April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ವಾಣಿ ಕಾಲೇಜು: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಬೆಳ್ತಂಗಡಿ: ಮಾನವೀಯ ಸಂಬಂಧಗಳ ಮೂಲಕ ಸ್ನೇಹ, ಬಾಂಧವ್ಯ, ರಾಷ್ಟ್ರ ಪ್ರೇಮವನ್ನು ಬೆಳೆಸುವುದೇ ಸಮಾಜ ಸೇವೆಯ ಉದ್ದೇಶವಾಗಿರಬೇಕು ಎಂದು ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರಾದ ಧರಣೇಂದ್ರ ಕೆ.ಜೈನ್ ಹೇಳಿದ್ದರು.


ಅವರು ವಾಣಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಭಾಷಣ ಮಾಡುತ್ತಾ, ನಾವು ನಮ್ಮನ್ನು ಪ್ರೀತಿಸುತ್ತಾ ಸಕ್ರೀಯವಾಗಿ ತೊಡಗಿಸಿಕೊಂಡು ಸಾಧನೆ ಮಾಡಬೇಕು. ಜೀವನದಲ್ಲಿ ಉತ್ತಮ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಬೇಕು. ಹೆತ್ತವರ ಕಣ್ಣಲ್ಲಿ ಆನಂದ ಭಾಷ್ಪ ತರಿಸುವ ವ್ಯಕ್ತಿತ್ವ ನಮ್ಮದಾಗಬೇಕು ಎಂದರು.


ಕಾಲೇಜಿನ ಪ್ರಾಂಶುಪಾಲರಾದ ಡಿ. ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ವಾಣಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ನಾರಾಯಣ ಗೌಡ ದೇವಸ್ಯ, ಜೊತೆ ಕಾರ್ಯದರ್ಶಿಗಳಾದ ಶ್ರೀನಾಥ್ ಕೆ.ಯಂ, ಆಡಳಿತಾಧಿಕಾರಿ ಪ್ರಸಾದ್ ಕುಮಾರ್,ಕುವೆಟ್ಟು ಗ್ರಾಮ ಪಂಚಾಯಿತ್ ನ ಉಪಾಧ್ಯಕ್ಷರಾದ ಗಣೇಶ್.ಕೆ, ಓಡಿಲ್ನಾಳ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ನಿರ್ದೇಶಕರಾದ ನಿರಂಜನ್, ನಿವೃತ್ತ ಮುಖ್ಯೋಪಾಧ್ಯಯರಾದ ದತ್ತಾತ್ರೇಯ ಗೊಲ್ಲ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜ ಪ್ರಕಾಶ್ ಶೆಟ್ಟಿ, ಪಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ನಿವೃತ ಶಿಕ್ಷಕರಾದ ಮೋನಪ್ಪ, ಓಡಿಲ್ನಾಳ ಸರಕಾರಿ ಉನ್ನತಿಕರಿಸಿದ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅರುಣ್ ಸುಮಿತ್, ವಾಣಿ ಪದವಿ ಕಾಲೇಜಿನ ಉಪ ಪ್ರಾಂಶುಲರಾದ ವಿಷ್ಣು ಪ್ರಕಾಶ್ ಎಂ ಉಪಸ್ಥಿತರಿದ್ದರು.


ಉಪನ್ಯಾಸಕ ಬೆಳಿಯಪ್ಪ.ಕೆ ಸ್ವಾಗತಿಸಿದರು. ಸಹ ಶಿಬಿರ ಅಧಿಕಾರಿ ಕುಮಾರಿ ಕಾಮಾಕ್ಷಿ ವರದಿ ವಾಚಿಸಿದರು. ಶಿಬಿರಧಿಕಾರಿ ಶಂಕರ್ ರಾವ್. ಬಿ ಧನ್ಯವಾದ ಸಲ್ಲಿಸಿದರು. ಉಪನ್ಯಾಸಕಿ ಶ್ರೀಮತಿ ರಕ್ಷಾ ಕಾರ್ಯಕ್ರಮ ನಿರೂಪಿಸಿದರು. ವಾಚಿಸಿದರು. ಶಿಬಿರಧಿಕಾರಿ ಶಂಕರ್ ರಾವ್. ಬಿ ಧನ್ಯವಾದ ಸಲ್ಲಿಸಿದರು. ಉಪನ್ಯಾಸಕಿ ಶ್ರೀಮತಿ ರಕ್ಷಾ ಕಾರ್ಯಕ್ರಮ ನಿರೂಪಿಸಿದರು.

Related posts

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

Suddi Udaya

ಸುದ್ದಿ ಉದಯ ಪತ್ರಿಕೆಯ ಸೌಮ್ಯರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಚಾಮಾ೯ಡಿ : ಮರಳು ಸಾಗಾಟದ ಲಾರಿ ವಶ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಮೋಡ್ ಚೇರ್ ವಿತರಣೆ

Suddi Udaya

11ನೇ ಶತಮಾನ ಕ್ರಿ.ಶ. 1260 ರಲ್ಲಿ ನಿರ್ಮಾಣವಾದ ಕ್ಷೇತ್ರ: ಮೇ 3ರಿಂದ ನಾರಾವಿ ಬಸದಿಯ ಧಾಮ ಸಂಪ್ರೋಕ್ಷಣೆ

Suddi Udaya

ಪಡಂಗಡಿ:ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆ, ಮನೆಗೆ ಗುಡ್ಡ ಕುಸಿತ, ಹಾನಿ

Suddi Udaya
error: Content is protected !!