ಬೆಳ್ತಂಗಡಿ: ಫೇಸ್ ಬುಕ್ ಜಾಲತಾಣದಲ್ಲಿ ಚಾರಿತ್ರ್ಯಕ್ಕೆ ಧಕ್ಕೆಯಾಗುವ ಬರಹಗಳನ್ನು ಬರೆದು, ಬೆದರಿಕೆ ಒಡ್ಡುವ ಮೇಸೆಜ್ ಹಾಕಿರುವವ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಉಜಿರೆ ಗ್ರಾಮದ ಪೆರ್ಲಗುತ್ತು ನಿವಾಸಿ ಶ್ರೀಮತಿ ಉಷಾ ಶಶಿಧರ ಶೆಟ್ಟಿಯವರು ಅ.21ರಂದು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಫೇಸ್ ಬುಕ್ ಜಾಲತಾಣದಲ್ಲಿ ಕುಮಾರಿ ಸೌಜನ್ಯ ಎಂಬ ಪೇಸ್ ಬುಕ್ ಖಾತೆಯ ಅಡ್ಮಿನ್‌ರವರು ಅ. 16 ರಂದು ತನ್ನ ಚಾರಿತ್ರ್ಯಕ್ಕೆ ಧಕ್ಕೆಯಾಗುವಂತಹ ಅಸಭ್ಯ ಮತ್ತು ಅಪಮಾನಿಸುವ ಬರಹಗಳನ್ನು ಬರೆಯಲಾಗಿದೆ. ಅ.19 ರಂದು ರಾಧಿಕಾ ಕಾಸರಗೋಡು ಎಂಬ ಫೇಸ್ ಬುಕ್ ಖಾತೆಯ ಅನಿತಾ ಶ್ಯಾನ್ ಬೋಗ್ ಎಂಬವರ ಖಾತೆಯಿಂದ ತನಗೆ ಮುಂದೆ ಇದೆ ಮಾರಿ ಹಬ್ಬ ಎಂಬ ಬೆದರಿಕೆ ಒಡ್ಡುವಂತಹ ಮೇಸೆಜ್ ಮಾಡಿರುತ್ತಾರೆ. ಪ್ರಕರಣ ಮುಂದುವರಿದಂತೆ ಅ.20 ರಂದು ಬೆಳಿಗ್ಗೆ ವ್ಯಕ್ತಿಯೋರ್ವ ತನ್ನ ಗಂಡನಿಗೆ ದೂರವಾಣಿ ಕರೆಮಾಡಿ “ನಿನ್ನ ಹೆಂಡತಿಯ ಬಗ್ಗೆ ಅವಮಾನಕಾರಿಯಾದ ಸಂದೇಶಗಳನ್ನು ಹಾಕುತ್ತೇವೆ, ಮುಂದಕ್ಕೆ ಮಹೇಶ್ ಶೆಟ್ಟಿ ಎಂಬವರ ವಿರುದ್ದವಾಗಿ ಮಾತನಾಡಬಾರದಾಗಿ ತಿಳಿಸಿ, ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಉಷಾ ಶಶಿಧರ್ ಶೆಟ್ಟಿಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ದೂರನ್ನು ಸ್ವೀಕರಿಸಿದ ಪೊಲೀಸರು ಕುಮಾರಿ ಸೌಜನ್ಯ ಹೆಸರಿನ ಫೇಸ್‌ಬುಕ್ ಪೇಜ್‌ನ ಎಡ್ಮಿನ್, ರಾಧಿಕ ಕಾಸರಗೋಡು ಫೇಸ್‌ಬುಕ್ ಪೇಜ್‌ನ ಅನಿತಾ ಮತ್ತು ಬೆದರಿಕೆ ಕರೆ ಮಾಡಿದ ಮೊಬೈಲ್ ನಂಬ್ರದ ಬಳಕೆ ಮಾಡುತ್ತಿರುವ ವ್ಯಕ್ತಿಯ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ ೧೦೨/೨೦೨೩, ಕಲಂ;೩೫೪(ಂ), ೩೫೪(ಆ),೫೦೪,೫೦೬ ಐಪಿಸಿ ಯಂತೆ ಪ್ರಕರಣ. ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ