ಉಜಿರೆ : ಕರಿಗಂಧ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಅಣಬೆ ಬೇಸಾಯ ಪ್ರಾತ್ಯಕ್ಷಿಕೆಯ ತರಬೇತಿ

Suddi Udaya

ಉಜಿರೆ : ಕರಿಗಂಧ ಸೇವಾ ಟ್ರಸ್ಟ್ ಉಜಿರೆ ಇದರ ಆಶ್ರಯದಲ್ಲಿ ಒಂದು ದಿನದ ಅಣಬೆ ಬೇಸಾಯ ಪ್ರಾತ್ಯಕ್ಷಿಕೆಯ ತರಬೇತಿ ಯು ಗ್ರಾಮ ಪಂಚಾಯತ್ ಉಜಿರೆ ಯ ಸಂಜೀವಿನಿ ಸಭಾಭವನದಲ್ಲಿ ಅ. 22 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ಉಷಾಕಿರಣ್ ನೆರವೇರಿಸಿ ಕಾರ್ಯಕ್ರಮವನ್ನ ಉದ್ದೇಶಿಸಿ ಸೇವಾ ಟ್ರಸ್ಟ್ ನ “ಬನ್ನಿ ಕೈ ಜೋಡಿಸಿ ಅಶಕ್ತರಿಗೆ ಆಸರೆಯಾಗೋಣ ” ಎಂಬ ಸಂದೇಶವು ಪ್ರತೀಯೊಬ್ಬರಲ್ಲು ಮನಮುಟ್ಟುವ ರೀತಿಯಲ್ಲಿದೆ ಇಂತಹ ಸೇವೆಮಾಡುವ ಟ್ರಸ್ಟ್ ಗಳಿಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹಿತವಚನಗಳನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಜಿರೆಯ ಮಾಜಿ ಅದ್ಯಕ್ಷ ಶ್ರೀನಿವಾಸ್ ಕೆ , ಗ್ರಾಮ ಪಂಚಾಯತ್ ಉಜಿರೆಯ ಸಿಬ್ಬಂದಿ ನಾಗೇಶ್ ಪೆರ್ಲ, ಕರಿಗಂಧ ಸೇವಾ ಟ್ರಸ್ಟ್ ನ ಸಂಚಾಲಕರಾದ ಕಿರಣ್ ಉಜಿರೆ ತರಬೇತಿಯನ್ನು ಉದ್ದೇಶಿಸಿ ಅಣಬೆ ಬೇಸಾಯ ಪ್ರಾತ್ಯಕ್ಷಿಕೆಯ ತರಬೇತಿಯ ನಂತರದ ಅಣಬೆ ಬೆಳೆಯುವುದು ಮತ್ತು ಮಾರಾಟದ ವ್ಯವಸ್ಥೆಯನ್ನು ಟ್ರಸ್ಟ್ ನ ಮೂಲಕ ನಡೆಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಭರತ್, ಉಜಿರೆ ಗ್ರಾಮ ಪಂಚಾಯತ್ ನ ಸದಸ್ಯ ದಿನೇಶ್ ಉಜಿರೆ ಮೈತ್ರಿ ಫ್ರೆಂಡ್ಸ್ ಕ್ಲಬ್ ಗಾಂಧಿನಗರದ ಅದ್ಯಕ್ಷರಾದ ರವಿ ಜೆ ಯವರು ಹಾಗೂ ಅಣಬೆ ಬೇಸಾಯ ತರಬೇತಿಯ ತರಬೇತುದಾರರಾದ ಸುಲೈಮಾನ್ ಬೆಳಾಲು ರವರು ಉಪಸ್ಥಿತರಿದ್ದರು .

ವಿಟ್ಲ,ಪುತ್ತೂರು,ಕಾರ್ಕಳ, ಮೂಡುಬಿದಿರೆ, ಬೆಳ್ತಂಗಡಿ, ಹೀಗೆ ನಾನಾ ಊರಿನ ಆಸಕ್ತರು ತರಬೇತಿಯ ಸದುಪಯೋಗ ಪಡೆದುಕೊಂಡರು.

Leave a Comment

error: Content is protected !!