22.8 C
ಪುತ್ತೂರು, ಬೆಳ್ತಂಗಡಿ
April 4, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಪೋಟೋವನ್ನು ಆಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಆರೋಪ: ಮಹಿಳೆಯಿಂದ ಪೊಲೀಸ್ ದೂರು: ಆರೋಪಿ ಮೇಲೆ ಪ್ರಕರಣ ದಾಖಲು

ಹತ್ಯಡ್ಕ : ವಿಡಿಯೋ ಕಾಲ್ ಮೂಲಕ ಪೋಟೋವನ್ನು ಪಡೆದು ಅದನ್ನು ಆಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದಲ್ಲದೆ, ಕರೆಮಾಡಿ ದೈಹಿಕ ಸಂಪರ್ಕಕ್ಕೆ ಬರುವಂತೆ ಒತ್ತಾಯಿಸಿ, ಸಹಕರಿಸದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿ, ಮಹಿಳೆಯೋರ್ವರು ನೀಡಿದ ದೂರಿನಂತೆ ಹತ್ಯಡ್ಕ ಗ್ರಾಮದ ಕಾಪಿನಡ್ಕ ಎಂಬಲ್ಲಿಯ ನಿವಾಸಿ ಕೆ.ಕೆ ರಾಜ ಎಂಬಾತನ ಮೇಲೆ ಧರ್ಮಸ್ಥಳ ಠಾಣೆಯಲ್ಲಿ ಅ.15 ರಂದು ಪ್ರಕರಣ ದಾಖಲಾಗಿದೆ.


ನೊಂದ ಮಹಿಳೆ ನೀಡಿದ ದೂರಿನಲ್ಲಿ ಹತ್ಯಡ್ಕ ಗ್ರಾಮದ ಕಾಪಿನಡ್ಕ ಎಂಬಲ್ಲಿಯ ನಿವಾಸಿ ಕೆ.ಕೆ ರಾಜ ಎಂಬಾತ ವೀಡಿಯೋ ಕಾಲ್ ನ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ 2023 ಮೇ 29 ರಂದು ಸಾಮಾಜಿಕ ಜಾಲತಾಣದಲ್ಲಿ, ಹರಿಬಿಟ್ಟಿದ್ದು ಇದನ್ನು ತಾನು ಗಮನಿಸಿರಲಿಲ್ಲ. ಅಲ್ಲದೆ ಆರೋಪಿ ಮೊಬೈಲ್ ನನ್ನ ಮೊಬೈಲ್‌ಗೆ ಕರೆ ಮಾಡಿ ದೈಹಿಕ ಸಂಪರ್ಕಕ್ಕೆ ಬರುವಂತೆ ಒತ್ತಾಯಿಸಿದಲ್ಲದೆ, ದೈಹಿಕ ಸಂಪರ್ಕಕ್ಕೆ ಸಹಕರಿಸದೇ ಇದ್ದರೆ, ಒಬ್ಬಳೆ ಮನೆಯಲಿರುವ ಸಮಯ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆತನ ಮೇಲಿನ ಭಯದಿಂದ ಈ ವಿಚಾರವನ್ನು ನನ್ನ ಮನೆಯವರಿಗೆ ತಿಳಿಸಿರಲಿಲ್ಲ. ಆದರೆ ದೈಹಿಕ ಸಂಪರ್ಕಕ್ಕೆ ಸಹಕರಿಸದೇ ಇದ್ದರೆ, ನೀಲಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮಾನ ಕಳೆಯುವುದಾಗಿ ಬೆದರಿಕೆ ಹಾಕಿದ್ದ, ಇದರಿಂದ ಭಯಗೊಂಡು ಈ ವಿಚಾರವನ್ನು, ನಾನು ತಾಯಿ ಮತ್ತು ತಮ್ಮನಿಗೆ ತಿಳಿಸಿದ್ದು, ಆತ ಎಡಿಟ್ ಮಾಡಿ ಆಶ್ಲೀಲ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ನಂತರ ತಿಳಿದು ಬಂತು. ಆರೋಪಿ ಪದೇ ಪದೇ ರಾತ್ರಿ 9 ಗಂಟೆಯ ಬಳಿಕ ಬರುವಂತೆ ಒತ್ತಾಯಪಡಿಸಿ, ಬೆದರಿಕೆ ಹಾಕುತ್ತಿದ್ದು, ಆತನ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ದೂರನ್ನು ಸ್ವೀಕರಿಸಿದ ಧರ್ಮಸ್ಥಳ ಪೊಲೀಸರು ಆರೋಪಿಯ ಮೇಲೆ ಐಪಿಸಿ 1880 (U-354(1)(೦) 354(1)().354ಅ506)ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಬೆಳ್ತಂಗಡಿ ತ್ರಿ ಸ್ಟಾರ್ ವೈನ್ಸ್ ಶಾಪ್ ಮತ್ತು ಉಜಿರೆಯ ಮೊಬೈಲ್ ಶಾಪ್ ಕಳ್ಳತನ ಪ್ರಕರಣ: ಅಪ್ರಾಪ್ತ ಬಾಲಕ ಸೇರಿ ಇಬ್ಬರು ಕುಂದಾಪುರದಲ್ಲಿ ವಶಕ್ಕೆ

Suddi Udaya

ಹೆಪಾಟೈಟಿಷ್ ಬಿ” ಎಂಬ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ತೆಂಕಕಾರಂದೂರಿನ ಯುವಕ ಪತ್ನಿ, ತಾಯಿ, 2 ಚಿಕ್ಕ ಮಕ್ಕಳೊಂದಿಗಿರುವ ಮನೆಯ ಆಧಾರಸ್ತಂಭ ಗುರುರಾಜ್ ಹೆಗ್ಡೆಯವರ ಚಿಕಿತ್ಸೆಗೆ ನೆರವಾಗಿ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya

ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ವರ್ಗಾವಣೆ

Suddi Udaya

ಅ.31: ಅಳದಂಗಡಿಯಲ್ಲಿ ಶ್ರೀ ಮಹಾವೀರ ಮೆಡಿಕಲ್ಸ್ ಶುಭಾರಂಭ

Suddi Udaya

ಧರ್ಮಸ್ಥಳ: ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮ ಇದರ ವಸ್ತು ಪ್ರದರ್ಶನ ಮಳಿಗೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ರವರಿಂದ ಉದ್ಘಾಟನೆ

Suddi Udaya
error: Content is protected !!