ಮುಂಡಾಜೆ ಬಿ ಕಾರ್ಯಕ್ಷೇತ್ರ ದಲ್ಲಿ ಶ್ರೀ ಲಕ್ಷ್ಮಿ ಎಂಬ ನಾಮಕರಣದೊಂದಿಗೆ ಹೊಸ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆಯನ್ನು ಅಮೂಲ್ಯ ಅಕ್ಷರ ಸಾಕ್ಷರತಾ ಕೇಂದ್ರದ ಆಪ್ತ ಸಮಾಲೋಚಕಿಯಾದ ಶ್ರೀಮತಿ ಉಷಾ ರವರು ಉದ್ಘಾಟಿಸಿದರು.

ಅವರು ಒಂದು ಕುಟುಂಬ ಅಭಿವೃದ್ಧಿಯಾಗಬೇಕಾದರೆ ಅದರಲ್ಲಿ ಮಹಿಳೆಯ ಪಾತ್ರ ಮುಖ್ಯವಾಗಿದ್ದು ಮಾತ್ರಶ್ರೀ ಅಮ್ಮನವರು ಹಮ್ಮಿಕೊಂಡ ಈ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರು ಸಾಮಾಜಿಕವಾಗಿ ಮಾನಸಿಕವಾಗಿ ಸದೃಡರಾಗಲು ಹಲವಾರು ಮಾಹಿತಿಗಳನ್ನು ನೀಡಿ ಅವಳ ಪ್ರತಿಭೆಯನ್ನು ಗುರುತಿಸಲು ಕೇಂದ್ರವು ಉತ್ತಮ ವೇದಿಕೆಯಾಗಿದ್ದು ಕೇಂದ್ರದ ಸಭೆಯಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ಜ್ಞಾನ ವಿಕಾಸ ಸಮನ್ವಯಧಿಕಾರಿಯಾದ ಮಧುರಾರವರು ಜ್ಞಾನ ವಿಕಾಸ ಕೇಂದ್ರದ ಹುಟ್ಟು ಉದ್ದೇಶ ಸಭೆ ನಡೆಸುವ ರೀತಿಯ ಬಗ್ಗೆ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಅಕ್ಕುರವರು ವಹಿಸಿದ್ದು ಜ್ಞಾನ ವಿಕಾಸ ಸಂಯೋಜಕಿ ಶರ್ಮಿಳಾ ಸೇವಾಪ್ರತಿನಿಧಿ ಲೀಲಾವತಿ ಉಪಸ್ಥಿತರಿದ್ದರು.