23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಕೊಕ್ಕಡ: ಒಟಿಪಿ ಪಡೆದು ಖಾತೆಯಿಂದ ರೂ.1.46 ಲಕ್ಷ ವಂಚನೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕೊಕ್ಕಡ: ಬ್ಯಾಂಕಿನವರು ವ್ಯವಹರಿಸುವ ರೀತಿಯಲ್ಲಿ ವ್ಯವಹರಿಸಿ ಒಟಿಪಿ ಪಡೆದುಕೊಂಡು ಖಾತೆಯಿಂದ ರೂ.1,46,900 ವರ್ಗಾಯಿಸಿಕೊಂಡು ಮೋಸ ಮಾಡಿರುವ ಬಗ್ಗೆ ಕೊಕ್ಕಡದ ಮಹಿಳೆಯೋರ್ವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಕ್ಕಡ ನಿವಾಸಿ ಹರಿಣಿ (40ವ.) ಮೋಸ ಹೋದ ಮಹಿಳೆ. ಹರಿಣಿ ಅವರು 1 ವಾರದ ಹಿಂದೆ ಜಮೀನು ಮಾರಾಟದ ಹಣವನ್ನು ಬ್ಯಾಂಕಿನಲ್ಲಿ ಜಮೆ ಮಾಡಿದ್ದರು. ಬ್ಯಾಂಕಿನವರು ವ್ಯವಹರಿಸುವ ರೀತಿಯಲ್ಲಿಯೇ ಹರಿಣಿಯವರ ಜೊತೆಗೆ ಯಾರೋ ಅಪರಿಚಿತರು ವ್ಯವಹರಿಸಿ ಅ.21ರಂದು ಒಟಿಪಿ ಕೇಳಿ ಪಡೆದುಕೊಂಡು ಹರಿಣಿಯವರ ಖಾತೆಯಿಂದ ರೂ.1,46,900 ವರ್ಗಾಯಿಸಿ ಮೋಸ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಹರಿಣಿಯವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 82/2023, ಕಲಂ:419, 420 ಐಪಿಸಿ ಮತ್ತು ಕಲಂ 66(ಸಿ) 66(ಡಿ) ಐಟಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

Related posts

ಉಜಿರೆ: ಮಾಶಾಸನ ಮಂಜೂರಾತಿ ಪತ್ರ ವಿತರಣೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವಿದ್ಯಾರ್ಥಿ ಕವಿಗೋಷ್ಠಿ

Suddi Udaya

ಬ್ರಹ್ಮ ಕ್ಷೇತ್ರ ದೇವರ ಸನ್ನಿದಾನ ಮುಗುಳಿ ಬಸದಿಯಲ್ಲಿ ಸ್ವಚ್ಛತಾ ಶ್ರಮದಾನ

Suddi Udaya

ಉಜಿರೆ ಎಸ್ ಡಿ.ಎಂ. ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕರಾಗಿ ಸುರೇಶ ಕೆ ರವರು ಅಧಿಕಾರ ಸ್ವೀಕಾರ    

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತಾ ಅಭಿಯಾನ: ಶ್ರೀ ಮಂ. ಅ.ಪ್ರೌ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯನ್ನು ಶೀಘ್ರ ದುರಸ್ಥಿಗೆ ಆಗ್ರಹಿಸಿ ರಸ್ತೆ ತಡೆದು ಎಸ್.ಡಿ.ಪಿ.ಐ ಪ್ರತಿಭಟನೆ

Suddi Udaya
error: Content is protected !!