26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ”ಮನಸ್ವಿನಿ” ಸಂಜೀವಿನಿ ಗ್ರಾ. ಪಂ. ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

ಬಳಂಜ: “ಮನಸ್ವಿನಿ” ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ(ರಿ) ಬಳಂಜ ಇದರ ವಾರ್ಷಿಕ ಮಹಾಸಭೆಯು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನ.10 ರಂದು ನಡೆಯಿತು.


ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು ,ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಪ್ರತಿಮಾ, ವಲಯ ಮೇಲ್ವಿಚಾರಕರಾದ ಸ್ವಸ್ತಿಕ್, ಪಂಚಾಯತ್ ಅಧ್ಯಕ್ಷರಾದ ಶೋಭಾ ಕುಲಾಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್, ಪಂಚಾಯತ್ ಉಪಾಧ್ಯಕ್ಷರು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಜೀವಿನಿ ಸದಸ್ಯ ಶ್ರೀಮತಿ ಪುಷ್ಪಾ-ಗಿರೀಶ್ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪಂಚಾಯತ್ ಅಧ್ಯಕ್ಷರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಪ್ರತಿಮಾರವರು ಎನ್ .ಆರ್ .ಎಲ್. ಎಮ್. ಯೋಜನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.

ಒಕ್ಕೂಟದ ನೂತನ ಅಧ್ಯಕ್ಷರು ಕಾರ್ಯದರ್ಶಿ ಕೋಶಾಧಿಕಾರಿ ಹಾಗೂ ಪದಾಧಿಕಾರಿಗಳ ಪದಗ್ರಹಣ ನಡೆಸಲಾಯಿತು. ಹಾಗೂ ಒಕ್ಕೂಟದ ಪದಾಧಿಕಾರಿಗಳನ್ನು ಗೌರವಿಸಲಾಯಿತು, ಪುಷ್ಪಗುಚ್ಛ ದೊಂದಿಗೆ ದಾಖಲಾತಿಗಳನ್ನು ನೀಡುವುದರ ಮೂಲಕ ಅಧಿಕಾರವನ್ನು ಹಸ್ತಾಂತರಿಸಲಾಯಿತು.

ಪುಷ್ಪಾ, ಸತೀಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಬ್ಯಾಂಕ್ ಸಖಿ ಸವಿತಾ ರವರು ಸ್ವಾಗತಿಸಿದರು. .ಎಂಬಿಕೆ ವಿಮಲಾ ರವರು ವರದಿ ಮಂಡನೆ ಮಾಡಿದರು .ನೂತನ ಕಾರ್ಯದರ್ಶಿ ಭಾರತೀಯವರು ಜಮಾ- ಖರ್ಚು ವರದಿ ಮಂಡಿಸಿದರು. ಎಲ್.ಸಿ.ಆರ್.ಪಿ, ಪೂರ್ಣಿಮಾ ಪಿ, ಪಶು ಸಖಿ ಪೂರ್ಣಿಮಾ ಕೆ ಸಹಕರಿಸಿದರು. ಸಂಜೀವಿನಿ ಸದಸ್ಯರು, ಸ್ತ್ರೀಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಅಲ್ಲದೆ ಉತ್ತಮ ಸೇವೆಗಾಗಿ ಸ್ವಚ್ಛ ಸೇನಾನಿಗಳಾದ ಭಾರತಿ ಹಾಗೂ ಸುಮಲತಾರವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು. ಮತ್ತು ಉತ್ತಮ ಮರುಪಾವತಿ ಹಾಗೂ ಉತ್ತಮ ನಿಯಮ ಪಾಲನೆಗಾಗಿ ಎರಡು ಸಂಘಗಳನ್ನು ಗೌರವಿಸಲಾಯಿತು. ಶ್ರೀಮತಿ ಶ್ರೀದೇವಿ ಧನ್ಯವಾದವಿತ್ತರು.

Related posts

ವಾಣಿಜ್ಯ ವಿಭಾಗದ ಅಂತರ್ ಕಾಲೇಜು ಸ್ಪರ್ಧೆ: ನಡ ಪದವಿ ಪೂರ್ವ ಕಾಲೇಜಿಗೆ ಬಹುಮಾನ

Suddi Udaya

ಉಜಿರೆ ಎಸ್‌ಡಿಎಂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ಮಹಿಳಾ ಟೇಬಲ್ ಟೆನ್ನಿಸ್ ಚಾಂಪಿಯನ್

Suddi Udaya

ನಾಟಿ ವೈದ್ಯ ಬಾಬು ಗೌಡ ಅಂಡೆಟ್ಟು ನಿಧನ

Suddi Udaya

ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಸದಸ್ಯರು ಎಸ್.ಎಸ್.ಎಲ್.ಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ, ಸಾಧಕರಿಗೆ ಸನ್ಮಾನ

Suddi Udaya

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣಕ್ಕೆಂದು ಮೀಸಲಾಗಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ: ಸರಕಾರವನ್ನು ತರಾಟೆಗೆ ತೆಗೆದುಕೊಂಡ ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌

Suddi Udaya

ಶಿಶಿಲ: ಗುಂಡಿಗಾಡು ನಿವಾಸಿ ದೇಜಮ್ಮ ನಿಧನ

Suddi Udaya
error: Content is protected !!