25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಫೇಸ್‌ಬುಕ್ ಜಾಲತಾಣದಲ್ಲಿ ಮಹಿಳೆಗೆ ಚಾರಿತ್ರ್ಯಕ್ಕೆ ಧಕ್ಕೆಯಾಗುವ ಬರಹ ಬೆದರಿಕೆ ಆರೋಪ : ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಫೇಸ್ ಬುಕ್ ಜಾಲತಾಣದಲ್ಲಿ ಚಾರಿತ್ರ್ಯಕ್ಕೆ ಧಕ್ಕೆಯಾಗುವ ಬರಹಗಳನ್ನು ಬರೆದು, ಬೆದರಿಕೆ ಒಡ್ಡುವ ಮೇಸೆಜ್ ಹಾಕಿರುವವ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಉಜಿರೆ ಗ್ರಾಮದ ಪೆರ್ಲಗುತ್ತು ನಿವಾಸಿ ಶ್ರೀಮತಿ ಉಷಾ ಶಶಿಧರ ಶೆಟ್ಟಿಯವರು ಅ.21ರಂದು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಫೇಸ್ ಬುಕ್ ಜಾಲತಾಣದಲ್ಲಿ ಕುಮಾರಿ ಸೌಜನ್ಯ ಎಂಬ ಪೇಸ್ ಬುಕ್ ಖಾತೆಯ ಅಡ್ಮಿನ್‌ರವರು ಅ. 16 ರಂದು ತನ್ನ ಚಾರಿತ್ರ್ಯಕ್ಕೆ ಧಕ್ಕೆಯಾಗುವಂತಹ ಅಸಭ್ಯ ಮತ್ತು ಅಪಮಾನಿಸುವ ಬರಹಗಳನ್ನು ಬರೆಯಲಾಗಿದೆ. ಅ.19 ರಂದು ರಾಧಿಕಾ ಕಾಸರಗೋಡು ಎಂಬ ಫೇಸ್ ಬುಕ್ ಖಾತೆಯ ಅನಿತಾ ಶ್ಯಾನ್ ಬೋಗ್ ಎಂಬವರ ಖಾತೆಯಿಂದ ತನಗೆ ಮುಂದೆ ಇದೆ ಮಾರಿ ಹಬ್ಬ ಎಂಬ ಬೆದರಿಕೆ ಒಡ್ಡುವಂತಹ ಮೇಸೆಜ್ ಮಾಡಿರುತ್ತಾರೆ. ಪ್ರಕರಣ ಮುಂದುವರಿದಂತೆ ಅ.20 ರಂದು ಬೆಳಿಗ್ಗೆ ವ್ಯಕ್ತಿಯೋರ್ವ ತನ್ನ ಗಂಡನಿಗೆ ದೂರವಾಣಿ ಕರೆಮಾಡಿ “ನಿನ್ನ ಹೆಂಡತಿಯ ಬಗ್ಗೆ ಅವಮಾನಕಾರಿಯಾದ ಸಂದೇಶಗಳನ್ನು ಹಾಕುತ್ತೇವೆ, ಮುಂದಕ್ಕೆ ಮಹೇಶ್ ಶೆಟ್ಟಿ ಎಂಬವರ ವಿರುದ್ದವಾಗಿ ಮಾತನಾಡಬಾರದಾಗಿ ತಿಳಿಸಿ, ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಉಷಾ ಶಶಿಧರ್ ಶೆಟ್ಟಿಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ದೂರನ್ನು ಸ್ವೀಕರಿಸಿದ ಪೊಲೀಸರು ಕುಮಾರಿ ಸೌಜನ್ಯ ಹೆಸರಿನ ಫೇಸ್‌ಬುಕ್ ಪೇಜ್‌ನ ಎಡ್ಮಿನ್, ರಾಧಿಕ ಕಾಸರಗೋಡು ಫೇಸ್‌ಬುಕ್ ಪೇಜ್‌ನ ಅನಿತಾ ಮತ್ತು ಬೆದರಿಕೆ ಕರೆ ಮಾಡಿದ ಮೊಬೈಲ್ ನಂಬ್ರದ ಬಳಕೆ ಮಾಡುತ್ತಿರುವ ವ್ಯಕ್ತಿಯ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ ೧೦೨/೨೦೨೩, ಕಲಂ;೩೫೪(ಂ), ೩೫೪(ಆ),೫೦೪,೫೦೬ ಐಪಿಸಿ ಯಂತೆ ಪ್ರಕರಣ. ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

Related posts

ಮದ್ದಡ್ಕ: ಸಬರಬೈಲುನಲ್ಲಿ ಹೊಂಡಕ್ಕೆ ಬಿದ್ದ ಲಾರಿ‌

Suddi Udaya

ಪುದುವೆಟ್ಟು ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಅಕ್ರಮ ಮದ್ಯ ಮಾರಾಟಕ್ಕೆ ಯತ್ನ: ಧರ್ಮಸ್ಥಳ ಪೊಲೀಸರಿಂದ ದಾಳಿ ಆರೋಪಿಯ ಬಂಧನ

Suddi Udaya

ಬೆನ್ನುಹುರಿ ಅಪಘಾತಕ್ಕೆ ಒಳಾಗದವರಿಗೆ ರೂ. 5 ಸಾವಿರ ಮಾಸಾಶನ ನೀಡಲು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾ‌ರ್ ಆಗ್ರಹ

Suddi Udaya

ಗುರುವಾಯನಕೆರೆ ಶಕ್ತಿನಗರ ಸರ್ಕಲ್ ನಲ್ಲಿ ಬೆಳ್ತಂಗಡಿ ಮಾಜಿ ಶಾಸಕ ದಿ| ಕೆ ವಸಂತ ಬಂಗೇರ ರವರ ಪ್ರತಿಮೆಯನ್ನು ಸ್ಥಾಪಿಸುವಂತೆ ಕುವೆಟ್ಟು ಗ್ರಾ.ಪಂ. ಗೆ ಮನವಿ

Suddi Udaya

ಕಡಿದು ಬಿದ್ದ ವಿದ್ಯುತ್ ತಂತಿ, ಬೈಕ್ ಸವಾರರು ಪಾರು

Suddi Udaya
error: Content is protected !!