32.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆ

ಅರಸಿನಮಕ್ಕಿ : ಸಂಪೂರ್ಣವಾಗಿ ಶಿಲಾಮಯವಾಗಿ ನಿರ್ಮಾಣಗೊಂಡಿರುವ ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಬಳಿಯ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆಯು ಅ .23ರಂದು ಅರಿಕೆಗುಡ್ಡೆಯಲ್ಲಿ ನಡೆಯಿತು.

ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಪಿಲಿಕ್ಕಬೆಯವರು ಅಧ್ಯಕ್ಷತೆ ವಹಿಸಿ ಭಕ್ತರ ಸಹಕಾರದಿಂದ ಕ್ಷೇತ್ರದಲ್ಲಿ ಅತ್ಯಲ್ಪ ಅವಧಿಯಲ್ಲಿ ನಡೆದಿರುವ ಕೆಲಸ ಕಾರ್ಯಗಳ ಬಗ್ಗೆ, ಇನ್ನು ನಡೆಯಬೇಕಿರುವ ಕಾಮಗರಿಗಳ ಬಗ್ಗೆ ತಿಳಿಸಿ ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ಮಾಹಿತಿ ನೀಡಿ ಸಹಕಾರ ಯಾಚಿಸಿದರು.

ಸಭೆಯಲ್ಲಿ ಮಾರ್ಗದರ್ಶನ ನೀಡಿದ ಜಯರಾಮ ನೆಲ್ಲಿತ್ತಾಯರವರು ಶ್ರೀ ವನದುರ್ಗೆಯೇ ಭಕ್ತರಿಂದ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾಳೆ. ಹೊಸ ದೇವಾಲಯ ನಿರ್ಮಾಣವೆಂದರೆ ಅದು ಇತಿಹಾಸ ನಿರ್ಮಾಣದ ಕೆಲಸ. ಈ ಮಾತು ಇಲ್ಲಿ ಅಕ್ಷರಶಹ ನಿಜವಾಗಿದೆ. ಮುಂದಿನ ದಿನಗಳಲ್ಲಿ ಬ್ರಹ್ಮಕಲಶೋತ್ಸವ ಯಶಸ್ವಿಯಾಗಲು ಎಲ್ಲರೂ ಚುರುಕಿನಿಂದ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಾಮನ ತಾಮ್ಹನ್ ಕರ್ ರವರು ಮಾತನಾಡಿ, ಸಮರ್ಪಣಾ ಮನೋಭಾವದಿಂದ ಎಲ್ಲರೂ ಕೆಲಸ ಮಾಡಿದಲ್ಲಿ ಯಶಸ್ವಿಯಾಗಿ ಬ್ರಹ್ಮಕಲಶೋತ್ಸವ ನಡೆಸಲು ಸಾಧ್ಯ. ಈ ಸುಂದರ ದೇಗುಲದ ಬ್ರಹ್ಮಕಲಶೋತ್ಸವದಲ್ಲಿ ಪಾಲು ಪಡೆಯುತ್ತಿರುವುದು ನಮ್ಮ ಸೌಭಾಗ್ಯ ಎಂದರು.ಅಧ್ಯಕ್ಷರಾದ ಶ್ರೀರಂಗ ದಾಮಲೆಯವರು ಎಲ್ಲರ ಸಹಕಾರಕ್ಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷರಾದ ಪದ್ಮಯ ಬಾರಿಗ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂ. ಎಸ್., ಮಂಜುಳಾ ಕಾರಂತ್, ಮೋಹನ ಉಪಾಧ್ಯಯ, ಶ್ರೀಕರ ಭಿಡೆ, ತುಂಗ ಗೌಡ, ಊರಿನ ಅನೇಕ ಗಣ್ಯರು, ಆಡಳಿತ, ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಶ್ರೀರಂಗ ದಾಮಲೆ, ಕಾರ್ಯದರ್ಶಿಯಾಗಿ ಮುರಳೀಧರ ಶೆಟ್ಟಿಗಾರ್, ಸಹ ಕಾರ್ಯದರ್ಶಿಯಾಗಿ ನೀತಾ ಕಲ್ಲಕೋಟೆ, ಕೋಶಾಧಿಕಾರಿಯಾಗಿ ಕೇಶವ ರಾವ್ ನೆಕ್ಕಿಲು ಉಪಾಧ್ಯಕ್ಷರುಗಳಾಗಿ ಅಣ್ಣು ಗೌಡ ನಾವಳೆ, ನಾರಾಯಣ ಗೌಡ ಬರಮೇಲು, ರಾಮಕೃಷ್ಣ ಶೆಟ್ಟಿಗಾರ್ ಪಾಲೆಂಜ, ವಿಶ್ವನಾಥ ಆಚಾರ್ಯ ಸಂಕೇಶ, ಬಾಲಕೃಷ್ಣ ಶೆಟ್ಟಿ ಮುದ್ದಿಗೆ, ದಿನೇಶ್ ಕುಂಟಾಲಪಳಿಕೆ ಇವರುಗಳನ್ನು ಆಯ್ಕೆ ಮಾಡಲಾಯಿತು.

ಆಗಮಿಸಿದ ಎಲ್ಲರನ್ನೂ ಸಮಿತಿಯ ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಯಿತು.ಮುರಳೀಧರ ಶೆಟ್ಟಿಗಾರ್ ಸ್ವಾಗತಿಸಿ, ಕೇಶವ ರಾವ್ ನೆಕ್ಕಿಲ್ ವಂದಿಸಿದರು.ಆಸುಪಾಸಿನ ಗ್ರಾಮಗಳ ಧಾರ್ಮಿಕ ಮುಖಂಡರು, ವಿವಿಧ ಸಂಘ -ಸಂಸ್ಥೆಗಳ ಪ್ರಮುಖರನ್ನು ಕರೆದು ನವೆಂಬರ್ 5ರಂದು ಬೆಳಗ್ಗೆ 10 ಗಂಟೆಗೆ ಅರಿಕೆಗುಡ್ಡೆಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು.

Related posts

ಉಜಿರೆ ಶ್ರೀ ಧ.ಮಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಪಾದಯಾತ್ರಿಗಳಿಗೆ ಉಚಿತ ವೈದ್ಯಕೀಯ ಸೇವೆ: ಚಾರ್ಮಾಡಿ, ಮುಂಡಾಜೆ ಶಿಬಿರಗಳ ಉದ್ಘಾಟನೆ

Suddi Udaya

ಉಜಿರೆ: ಅನುಗ್ರಹ ಶಾಲಾ ವಾರ್ಷಿಕ ಕ್ರೀಡಾಕೂಟ

Suddi Udaya

ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ವತಿಯಿಂದ ಅಸಮರ್ಪಕ ಹಾಗೂ ಅವೈಜ್ಞಾನಿಕ ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಬೆಳ್ತಂಗಡಿಯಲ್ಲಿ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ

Suddi Udaya

ರೋಟರಿ ಕ್ಲಬ್ ಸುಬ್ರಮಣ್ಯ ಮತ್ತು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಮಣ್ಯ ವತಿಯಿಂದ ಐದು ಹಿರಿಯ ನಿವೃತ್ತ ಶಿಕ್ಷಕರಿಗೆ ಸನ್ಮಾನ

Suddi Udaya

ರಾಷ್ಟ ಮಟ್ಟದ ವಾಲಿಬಾಲ್ ಪಂದ್ಯಾಟ: ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆ ಪ.ಪೂ. ಕಾಲೇಜು ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya

ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ: ರೂ. 3.74 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ 10% ಡಿವಿಡೆಂಡ್

Suddi Udaya
error: Content is protected !!