27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಣಿಯೂರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕಣಿಯೂರು : ಮಕ್ಕಳಿಗೆ ಸಂಸ್ಕಾರಯುತವಾದಂಥಹ ಶಿಕ್ಷಣವನ್ನ ಕೊಡಬೇಕು, ಇಂದಿನ ಮಕ್ಕಳು ನಮ್ಮನ್ನು ನೋಡಿ ಕಲಿಯುವವರೇ ಹೊರತು ನಾವು ಹೇಳಿದ್ದನ್ನ ಕಲಿಯುವರಲ್ಲ. ಹಾಗಾಗಿ ನಾವು ಬದಲಾಗಬೇಕಾದ್ದು ಮನೆಯಲ್ಲಿ ನಾವು ಮಾತಾಡುವಂತ ಶಬ್ದದಲ್ಲಿ ನಮಗೆ ಎಚ್ಚರಿಕೆ ಇರಬೇಕು, ಮಗುವಿನ ಮೇಲೆ ನಾವು ತೋರಿಸುವಂತಹ ಪ್ರೀತಿ, ನಾವು ಉಡುವಂತಹ ಬಟ್ಟೆ-ಬರೆ ಹಾಗೂ ಆಹಾರ ಇವುಗಳೆಲ್ಲ ನಮ್ಮ ಮಕ್ಕಳ ಜೀವನವನ್ನ ರೂಪಿಸುವಲ್ಲಿ ಬಹಳ ಮುಖ್ಯವಾಗುತ್ತದೆ. ಜಾತಿ ಸಮುದಾಯಗಳ ಅಭಿವೃದ್ಧಿಯಾಗಬೇಕಾದರೆ ಸಮುದಾಯದ ಮಕ್ಕಳಿಗೆ ಶಿಕ್ಷಣವನ್ನ ಕೊಡಬೇಕು ಎಂದು ಕಣಿಯೂರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಜಗನ್ನಾಥ್ ಕುಲಾಲ್ ಹೇಳಿದರು.

ಮುಖ್ಯ ಅತಿಥಿ ವಕೀಲರಾದಂತಹ ಉದಯ್ ಕುಲಾಲ್ ಬಂದಾರು ಮಾತನಾಡಿ ಹಿರಿಯರು ನೀಡಿದ ಮಾರ್ಗದರ್ಶನವನ್ನು ಅನುಷ್ಠಾನ ಮಾಡುವುದು ನಮ್ಮ ಮುಖ್ಯ ಜವಾಬ್ದಾರಿಯಾಗಬೇಕು. ಅ.29ರಂದು ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ನಡೆಯುವ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ತಾವೆಲ್ಲ ಭಾಗಿಯಾಗಿ ಅದರ ಪ್ರಯೋಜನವನ್ನು ಪಡೆಯಬೇಕು ಎಂದರು.

ಇನ್ನೋರ್ವ ಮುಖ್ಯ ಅತಿಥಿ ರಿಪಬ್ಲಿಕ್ ಕನ್ನಡದ ವಿಡಿಯೋ ಜನರಲಿಸ್ಟ್ ದಿವಾಕರ ಮಲೆಂಗಲ್ ಮಾತನಾಡಿ ನಾನು ಬಾಲ್ಯದಲ್ಲಿರುವಾಗ ಹಣದ ಕೊರತೆಯಿಂದ ಯಕ್ಷಗಾನದ ತರಬೇತಿಯಿಂದ ವಂಚಿತನಾಗಿದ್ದೆ. ಆ ಉದ್ದೇಶದಿಂದಾಗಿ ನನ್ನ ಮಗನ ಹೆಸರಿನಲ್ಲಿ ರಿಷಿ ಫೌಂಡೇಶನ್ ನ ಮೂಲಕ ಉಚಿತ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದೇನೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಿಯೂರು ಸಂಘದ ಅಧ್ಯಕ್ಷರಾದ ಉಮೇಶ್ ಹೆಚ್ ವಹಿಸಿಕೊಂಡರು. ಸಂಯೋಜಕ ದಿನೇಶ್ ಅಂತರ, ಅಶೋಕ್ ಹಲೇಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸುಧೀರ್ ಕೆ.ಎನ್ ಸ್ವಾಗತಿಸಿ, ಯುವ ವೇದಿಕೆ ಅಧ್ಯಕ್ಷ ಅಶೋಕ್ ಬರಂಬು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕು.ನಿಶ್ಮಿತ ಪಿಲಿಗೂಡು ಹಾಗೂ ಕು.ಹರಿಣಾಕ್ಷಿ ಅಂತರ ಮಾಡಿದರು.

Related posts

ಅ. 6 -7: ಮೂಡಬಿದ್ರೆ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ ನಲ್ಲಿ “ಆಳ್ವಾಸ್ ಪ್ರಗತಿ” ಬೃಹತ್ ಉದ್ಯೋಗ ಮೇಳ: ಉದ್ಯೋಗಾಕಾಂಕ್ಷಿ ಯುವಕ- ಯುವತಿಯರು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು: ಶಾಸಕ ಹರೀಶ್ ಪೂಂಜ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮಾತೃಶ್ರೀ ಶ್ರೀಮತಿ ಅಮಣಿ ಶೆಟ್ಟಿ ನಿಧನ

Suddi Udaya

ಸಿರಿ ಸಂಸ್ಥೆಯ ಎಂ.ಡಿ. ಕೆ.ಎನ್ ಜನಾರ್ಧನರವರಿಗೆ ‘ಪ್ರತಿಷ್ಠಿತ ಮಹಾತ್ಮಗಾಂಧಿ ಸದ್ಭಾವನಾ ಅಂತಾರಾಷ್ಟ್ರೀಯ ಪ್ರಶಸ್ತಿ’: ಸಿರಿ ಸಿಬ್ಬಂದಿಗಳಿಂದ ಅಭಿನಂದನಾ ಕಾರ್ಯಕ್ರಮ

Suddi Udaya

ಶಿರಾಡಿ ಘಾಟ್ ಚೆಕ್ ಪೋಸ್ಟ್ ಬಳಿ ಸರಣಿ ಅಪಘಾತ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ -ಸ್ಪೆಷಾಲಿಟಿ ಆಸ್ಪತ್ರೆ ದಶಮಾನೋತ್ಸವ ಸಂಭ್ರಮಾಚರಣೆ

Suddi Udaya

ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ರಾಜ ಕೇಸರಿ ಸಂಘಟನೆ ವತಿಯಿಂದ ಬೆಳ್ತಂಗಡಿ ಆಸ್ಪತ್ರೆಯ ಹೊರಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!