September 6, 2026
ಅಪಘಾತ

ನಾರಾವಿ ಚರ್ಚ್‌ ರೋಡ್‌ ಬಳಿ ಕಾರು ಡಿಕ್ಕಿ : ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಮೃತ್ಯು

ನಾರಾವಿ : ನಾರಾವಿ ಚರ್ಚ್‌ ರೋಡ್‌ ಬಳಿ ನಾರಾವಿ-ಕಾರ್ಕಳ ಸಾರ್ವಜನಿಕ ರಸ್ತೆಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗೆ ಕಾರು ಡಿಕ್ಕಿ ಹೊಡೆದು ಪಾದಚಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ.

ಅ. 21 ರಂದು ರಾತ್ರಿ ಸುಮಾರು 10.50 ಗಂಟೆಗೆ ನಾರಾವಿ ಗ್ರಾಮದ ನಾರಾವಿ ಚರ್ಚ್‌ ರೋಡ್‌ ಬಳಿ ನಾರಾವಿ-ಕಾರ್ಕಳ ಸಾರ್ವಜನಿಕ ರಸ್ತೆಯಲ್ಲಿ ಕಾರು ನಂಬ್ರ ಕೆಎ 19 ಎಮ್‌ .ಎ 685 ಇದರ ಚಾಲಕ ಚೇತನ್ ರಾಜ್ ಎಂಬವರು ಕಾರ್ಕಳ ಕಡೆಯಿಂದ ನಾರಾವಿ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಒಮ್ಮೆಲೇ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ ಓಡಿಲ್ನಾಳ ಗ್ರಾಮದ ಕಟ್ಟದಬೈಲು ಮನೆ ನಿವಾಸಿ ಶ್ರೀಮತಿ ಬಬಿತಾ ಅವರ ಗಂಡ: ಸುಧಾಕರ ಪೂಜಾರಿ, ಹಾಗೂ ಮಹೇಶರವರು ನಡೆದುಕೊಂಡು ಬರುತ್ತಿರುವ ಸಮಯ ಬಬಿತರವರ ಬಲಗೈಗೆ ತಾಗಿ ಅವರ ಹಿಂದಿನಿಂದ ಬರುತ್ತಿದ್ದ ಮಹೇಶ ಎಂಬವರಿಗೆ ರಭಸದಿಂದ ಡಿಕ್ಕಿ ಹೊಡೆದಿತ್ತು ಎನ್ನಲಾಗಿದೆ .

ಡಿಕ್ಕಿ ಹೊಡೆದ ಪರಿಣಾಮ ಮಹೇಶರವರು ರಸ್ತೆಗೆ ಬಿದ್ದು ತಲೆಗೆ, ಮುಖಕ್ಕೆ ಹಾಗೂ ಕೈ-ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು , ಪ್ರಜ್ಙಾ ಹೀನರಾಗಿದ್ದವರನ್ನು ಕೂಡಲೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ. ಎಂ. ಸಿ ಆಸ್ಪತ್ರೆಗೆ ಕರೆದು ಹೋದಾಗ ವೈದ್ಯರು ಪರೀಕ್ಷಿಸಿ ಮಹೇಶರವರು ಮೃತಪಟ್ಟಿರುವುದಾಗಿ ತಿಳಿಸಿದರು.

ಕೈಗೆ ಗಾಯದ ಬಬಿತಾ ಅವರು ಅ. 22 ರಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಬಗ್ಗೆ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರು ಚಾಲಕ ಚೇತನ್ ರಾಜ್ ಎಂಬವರ ಮೇಲೆ ವೇಣೂರು ಪೊಲೀಸ್ ಠಾಣಾ 70/2023 ಕಲಂ: 279, 337, 304(A) IPC ಕೇಸು ದಾಖಲಾಗಿದೆ.

Related posts

ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಲೇ ಆತ್ಮಹತ್ಯೆಗೆ ಶರಣಾದ ಕಾಜೂರಿನ ಸಯ್ಯದ್ ಅನ್ವರ್

Suddi Udaya

ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

Suddi Udaya

ಉಜಿರೆ ಪ್ರಮೋದ್ ಗೌಡ ರವರ ಚಿಕಿತ್ಸಾ ನೆರವಿಗೆ ಮನವಿ

Suddi Udaya

ಉಪ್ಪಿನಂಗಡಿ: 70 ಅಡಿ ಆಳದ ಹೊಂಡಕ್ಕೆ ಬಿದ್ದ ಕಾರು; ಪಟ್ಟೂರು ಶಿಕ್ಷಣ ಸಂಸ್ಥೆಯ ಸಂಚಾಲಕ ಸೇರಿ ಇಬ್ಬರು ಪಾರು

Suddi Udaya

ಅಳದಂಗಡಿ: ಪಾದಚಾರಿಗೆ ಕಾರು ಡಿಕ್ಕಿ:

Suddi Udaya

ಮದ್ದಡ್ಕ: ಕಿನ್ನಿಗೋಳಿ ಎಂಬಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ

Suddi Udaya
error: Content is protected !!