22.8 C
ಪುತ್ತೂರು, ಬೆಳ್ತಂಗಡಿ
April 4, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಇಳಂತಿಲದಲ್ಲಿ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

ಇಳಂತಿಲ : ಇಳಂತಿಲ ಗ್ರಾಮದ ಪೆದಮಲೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಕರಾಯ ಗ್ರಾಮದ ಸಗುಣ ಎಂಬವರು ಮೃತಪಟ್ಟಿದ್ದು, ಮೃತರ ಪತ್ನಿ ಕರಾಯ ಗ್ರಾಮದ ಅಂಗಾರು ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇಳಂತಿಲ ಗ್ರಾಮದ ಪೆದಮಲೆ ಎಂಬಲ್ಲಿ ಜಯಂತ ಕುಮಾರ್ ಎಂಬವರ ಮನೆಯ ಕೆಲಸಕ್ಕೆ ತೆರಳಿ ಅವರ ಮನೆಯ ಸಮೀಪದ ಗುಡ್ಡದಲ್ಲಿ ಕೆಲಸ ಮಾಡುತ್ತಿದ್ದಾಗ ಪೊದೆಗಳ ನಡುವೆ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿರುವುದನ್ನು ಸ್ಪರ್ಶಿಸಿದ ಅಂಗಾರು ಅವರ ಪತಿ ಸಗುಣರವರು ವಿದ್ಯುತ್ ಪ್ರವಹಿಸಿ ಬಿದ್ದಿದ್ದಾರೆ. ಅವರನ್ನು ಅಲ್ಲಿದ್ದವರು ಆರೈಕೆ ಮಾಡಿ ಬಳಿಕ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಸಗುಣರವರನ್ನು ಪರೀಕ್ಷಿಸಿದಾಗ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮೆಸ್ಕಾಂ ಇಲಾಖೆಯವರ ನಿರ್ಲಕ್ಷತನದಿಂದ ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಯ ಬಗ್ಗೆ ಯಾವುದೇ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಹಾಗೂ ಅಂಗಾರು ಮತ್ತು ಅವರ ಪತಿ ಸಗುಣರವರನ್ನು ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಯಿರುವ ಸ್ಥಳದಲ್ಲಿ ಕೆಲಸಕ್ಕೆ ನೇಮಿಸಿ ಕೆಲಸ ಮಾಡಿಸಿರುವ ಬಗ್ಗೆ ಜಯಂತ ಕುಮಾರ್‌ರವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 148/2023ರಂತೆ ಕಲಂ 304(ಎ) ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Related posts

ಬೆಳಾಲು: ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಆಟೋ ಚಾಲಕ ವಿಶ್ವನಾಥ್ ಗೌಡ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಬೆಳ್ತಂಗಡಿ ಬಂಟರ ಸಂಘದ ಮಡಂತ್ಯಾರು ವಲಯದ ಸಭೆ :ಗ್ರಾಮ ಸಮಿತಿ ರಚನೆ

Suddi Udaya

ಬೆಳಾಲು ಪ್ರೌಢಶಾಲೆಯ ಮಕ್ಕಳಿಗೆ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ:ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಬೇಸಾಯದ ಪಾಠ

Suddi Udaya

ಮುಂಡಾಜೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ, ಆಟಿ ತಿನಿಸಿನ ಸಹಭೋಜನ, ಆಟಿಕಳೆಂಜ ಪ್ರದರ್ಶನ

Suddi Udaya

ಉಜಿರೆ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಯ‌ ಖಾತೆಯಿಂದ ರೂ. 3.14ಲಕ್ಷ ನಗದು ಅಪಹರಣ

Suddi Udaya

ಫೆ.8: ಉಜಿರೆ-ಬೆಳ್ತಂಗಡಿ ಟಿಬಿ ಕ್ರಾಸ್‌ನಲ್ಲಿ ಮಹಾಗಣಪತಿ ಗ್ರಾನೈಟ್ಸ್ & ಟೈಲ್ಸ್ ಶುಭಾರಂಭ

Suddi Udaya
error: Content is protected !!