿಗ್ಗಜರು ಈ ಚಿತ್ರದಲ್ಲಿ ನಟಿಸಿದ್ದಾರೆ.


ಕೆ ರತ್ನಾಕರ್ ಕಾಮತ್ ಅವರು ನಿರ್ಮಿಸಿ; ಗಣೇಶ್ ಎಂ ಉಜಿರೆ, ರಿತೇಶ್ ಗೌಡ ವೇಣೂರು, ನೆಲ್ವಿಸ್ಟರ್ ಗ್ಲಾನ್ ಪಿಂಟೋ ಸಹಕಾರದ ಈ ಚಿತ್ರಕ್ಕೆ ಮಾನಸ ಹೊಳ್ಳ ಅವರ ಸಂಗೀತ, ಸಂತೋಷ್ ಗುಂಪಾಲಜೆ ಅವರ ಛಾಯಾಗ್ರಾಹಣ, ಗಣೇಶ್ ನಿರ್ಚಲ್ ಅವರ ಸಂಕಲನ, ಸುಕೇಶ್ ಶೆಟ್ಟಿ ಅವರ ಸಾಹಿತ್ಯ, ಕಾಮಿಡಿ ಕಿಲಾಡಿ ಸೂರಜ್ ಕುಮಾರ್ ಅವರ ನೃತ್ಯ ನಿರ್ದೇಶನ, ಅವಿನಾಶ್ ನಾತು ಮತ್ತು ಪ್ರಣೀತ್ ಜೈನ್ ಅವರ ಕಲೆ ಈ ಚಿತ್ರಕ್ಕಿದೆ. ಸ್ಮಿತೇಶ್ ಎಸ್ ಬಾರ್ಯ ಮತ್ತು ಅನೀಶ್ ಅಮೀನ್ ವೇಣೂರು ತಾಂತ್ರಿಕ ಮೇಲ್ವಿಚಾರಣೆಯ ಚಿತ್ರಕ್ಕೆ ದೀಕ್ಷಿತ್ ಕೆ ಅಂಡಿಂಜೆ ನಿರ್ಮಾಣ ನಿರ್ವಹಣೆ ಇದೆ. ವಿನಯ್ ಕುಮಾರ್ ಉಜಿರೆ, ನಿರಾಜ್ ಕುಂಜಾರ್ಪ, ದೀಕ್ಷಿತ್ ಭಂಡಾರಿ, ನಿಶಿತ್ ಶೆಟ್ಟಿ ನಿರ್ದೇಶನ ತಂಡದಲ್ಲಿ ಸಹಕಾರಿಸಿದ್ದಾರೆ. ಈ ಸೀರೀಸ್ ಆದಷ್ಟು ಶೀಘ್ರದಲ್ಲಿ ಟಾಕೀಸ್ ಆಪ್ ನಲ್ಲಿ ಬಿಡುಗಡೆಗೊಳ್ಳಲಿದೆ.

Related posts

ಕನ್ಯಾಡಿ : ಹಿಂದೂ ಸಂಘಟಕರಿಂದ ಹನುಮಾನ್ ಚಾಲೀಸಾ ಪಠಣ

Suddi Udaya

ಶಿಶಿಲ: ನಾಗನಡ್ಕದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ: ಆಸ್ಪತ್ರೆಗೆ ದಾಖಲಿಸಿದ ಶೌರ್ಯ ವಿಪತ್ತು ನಿರ್ವಹಣಾ ತಂಡ

Suddi Udaya

ವೇಣೂರು: ನೇಮಕ್ಕು ನಿಧನ

Suddi Udaya

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಪಕ್ಕಳ ಭೇಟಿ

Suddi Udaya

ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ. 94.11 ಫಲಿತಾಂಶ

Suddi Udaya

ಮುಂಡಾಜೆ ಪಂಚಾಯತ್ ನಲ್ಲಿ ಬಟ್ಟೆಯ ಕಸೂತಿ ತಯಾರಿಕೆ ಸ್ವ ಉದ್ಯೋಗ ತರಬೇತಿ ಉದ್ಘಾಟನೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ